Friday October 20 2017

Follow on us:

Contact Us

ಕೃಷ್ಣಾಪುರದಲ್ಲಿ ಅಕ್ಟೋಬರ್ 22 ಕ್ಕೆ ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರ

ನ್ಯೂಸ್ ಕನ್ನಡ ವರದಿ-(20.10.17): ಸ್ಪೋರ್ಟಿಂಗ್ ಕ್ಲಬ್ (ರಿ) ಕೃಷ್ಣಾಪುರ ಇದರ ಹದಿನೇಳನೇ  ವಾರ್ಷಿಕೋತ್ಸವದ ಅಂಗವಾಗಿ  ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್  ಆಸ್ಪತ್ರೆ ಕಂಕನಾಡಿ ಮಂಗಳೂರು ಇದರ ಸಹಯೋಗದೊಂದಿಗೆ ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ  22   ಅಕ್ಟೋಬರ್  2017 ನೇ ಭಾನುವಾರದಂದು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 2:00  ರ ತನಕ ಸರಕಾರಿ ಪದವಿ ಪೂರ್ವ ಕಾಲೇಜು ಕಾಟಿಪಳ್ಳ 7 ನೇ ಬ್ಲಾಕ್ ಕೃಷ್ಣಾಪುರದಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮವನ್ನು ಅಡ್ವೋಕೇಟ್ ಹಾಗೂ ನೋಟರಿ ಜನಾಬ್ ಮುಹಮ್ಮದ್ ಇಸ್ಮಾಯಿಲ್.ಜಿ ರವರ ಘನ ಅಧ್ಯಕ್ಷತೆಯಲ್ಲಿ ಬದ್ರಿಯಾ ಜುಮಾ ಮಸೀದಿ ಕೃಷ್ಣಾಪುರ ಇದರ ಖತೀಬರಾದ ಜನಾಬ್ ಫಾರೂಕ್ ಸಖಾಫಿ ಇವರ ದುವಾಶೀರ್ವಚನದೊಂದಿಗೆ,ಮಂಗಳೂರು ಉತ್ತರ ವಲಯದ ಶಾಸಕರಾದ ಜನಾಬ್ ಬಿ.ಎ.ಮೊಯಿದೀನ್ ಬಾವಾ ರವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜನಾಬ್ ಬಿ.ಎಂ.ಅಬೂಬಕ್ಕರ್,ಜನಾಬ್ ಬಿ.ಎಂ.ಹುಸೈನ್,ಜನಾಬ್ ಅಯಾಝ್,ಶ್ರೀ ತಿಲಕ ರಾಜ್,ಶ್ರೀ ಮಂಜುನಾಥ್,ಶ್ರೀ ಚೆಲುವರಾಜ್,ಜನಾಬ್ ಮಹಮ್ಮದ್ ರಫೀಕ್,ಜನಾಬ್ ಟಿ.ಎಂ.ಅಬೂಬಕ್ಕರ್,ಜನಾಬ್ ಹಕೀಮ್ ಫಾಲ್ಕನ್,ಜನಾಬ್ ಸಾದಿಕ್,ಜನಾಬ್ ನಿಝಾಮ್ ತೋಕೂರು,ಜನಾಬ್ ಸಾದಿಕ್ ಪಾವೂರು,ಜನಾಬ್ ಫೈಝಲ್ ಮಂಚಿ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜನಾಬ್ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅ.23ರಿಂದ ಕುಷ್ಠರೋಗ ಪ್ರಕರಣಗಳ ಪತ್ತೆ ಅಭಿಯಾನ

ಮುಂದಿನ ಸುದ್ದಿ »

ಹಿಂದಿನವರು ಸಾಕಷ್ಟು ಸಾಧನೆ ಮಾಡಿದ ಕಾರಣದಿಂದಲೇ ದೇಶ ಇಂದು ಈ ಸ್ಥಿತಿಯಲ್ಲಿದೆ: ಮೋದಿಗೆ ಖರ್ಗೆ ತಿರುಗೇಟು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×