Sunday January 10 2016

Follow on us:

Contact Us
Ayur car

ಕಾರವಾರ: ಫೆ.12ರಿಂದ ಆಯುರ್ ಜ್ಯೋತಿ ರಥಯಾತ್ರೆ

ನ್ಯೂಸ್ ಕನ್ನಡ ವರದಿ-ಕಾರವಾರ: 1965ರಲ್ಲಿ ಅಸ್ವಿತ್ವಕ್ಕೆ ಬಂದಿದ್ದ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಪ್ರಾಕ್ಟೀಷನರ್ಸ್ ಬೋರ್ಡ್ ಅಸ್ತಿತ್ವಕ್ಕೆ ಬಂದ ಸುವರ್ಣ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಫೆ.12ರಿಂದ 14ರವರೆಗೆ ಗ್ಲೋಬಲ್ ವೆಲ್ ನೆಸ್ ಮೀಟ್ 2016 ಆಯೋಜಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ವೀರಭದ್ರಪ್ಪ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯದ ವಿವಿಧ ತಾಲೂಕಿನಲ್ಲಿ ಆಯುರ್ ಜ್ಯೋತಿ ರಥಯಾತ್ರೆ ನಡೆಯಲಿದ್ದು, ಜ.11ರಂದು ಉತ್ತರ ಕನ್ನಡದ ಕಾರವಾರಕ್ಕೆ ರಥಯಾತ್ರೆ ಆಗಮಿಸಲಿದೆ ಎಂದರು.

ಅದರಂತೆ ಜ.12ರಂದು ಸಿದ್ದಾಪುರ, 13ರಂದು ಶಿರಸಿ, 19ರಂದ ಮುರುಡೇಶ್ವರಕ್ಕೆ ಆಗಮಿಸಿ ಆಯುರ್ವೇದದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ. ಕಾರವಾರದಲ್ಲಿ ಆಯುರ್ ಜ್ಯೋತಿಯನ್ನು ಜಿಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಸ್ವಾಗತಿಸಲಾಗುವುದು. 12ರಂದು ಸಿದ್ದಾಪುರಕ್ಕೆ ತೆರಳಲಿರುವ ಆಯುರ್ ಜ್ಯೋತಿಯನ್ನು ಶ್ರೀ ಧಜ್ವಂತರಿ ಆಯುರ್ವೇದ ವಿಶ್ವವಿದ್ಯಾಲಯದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿರಸಿಯಲ್ಲಿ ಜಾನಪದ ನೃತ್ಯ, ಸ್ತಬ್ಧಚಿತ್ರಗಳ ಮೂಲಕ ಜಾಥಾ ಹಾಗೂ ನಿಸರ್ಗ ಆಸ್ಪತ್ರೆಯಲ್ಲಿ ಸಭೆ ನಡೆಯಲಿದೆ. ಅಲ್ಲದೆ ಶಿರಸಿ, ನಿಸರ್ಗ ಟ್ರಸ್ಟ್, ಆಯುಷ್ ಇಲಾಖೆ, ಔಷಧಿ ವಿತರಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಆಯುರ್ವೇದ ಹಾಗೂ ಯುನಾನಿ ಬೋರ್ಡ್‍ನಲ್ಲಿ ಆಯುರ್ವೇದ, ಯುನಾನಿ, ಪ್ರಕೃತಿ ಹಾಗೂ ಯೋಗ ಪದ್ಧತಿಗಳ 38,461 ವೈದ್ಯರು ನೋಂದಾಯಿತರಾಗಿದ್ದಾರೆ. ಆನ್ ಲೈನ್ ಬಯೋಮೆಟ್ರಿಕ್ ನೋಂದಣಿ ವಿಧಾನ ಗಣಕೀಕೃತ ದಾಖಲೀಕರಣ ಆರಂಭವಾಗಿದೆ.

ಉದ್ದೇಶ: ವೈದ್ಯ ಶಾಸ್ತ್ರಗಳ ತಾಯಿ ಬೇರಾದ ಭಾರತೀಯ ವೈದ್ಯ ಪದ್ಧತಿಗಳನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಜೀವನ ಶೈಲಿ ಆಧಾರಿತ ರೋಗಗಳು ಹೆಚ್ಚುತ್ತಿರುವ ಆಧುನಿಕ ಯುಗದಲ್ಲಿ ಆಯುಷ್ ಪದ್ಧತಿಯ ಮುಖ್ಯ ಉದ್ದೇಶವಾದ ಸ್ವಸ್ಥ ಜೀವನ ಶೈಲಿಯ ಅರಿವು ಮೂಡಿಬೇಕಾಗಿದೆ. ರೋಗ ಬಾರದಂತೆ ರಕ್ಷಿಸಿಕೊಳ್ಳುವ ಸೂತ್ರಗಳನ್ನು ಅನುಸರಿಸಬೇಕಾದ ವಿಧಾನ ಪರಿಚಯಿಸಲಾಗುತ್ತಿದ್ದು, ಸಮೂಹ ಆರೋಗ್ಯ ರಕ್ಷಣೆಗೆ ಬೇಕಾದ ಹಸಿರು ಸಂರಕ್ಷಣೆ, ಹಸಿರಿನಿಂದ ಉಸಿರು, ಹಸಿರಿನಿಂದ ಆಹಾರ, ಆರೋಗ್ಯಕ್ಕಾಗಿ ಹಸಿರು, ಪ್ರಾಕೃತಿಕ ಸಂಪತ್ತಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಇಂದು ಪ್ರಪಂಚದ ಕಣ್ಣು ತೆರೆಸಿರುವ ಭಾರತೀಯ ಯೋಗ ಶಾಸ್ತ್ರಗಳು ಹಾಗೂ ಪ್ರಕೃತಿಯ ಮಹತ್ವವನ್ನು ಸಾರಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಆಯುರ್ ಫೆಡರೇಷನ್ ಸಂಘಟನೆಯ ಜಿಲ್ಲಾಧ್ಯಕ್ಷ ನಹೀಮ್ ಮುಕಾದಮ್ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಹಿರಿಯ ಮೆಡಿಕಲ್ ಅಧಿಕಾರಿ ವಾಹಿನಿ ನಾಯಕ ಇದ್ದರು.

nksbkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪುತ್ತೂರು: ವಿದ್ಯಾರ್ಥಿ ಮುಖಂಡರಿಂದ ಸಾರಿಗೆ ಸಚಿವರಿಗೆ ಮನವಿ

ಮುಂದಿನ ಸುದ್ದಿ »

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ-ಭಟ್ಕಳದ ಇಬ್ಬರು ಸಾವು; ಐದು ಮಂದಿ ಗಂಭೀರ

ಸಿನೆಮಾ

 • 3

  ನನಗೂ ತುಳು ಸಿನಿಮಾದಲ್ಲಿ ನಟಿಸುವ ಆಸೆ: ಶಿವರಾಜ್ ಕುಮಾರ್

  January 19, 2017

  – ಶಫೀ ಉಚ್ಚಿಲ ನ್ಯೂಸ್ ಕನ್ನಡ ವರದಿ (19-1-17): ಕಾಪು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಟಗರು ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಟಗರು’ ತಂಡ ಎರಡನೇ ಹಂತವನ್ನು ಕಾಪು ಸಮೀಪದ ಉಚ್ಚಿಲದಲ್ಲಿ ಚಿತ್ರೀಕರಿಸುತ್ತಿದ್ದು, ...

  Read More
 • Chennai-Express-First-Look-tbwm

  ಚೆನ್ನೈ ಎಕ್ಸ್ ಪ್ರೆಸ್ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

  January 18, 2017

  ನ್ಯೂಸ್ ಕನ್ನಡ(18-1-2017): ಸೂಪರ್ ಹಿಟ್ ಬಾಲಿವುಡ್ ಚಲನಚಿತ್ರ “ಚೆನ್ನೈ ಎಕ್ಸ್ ಪ್ರೆಸ್”ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದಿರುವುದಾಗಿ ದೂರು ದಾಖಲಾಗಿದ್ದು, ...

  Read More
 • ra-one

  “ರಾ ಒನ್” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ಅನಿಮೇಟರ್ ನಿಧನ

  January 18, 2017

  ನ್ಯೂಸ್ ಕನ್ನಡ(18-1-2017): ರಾ ಒನ್ ಚಿತ್ರದ ಅನಿಮೇಷನ್ ಗಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಚಾರು ಖಂದಾಲ್ ನಿಧನರಾಗಿದ್ದಾರೆ. 4 ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾರು ದೀರ್ಘಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಶಾರುಕ್ ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×