Tuesday January 10 2017

Follow on us:

Contact Us
Beary nikah Helpline4

ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ಸಮಾಲೋಚನಾ ಸಭೆ: ವರದಕ್ಷಿಣೆ ರಹಿತ ವಿವಾಹದ ಬಗ್ಗೆ ಹಲವು ನಿರ್ಣಯ

ನ್ಯೂಸ್ ಕನ್ನಡ ವರದಿ(10.01.2017)-ಉಡುಪಿ: ಮುಸ್ಲಿಮ್  ಸಮುದಾಯದಲ್ಲಿ ವರದಕ್ಷಿಣೆ ರಹಿತ ಮದುವೆಗೆ ಪಣತೊಟ್ಟಿರುವ ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ತಂಡದ ಸಮಾಲೋಚನಾ ಸಭೆಯು ಪಡುಬಿದ್ರೆಯ ನವರಂಗ್ ಹೋಟೆಲ್ ನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಬಿ.ಎಂ.ಎಚ್ ಇದರ ಕಾರ್ಯದರ್ಶಿ ಎಂ.ಎಚ್.ಎಂ ಖಲಂದರ್ ರಜ್ವಿ ಬೆಜ್ಜವಲ್ಲಿ ಮಾತನಾಡಿ , ಮದುವೆಯಾಗುವ ಯುವಕ ಹಾಗೂ ಆತನ ಪೋಷಕರು ನಿರ್ಧರಿಸಿದಲ್ಲಿ ವರದಕ್ಷಿಣೆ ಅನ್ನುವ ಮಹಾ ಪಿಡುಗನ್ನು ತೊಲಗಿಸಲು ಸಾಧ್ಯವಿದೆ. ಹೆಣ್ಣಿನ ಕಣ್ಣೀರಿನ ಹಣವನ್ನು ವರದಕ್ಷಿಣೆ ರೂಪದಲ್ಲಿ ಪಡೆದು ವಿವಾಹವಾಗುವುದು ಇದು ಇಸ್ಲಾಮಿನ ಸಂಪ್ರದಾಯವಲ್ಲದಿದ್ದರೂ ವಿವಿಧ ರೂಪಗಳಿಂದ ವರದಕ್ಷಿಣೆ ಪಡೆದು ವಿವಾಹವಾಗುತ್ತಿರುವ ಬಗ್ಗೆಯು ಗಮನಕ್ಕೆ ಬರುತ್ತಿವೆ. ಸಮುದಾಯದ ಇತರ ಕೆಲಸ ಕಾರ್ಯಗಳನ್ನು ನಡೆಸಿಕೊಡಲು ಹಲವಾರು ಸಂಘ ಸಂಸ್ಥೆಗಳು ಅದರದೇ ಆದ ಅಜೆಂಡಾವನ್ನು ಇಟ್ಟುಕೊಂಡು ಸೇವೆಗಳನ್ನು ಮಾಡುತ್ತಿವೆ.ಇಂತಹ ಸಂದರ್ಭದಲ್ಲಿ  ಬ್ಯಾರಿ ನಿಖಾಃ ಹೆಲ್ಪ್ ಲೈನ್ ಎಂಬ ಗ್ರೂಪನ್ನು  ಯುವಕರು ಕಟ್ಟಿಕೊಂಡು ವಿವಾಹ ಸಂಬಂಧಿತ ಏಕ ಉದ್ದೇಶದೊಂದಿಗೆ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ ಎಂದರು.

ಕಳೆದ 6 ತಿಂಗಳುಗಳ ಹಿಂದೆ ಹುಟ್ಟಿಕೊಂಡ ಈ ಸಂಸ್ಥೆಯಲ್ಲಿ ಸುಮಾರು 800 ಕ್ಕೂ ಅಧಿಕ ಸದಸ್ಯರಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳು ಹಾಗೂ ವಿಚ್ಛೇದನ ಪಡೆದು ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಸೂಕ್ತವಾದ ವರದಕ್ಷಿಣೆ ರಹಿತವಾಗಿ ವಿವಾಹವನ್ನು ನೆರವೇರಿಸಲು ಸಂಬಂಧಗಳನ್ನು ಹುಡುಕಿಕೊಡುವ ಮಧ್ಯಸ್ಥಿಕೆ ವಹಿಸುತ್ತಿರುವ ಕೆಲಸ ಬ್ಯಾರಿ ನಿಖಾಃ ಹೆಲ್ಪ್ ಲೈನ್ ಯಾವುದೇ ಫಲಾಪೇಕ್ಷೆವಿಲ್ಲದೆ ನಡೆಸುತ್ತಿವೆ ಇದಕ್ಕಾಗಿ ಇನ್ನಷ್ಟು ಸುಲಭವಾಗಿ ಕಾರ್ಯಚರಿಸಲು ಪ್ರತೀಯೊಂದು ಊರಿನ ಜವಾಬ್ದಾರಿಯುತ ವ್ಯಕ್ತಿಗಳು ಇದರೊಂದಿಗೆ ಕೈ ಜೋಡಿಸುವಂತೆ ಖಲಂದರ್ ಅವರು ಕರೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ಕಾರ್ಯದರ್ಶಿ ಅಬ್ದುಲ್ ಮಜೀದ್ ಉಸ್ತಾದ್, ಸಭೆಗೆ ಚಾಲನೆ ನೀಡಿದರು. ಅಫ್ತಾಬ್ ಬಂದರ್ ವಿಷಯ ಮಂಡನೆ ಮಾಡಿ, ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ನ ರೂಪು ರೇಷೆ ಹಾಗೂ ಕಾರ್ಯವೈಖರಿಗಳನ್ನು ವಿವರಿಸಿದರು.

Beary nikah Helpline1

Beary nikah Helpline3

Beary nikah Helpline2

ಸಭೆಯಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಪತ್ರಕರ್ತ ಹಮೀದ್ ಪಡುಬಿದ್ರಿ ಎಸ್.ವೈ.ಎಸ್ ನ ಮುಖಂಡ ಎಸ್.ಪಿ.ಫಾರೂಕ್  ಸಹಿತ ವಿವಿಧ ಮುಸ್ಲಿಮ್ ಸಂಘಟನೆಯ ನೇತಾರರೂ ಊರಿನ ಪ್ರಮುಖರು ಹಾಗೂ ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ತಂಡದ ಸದಸ್ಯರು ಭಾಗವಹಿಸಿದ್ದರು. ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿದರು. ಇಸ್ಮಾಯಿಲ್ ಕಾನ ವಂದಿಸಿದರು.  ಸಭೆಯಲ್ಲಿ ಹೆಲ್ಪ್ ಲೈನ್ ಮುಂದಿನ ನಡೆಯ ಬಗ್ಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

nkseugkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮುನ್ಸೂಚನೆ ನೀಡದೆ ಶುಲ್ಕ ಏರಿಕೆ: ಪ್ರಾದೇಶಿಕ ಸಾರಿಗೆ ಇಲಾಖೆಯ ವಿರುದ್ಧ ಪ್ರತಿಭಟನೆ

ಮುಂದಿನ ಸುದ್ದಿ »

ಕಾಮಗಾರಿಯಾದರೂ ನೀರು ಪೂರೈಕೆಯಿಲ್ಲ: ಅಧಿಕಾರಿಗಳಿಂದ ಅವ್ಯವಹಾರ ಜಿ.ಪಂ. ಸದಸ್ಯರಿಂದ ಆರೋಪ

ಸಿನೆಮಾ

  • marali

    “ಮರಳಿ ಮನೆಗೆ” ಧ್ವನಿಸುರುಳಿ ಬಿಡುಗಡೆ ಸಂಭ್ರಮ

    February 24, 2017

    ನ್ಯೂಸ್ ಕನ್ನಡ(24-2-2017): ಖ್ಯಾತ ಬರಹಗಾರ, ಚಿಂತಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ನಿರ್ದೇಶನದ ಚೊಚ್ಚಲ ಚಲನಚಿತ್ರ “ಮರಳಿ ಮನೆಗೆ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯೋಗೇಶ್ ಮಾಸ್ಟರ್ ನಾದಬ್ರಹ್ಮ ಹಂಸಲೇಖ ಅವರು “ದೇಸಿ ಸಂಗೀತದ ...

    Read More
  • bhavana

    ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

    February 18, 2017

    ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

    Read More
  • Marali Manege

    ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

    February 16, 2017

    ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×