Thursday August 10 2017

Follow on us:

Contact Us

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳಿಂದ ಸಮಿತಿ ರಚನೆ – ಎಸ್‍ಎಫ್‍ಐ ಸ್ವಾಗತ

ನ್ಯೂಸ್ ಕನ್ನಡ ವರದಿ-(10.08.17): ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಮಾನ್ಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ವಿ.ಎಸ್,.ಉಗ್ರಪ್ಪನವರು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕುಮಾರಿ ಕಾವ್ಯ ಅಸ್ವಾಭಾವಿಕವಾಗಿ ಮರಣವನ್ನಪ್ಪಿದ ಹಿನ್ನಲೆ ಮತ್ತು ಪೋಷಕರ ಮತ್ತು ಜನತೆಯ ಅನುಮಾನಗಳ ಹಿನ್ನಲೆಯಲ್ಲಿ ಸಮಿತಿಯ ಸದಸ್ಯರೊಂದಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿಕೊಟ್ಟ ನಂತರ ದಾಖಲೆಗಳ ಪರಿಶೀಲಿಸಿದ ಸಂಸ್ಥೆಯಲ್ಲಿನ ಅಕ್ರಮ ಮತ್ತು ನ್ಯೂನ್ಯತೆಯ ಬಗ್ಗೆ ವಿವರಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಲು ಸಮಿತಿನ ರಚಿಸಿ ಆದೇಶ ಹೊರಡಿಸಿರುವುದನ್ನು ಸ್ವಾಗತಿಸುತ್ತದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ)ನ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಕಾವ್ಯ ಅನುಮಾನಾಸ್ಪದ ಸಾವಿನ ಬಗ್ಗೆ ಪೋಷಕರು ಹಾಗೂ ರಾಜ್ಯದ ಜನತೆ ಅನುಮಾನ ವ್ಯಕ್ತಪಡಿಸಿ ಪಾರದರ್ಶಕ ತನಿಖೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದು ಈ ಹೋರಾಟಕ್ಕೆ ಮೊದಲ ಜಯ ದೊರೆತ್ತಿದ್ದು ಖಾಸಾಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿ ಮಿತಿಮೀರಿದ ಶುಲ್ಕ ಮತ್ತು ಅನುಮತಿ ಇಲ್ಲದೆ ವಸತಿ ಶಾಲೆಗಳನ್ನು ನಡೆಸಡುತ್ತಿರುವುದರಿಂದ ಇಂತಹ ಸಾವುಗಳು ನಡೆಯುತ್ತಿದ್ದು ಆದ್ದರಿಂದ ಆಳ್ವಾಸ್ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ ಶಿಕ್ಷಣದ ವ್ಯಾಪಾರ ನಡೆಸುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಅಲ್ಲದೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚಿ ಈ ಸಮಿತಿಯು ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಳ್ವಾಸ್ ಪರ ಹೋರಾಟ ಹಿಂಪಡೆಯಬೇಕು.

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದಿರುವ ಕಾವ್ಯಾ ಅಸಹಜ ಸಾವಿನ ಸೂಕ್ತ ತನಿಖೆಗೆ ಒತ್ತಾಯಿಸಿ ರಾಜ್ಯದ ಜನತೆ ಹೋರಾಟ ನಡೆಸಿ ಪೋಷಕರ ಬೆಂಲಕ್ಕೆ ನಿಂತು ಸಾಂತ್ವಾನ ಹೇಳುತ್ತಿದ್ದರೆ ಕೆಲ ಪ್ರತಿಷ್ಠಿತ ವ್ಯಕ್ತಿಗಳು ಕಾವ್ಯ ಪರ ಹೋರಾಟಗಾರರನ್ನು ಕಡೆಗಣಿಸಿ ಕಾವ್ಯಳ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸದೆ ಶಿಕ್ಷಣ ಸಂಸ್ಥೆಯ ಪರ ವಕಾಲತ್ತು ವಹಿಸುತ್ತಿರುವುದು ಬುದ್ಧಿವಂತರ ಜಿಲ್ಲೆಯ ಜನತೆಗೆ ನಾಚಿಕೆಪಡುವಂತಹ ವಿಚಾರವಾಗಿದ್ದು ಕಾವ್ಯ ಪರ ಹೋರಾಟಗಾರರು ದಾಖಲೆಗಳ ಸಮೇತ ಹೋರಾಟ ನಡೆಸುತ್ತಿದ್ದು ಅಲ್ಲದೆ ಈವರೆಗೆ ಕಾವ್ಯ ಪೋಷಕರ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯಾಗಲಿ, ಶಿಕ್ಷಣ ಸಂಸ್ಥೆಯಾಗಲೀ ಸಮರ್ಪಕ ಉತ್ತರ ನೀಡಿಲ್ಲ, ಅಲ್ಲದೆ ಆಳ್ವಾಸ್‍ನಲ್ಲಿ ಸರಣಿ ಆತ್ಮಹತ್ಯೆಗಳು ನಡೆದಿದ್ದು ಈಗ ಸರ್ಕಾರದ ಅಧಿಕೃತ ಸಮಿತಿಯೇ ಸಂಸ್ಥೆಯಲ್ಲಿನ ಅಕ್ರಮದ ಬಗ್ಗೆ ಬಯಲಿಗೆಳೆದು ತನಿಖೆ ನಡೆಸಲು 5 ಸಮಿತಿ ರಚಿಸಿರುವಾದ ಹೋರಾಟಗಾರರು ಎತ್ತಿರುವ ಪ್ರಶ್ನೆಗಳು ಸರಿಯಾಗಿದ್ದು ಆಳ್ವಾಸ್ ಶಿಕ್ಷಣ ಸಂಸ್ಥೆಯ ತೆಜೋವಧೆ ನಡೆಸುತ್ತಿದ್ದಾರೆಂದು ಆರೋಪಿಸಿ ಆಳ್ವಾಸ್ ಪರವಾಗಿ ಮೂಡಬಿದ್ರೆಯಲ್ಲಿ ನಡೆಸುವ ಪ್ರತಿಭಟನೆಯು ಅರ್ಥ ರಹಿತವಾಗಿದ್ದು ಕೂಡಲೇ ಆಯೋಜಕರು ಈ ಪ್ರತಿಭಟನೆಯನ್ನು ಹಿಂಪಡೆದು ಕಾವ್ಯ ಪೋಷಕರ ಪರವಾಗಿ ನಿಲ್ಲಬೇಕು ಇಲ್ಲದಿದ್ದರೆ ವಿದ್ಯಾರ್ಥಿ ಸಮೂಹ ಸೂಕ್ತ ಉತ್ತರ ನೀಡುತ್ತಾರೆ ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಎಚ್ಚರಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆಗಸ್ಟ್ 15: ಬಿ.ಎಸ್. ಇಸ್ಮಾಯಿಲ್ ರವರ ಮಳೆಹನಿ ಪುಸ್ತಕ ಬಿಡುಗಡೆ

ಮುಂದಿನ ಸುದ್ದಿ »

ಸ್ವಚ್ಛ ಭಾರತದ ಹಣದಲ್ಲಿ ಮೊಬೈಲ್ ಕೊಂಡ ಪತಿ: ಮೊಬೈಲ್ ಪುಡಿಗಟ್ಟಿ ಶೌಚಾಲಯ ಕಟ್ಟಿಸಿದ ಪತ್ನಿ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×