Tuesday September 8 2015

Follow on us:

Contact Us

ಪ್ರಜ್ಞಾವಂತ ಸಮಾಜಕ್ಕೊಂದು ಮಾದರಿ “ವಿಕಾಸ್ ಭಾರತ್” ವಾಟ್ಸಾಪ್ ತಂಡ

ಮಂಗಳೂರಿನ ಓಮೆಗಾ ಆಸ್ಪತ್ರೆಯಲ್ಲಿ ದೀಕ್ಷಾ ಎಂಬ ಹೆಣ್ಣು ಮಗು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಷಯ ತಿಳಿದ “ವಿಕಾಸ್ ಭಾರತ್” ವಾಟ್ಸಾಪ್ ಗೆಳೆಯರ ತಂಡ ಆಸ್ಪತ್ರೆಗೆ ಬೇಟಿ ನೀಡಿ ತನ್ನ ಸದಸ್ಯರಿಂದ ಸಂಗ್ರಹಿಸಿದ ಇಪ್ಪತ್ತೈದು ಸಾವಿರ ರೂಪಾಯಿಯ ಚೆಕ್ ಅನ್ನು ಮಗುವಿನ ಪಾಲಕರಿಗೆ ಹಸ್ತಾಂತರಿಸಿ ಶೀಘ್ರ ಚೇತರಿಸುವಂತೆ  ಹಾರೈಸಿತು.ಬಡವರ ಅಸಹಾಯಕರ ಬಗೆಗೆ ಕಾಳಜಿಯಿಟ್ಟು ತಮ್ಮ ಕೈಯಿಂದಾಗುವ ಸಹಾಯ ಹಸ್ತ ಚಾಚುವ ವಿಕಾಸ್ ಭಾರತ್ ತಂಡ   ಬಹಳಷ್ಟು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.

ಮಸ್ಕತ್, ಮುಂಬೈ ,ದುಬೈ ಹೀಗೆ ವಿವಿಧ ಕಡೆ ಉದ್ಯೋಗದಲ್ಲಿರುವ ದಕ್ಷಿಣ ಕನ್ನಡದ ಯುವಕರು,ಗೆಳೆತನಕ್ಕಾಗಿ ಪ್ರಾರಂಭಿಸಿದ ವಾಟ್ಸಾಪ್ ಗ್ರೂಪ್ ಅನ್ನು ಸದುಪಯೋಗಪಡಿಸಿ ಅಸಹಾಯಕರ ಕಣ್ಣೀರ ಕರೆಗೆ ಓಗೊಡುವ ತಂಡದ ಸದಸ್ಯರು .ಬಡ ಕುಟಂಬದ ಪ್ರತಿಭಾವಂತ ವಿಧ್ಯಾರ್ಥಿಗಳ,ರೋಗಿಗಳ ನೆರವಿಗೆ ಧಾವಿಸಿದ್ದೇ ಅಲ್ಲದೆ ಶಿಕ್ಷಕರ ಕೊರತೆ ಎದುರಿಸುತ್ತಿದ್ದ ಬೆಳ್ಮಣ್ ನ ಶಾಲೆಯೊಂದರ ಓರ್ವ ಶಿಕ್ಷಕಿಯ ಸಂಬಳದ ಜವಾಬ್ದಾರಿ ವಹಿಸಿಕೊಂಡಿರುವ ಸಂತಸದ ಬಗ್ಗೆಯೂ ತಂಡದ ಸದಸ್ಯ -ಪ್ರಶಾಂತ್ ಶೆಟ್ಟಿ ಪಲಿಮಾರು ವಿವರಿಸುತ್ತಾರೆ. ಖಂಡಿತ ಇದೊಂದು ಸಣ್ಣ ಮೊತ್ತವೇ ಆಗಿರ ಬಹುದು.ಆದರೆ ಮಾನವೀಯತೆಗೆ ಮಿಡಿಯುವ ಇನ್ನಷ್ಟ್ಟು ಕೈಗಳು ಮುಂದೆ ಬಂದರೆ ಆ ಮೊತ್ತ ಇನ್ನಷ್ಟ್ಟು ದೊಡ್ಡದಾಗಿ ಚಿಕಿತ್ಸೆಯ ವೆಚ್ಚ ಭರಿಸಲಾಗದ ಆ ಕುಟುಂಬದ ಕಣ್ಣೀರು  ಒರೆಸುವಲ್ಲಿ ಬಹು ಮುಖ್ಯ ಪಾತ್ರ ವಹಿಸ ಬಹುದು ಅಲ್ಲವೇ ? ಎಂದು ಅವರು ತಮ್ಮ ತಂಡದ  ಪ್ರಾಮಾಣಿಕ ಕಳಕಳಿಯನ್ನು ಮುಂದಿಡುತ್ತಾರೆ.

ಸದಾ ಒಂದರ ಹಿಂದೆ ಒಂದರಂತೆ ಬಡ ಕುಟುಂಬಗಳನ್ನು ಗುರುತಿಸಿ ಆಶಕ್ತರ ನೆರವಿಗೆ ಧಾವಿಸುವ ವಿಕಾಸ್ ಭಾರತ್ ನಂತಹ ಸಾಮಾಜಿಕ ಕಳಕಳಿಯುಳ್ಳ ಯುವಕರ ಪಡೆ ಈ ಪ್ರಜ್ಞಾವಂತ ಸಮಾಜಕ್ಕೊಂದು ಮಾದರಿ.ವಾಟ್ಸಪ್ ಮೂಲಕ ಒಂದಾಗಿ ಸಮಾನ ಮನಸ್ಕರೊಂದಿಗೆ ಜತೆಗೂಡಿ ಆಶಕ್ತರ ನೆರವಿಗೆ ಧಾವಿಸುವುದು ಎನಿಸಿದಷ್ಟ್ಟು ಸುಲಭವಲ್ಲ. ಆದರೆ ವಿಕಾಸ್ ಭಾರತ್ ತನ್ನ ಎಂಟು ಪ್ರತ್ಯೇಕ ತಂಡಗಳನ್ನು ವಾಟ್ಸಪ್ ನಲ್ಲಿ ರಚಿಸಿ ಆ ಮೂಲಕ ಆಶಕ್ತರ ನೆರವಿಗೆ ಧಾವಿಸುತ್ತದೆ ಎಂದಾದರೆ ಈ ದೇಶದ ಯುವ ಶಕ್ತಿ ನಿಷ್ಕ್ರೀಯವಾಗಿಲ್ಲಎಂದೇ ಅರ್ಥ. ಯುವ ಮನಸ್ಸುಗಳನ್ನು ಪ್ರೋತ್ಸಾಹಿಸುವ ಕೈಗಳು ಮತ್ತು ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸುವ ಪ್ರೇರಕರು ಬೇಕು ಅಷ್ಟೇ.
  ಆಲ್ ದಿ ಬೆಸ್ಟ್ ವಿಕಾಸ್ ಭಾರತ್…!

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬ್ಯಾಂಕಾಕ್ : ಹಾಡುಹಗಲೇ ಗೋಚರಿಸಿದ ಅದ್ಭುತ ಪ್ರಕಾಶಮಾನ ಉಲ್ಕೆ!

ಮುಂದಿನ ಸುದ್ದಿ »

ಭೂಗತ ಪಾತಕಿ ಬನ್ನಂಜೆ ರಾಜ ಮತ್ತೆ ಪೊಲೀಸ್ ಕಸ್ಟಡಿಗೆ

ಸಿನೆಮಾ

 • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

  August 23, 2017

  ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

  Read More
 • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

  August 22, 2017

  ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

  Read More
 • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

  August 21, 2017

  ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

  Read More
 • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

  August 16, 2017

  ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×