Friday October 20 2017

Follow on us:

Contact Us

ಬ್ಯಾಡ್ಮಿಂಟನ್: ಅಗ್ರಸ್ಥಾನದ ಲೀ ಚೋಂಗ್ ವಿ ವಿರುದ್ಧ ಜಯ ಸಾಧಿಸಿದ ಭಾರತದ ಎಚ್.ಎಸ್.ಪ್ರಣಯ್

ನ್ಯೂಸ್ ಕನ್ನಡ ವರದಿ-(20.10.17): ಡೆನ್ಮಾರ್ಕ್ ಓಪನ್ ಟೂರ್ನ್‍ಮೆಂಟ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್ ಬಲಿಷ್ಟ ಎದುರಾಳಿ ಮಲೇಷ್ಯಾದ ಲೀ ಚೋಂಗ್ ವಿ ಅವರ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತು ಜಯಗಳಿಸಿದ್ದಾರೆ. ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ ಪ್ರಣಯ್ ವಿಶ್ವ ರಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ಲೀ ಚೋಂಗ್ ವಿ ವಿರುದ್ಧ 1 ಗಂಟೆ ಮೂರು ನಿಮಿಷ ನಡೆದ ಪಂದ್ಯದಲ್ಲಿ 21-17, 11-21, 21-19ರಲ್ಲಿ ರೋಚಕ ಜಯ ಸಾಧಿಸಿ ಕ್ವಾಟರ್ ಫೈನಲ್ ಗೆ ಲಗ್ಗೆಯಿಟ್ಟರು. ಎಚ್ ಎಸ್ ಪ್ರಣಯ್ ಅವರು ಮಲೇಷ್ಯಾದ ಲೀ ಚೋಂಗ್ ವಿ ವಿರುದ್ಧ ಪಡೆದ 2ನೇ ಗೆಲುವಾಗಿದೆ.

ಇನ್ನೋಂದು ಪಂದ್ಯದಲ್ಲಿ ಭಾರತದ ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೊರಿಯಾದ ಜಾನ್ ಹೇಕ್ ಜಿನ್ ವಿರುದ್ಧ 21-13, 8-21, 21-18 ರಲ್ಲಿ ಪ್ರಯಾಸದ ಜಯಗಳಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 12ನೇ ಶ್ರೆಯಾಂಕದ ಸೈನಾ ನೆಹ್ವಾಲ್ 22-20, 21-13 ನೇರ ಸೆಟ್ ಗಳಿಂದ ಥಾಯ್ಲೆಂಡ್ ನ ನಿಚನ್ ಜಿಂದಾಪಾಲ್ ವಿರುದ್ಧ ಜಯ ಸಾಧಿಸಿ ಕ್ವಾಟರ್ ಫೈನಲ್ ಪ್ರವೇಶಿದ್ದಾರೆ. ಭಾರತದ ಇನ್ನೋರ್ವ ಆಟಗಾರ್ತಿ ಸಿಂಧು ಸೋಲನ್ನಪ್ಪಿದ್ದು, ಇದೀಗ ಸೈನಾ ನೆಹ್ವಾಲ್ ಭಾರತದ ಏಕೈಕ ಆಟಗಾರ್ತಿಯಾಗಿ ಕಣದಲ್ಲಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಟಿಪ್ಪು ಜಯಂತಿ ಕ್ಯಾನ್ಸಲ್: ಪ್ರಹ್ಲಾದ್ ಜೋಶಿ

ಮುಂದಿನ ಸುದ್ದಿ »

ಹಿಂದೂ ಧರ್ಮೀಯರಿಗೆ ದೀಪಾವಳಿ ಶುಭಾಷಯ ಕೋರಿದ ಪಾಕ್ ಪ್ರಧಾನಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×