Tuesday January 9 2018

Follow on us:

Contact Us

ಪ್ರತಿನಿತ್ಯ ಬಾಳೆ ಹಣ್ಣು ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನವೇನು ಗೊತ್ತೇ? ಓದಿ ನೋಡಿ..

ನ್ಯೂಸ್ ಕನ್ನಡ ಆರೋಗ್ಯ : ಸಂಶೋಧನೆಯ ಪ್ರಕಾರ ದಿನಕ್ಕೆ ಮೂರು ಸಣ್ಣ ಬಾಳೆ ಹಣ್ಣು ತಿನ್ನೋದರಿಂದ 90 ನಿಮಿಷ ವ್ಯಾಯಾಮ ಮಾಡುವಷ್ಟು ಶಕ್ತಿ ಸಿಗುವುದರ ಜೊತೆಗೆ ದೇಹ ಕಟ್ಟುಮಸ್ತಾಗಿ, ಆರೋಗ್ಯ ಕೂಡ ಸುಧಾರಿಸುತ್ತದೆ. ಬಾಳೆ ಹಣ್ಣಿನ ಸೇವನೆಯಿಂದ ಆಗುವ ಲಾಭಗಳನ್ನು ತಿಳಿದುಕೊಳ್ಳಿ.

ಬೊಜ್ಜು : ಹೆಚ್ಚು ಒತ್ತಡದಲ್ಲಿರುವವರಿಗೆ ಊಟ ಸೇರದೇ ಜಂಕ್ ಫುಡ್ ಗಳಾದ, ಚಿಪ್ಸ್, ಚಾಕೊಲೇಟ್ ಗಳಂತಹ ಕೆಲವು ಕುರುಕಲು ತಿಂಡಿಗಳ ಮೊರೆ ಹೋಗುತ್ತಾರೆ ಇದರಿಂದ ಬೊಜ್ಜು ಬೆಳೆಯುತ್ತದೆ. ಕಾಬೊ೯ಹೈಡ್ರೇಟ್ ಹೆಚ್ಚಾಗಿರುವ ಬಾಳೆಹಣ್ಣುಗಳನ್ನು ಸೇವಿಸಿದರೆ ರಕ್ತದ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಟ್ಟುಕೊಂಡು ಕುರುಕಲು ತಿಂಡಿಗಳ ವಾಂಛೆಯಿಂದ ಮುಕ್ತರಾಗಬಹುದು.

ಅಲ್ಸರ್ : ಆಮ್ಲೀಯತೆಯನ್ನು ತಗ್ಗಿಸಿ, ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ ಅಲ್ಸರ್ ತೊಂದರೆಯನ್ನು ನಿಮೂ೯ಲನೆ ಮಾಡುವುದು.

ಉಷ್ಣ ನಿಯಂತ್ರಕ : ದೇಹಕ್ಕೆ ತಂಪು ನೀಡುತ್ತದೆ ಆದ ಕಾರಣ ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವಲ್ಲಿ ಬಾಳೆ ಹಣ್ಣು ಉತ್ತಮ.

ಧೂಮಪಾನ ಮತ್ತು ತಂಬಾಕು ಸೇವನೆ : ಬಿ -೬, ಬಿ -೧೨ ವಿಟಮಿನ್ ಗಳು ಹಾಗೂ ಪೊಟ್ಯಾಶಿಯಂ ಮೆಗ್ನಿಶಿಯಂ ಅಂಶಗಳು ನಿಕೋಟಿನ್ ಸೆಳೆತದಿಂದ ಹೊರಬರುವಾಗ, ಬಾಳೆಹಣ್ಣು ಸೇವನೆ ದೇಹದ ಮೇಲೆ ಆಗುವ ಪರಿಣಾಮಗಳನ್ನು ನಿಭಾಯಿಸಲು ಸಹಾಯವಾಗುತ್ತದೆ.

ಒತ್ತಡ : ಕ್ರೀಡಾಳುಗಳು ಪ್ರಥಮ ಆದ್ಯತೆ ಸೇಬು ಹಣ್ಣಿಗೆ ಮತ್ತೆ ಬಾಳೆ ಹಣ್ಣಿಗೆ ಕೊಡುವುದು. ಇದರಲ್ಲಿ 4 ರಷ್ಟು ಪ್ರೋಟೀನ್, 2 ರಷ್ಟು ಕಾಬೊ೯ಹೈಡ್ರೇಟ್, 3 ರಷ್ಟು ಫಾಸ್ಪರಸ್, 5 ಪಟ್ಟು ವಿಟಮಿನ್ ಹಾಗೂ ಖನಿಜಗಳಿವೆ. ಪೊಟ್ಯಾಶಿಯಂ ಕೂಡ ಸಮೃದ್ಧವಾಗಿರುವುದರಿಂದ ಹೃದಯದ ಬಡಿತವನ್ನು ನಿಯಂತ್ರಿಸಿ, ಮೆದುಳಿಗೆ ಆಮ್ಲಜನಕವನ್ನು ಪೂರೈಸುವುದರ ಜೊತೆ ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ.

ಖಿನ್ನತೆ : ಬಾಳೆ ಹಣ್ಣಿನಲ್ಲಿರುವ ಟ್ರಿಪ್ಪೋಪ್ಯಾನ್ ಎಂಬ ಪ್ರೋಟೀನ್ ನನ್ನು ಸೆರೋಟಿನ್ ಆಗಿ ಪರಿವತಿ೯ಸಿ ಉದ್ವೇಗವನ್ನು ಶಮನಗೊಳಿಸುತ್ತದೆ ಪ್ರಫುಲ್ಲ ಚಿತ್ತರನ್ನಾಗಿಸುತ್ತದೆ ಎಂದು ” ಮೈಂಡ್ ” ಸಂಸ್ಥೆಯ ಅನ್ವೇಷಣೆಯ ಪ್ರಕಾರ ಸಾಬೀತಾಗಿದೆ.

ರಕ್ತಹೀನತೆ : ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ ರಕ್ತ ಹೀನತೆಯನ್ನು ನೀಗಿಸುತ್ತದೆ.

ರಕ್ತದೊತ್ತಡ : ಪೊಟ್ಯಾಶಿಯಂ ಲವಣ ಸಮೃದ್ಧಿಯಾಗಿದ್ದು, ಉಪ್ಪಿನಾಂಶ ತೀರಾ ಕಡಿಮೆ ಇರುವುದರಿಂದ ರಕ್ತದೊತ್ತಡವನ್ನು ತಡೆಗಟ್ಟಲು ಬಾಳೆ ಹಣ್ಣು ಸೂಕ್ತ ಅಸ್ತ್ರ .

ಬುದ್ಧಿಮತೆ : ಪೊಟ್ಯಾಶಿಯಂ ಮೆದುಳಿಗೆ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗುತ್ತದೆ.

ಮಲಬದ್ಧತೆ : ನಾರಿನಂಶ ಯಥೇಚ್ಛ, ಕೃತಕ ವಿರೇಚಕಗಳಿಲ್ಲದೆ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಕೆಲವೊಂದು ಸಮಸ್ಯೆಗಳಿಂದ ಬಳಲುತ್ತಿದ್ದವರು ಬಾಳೆ ಹಣ್ಣನ್ನು ಸೇವಿಸದೇ ಇರುವುದು ಸೂಕ್ತ.
* ಅಸಿಡಿಟಿ ಸಮಸ್ಯೆ ಇರುವರು.
* ಹೃದಯ ಸಂಬಂಧಿತ ಖಾಯಿಲೆ ಇರುವರು.
* ಮಧುಮೇಹ ರೋಗಿಗಳು.
* ಹೆಚ್ಚು ತಲೆ ನೋವು, ಅಜೀರ್ಣತೆಯಿಂದ ಬಳಲುತ್ತಿರುವರು.
* ಕಿಡ್ನಿ ಅಲಜಿ೯ ಸಮಸ್ಯೆ ಇದ್ದವರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಮೂಡಬಿದಿರೆ: ಹುಟ್ಟುಹಬ್ಬದಂದೇ ಆತ್ಮಹತ್ಯೆಗೆ ಶರಣಾದ ಆಳ್ವಾಸ್ ವಿದ್ಯಾರ್ಥಿ!

ಮುಂದಿನ ಸುದ್ದಿ »

ಬಂಟ್ವಾಳ: ಮನೆಗೆ ನುಗ್ಗಿ ತಾಯಿ,ಮಗಳಿಗೆ ಜೀವ ಬೆದರಿಕೆ ಹಾಕಿದ ಸಂಘಪರಿವಾರ ಕಾರ್ಯಕರ್ತರು: ಆರೋಪ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×