Sunday June 11 2017

Follow on us:

Contact Us

ರಂಝಾನ್ ಸಂತೋಷದಲ್ಲಿ ಬಡ ಕುಟುಂಬದ ಕಣ್ಣೀರೊರೆಸೋಣ: ಅಲ್ ಅಮೀನ್ ಹೆಲ್ಪ್ ಲೈನ್ ದ.ಕ ಜಿಲ್ಲಾ ಅಭಿಯಾನ

ನ್ಯೂಸ್ ಕನ್ನಡ ವರದಿ-(11.06.17) ರಂಝಾನ್ ತಿಂಗಳ ಕೊನೆಯಲ್ಲಿ ಆಚರಿಸಲ್ಪಡುವ ಈದುಲ್ ಫಿತ್ರ್ ಹಬ್ಬವನ್ನು ಬಡವರೂ ಸಂತೋಷದಿಂದ ಆಚರಿಸಬೇಕೆಂಬ ಉದ್ದೇಶದಿಂದ ಅಲ್ ಅಮೀನ್ ಹೆಲ್ಪ್-ಲೈನ್ ಬಡ ಕುಟುಂಬದ ರಂಝಾನ್ ಸಂತೋಷದಲ್ಲಿ ಪಾತ್ರರಾಗೋಣ ಎಂಬ ವಿನೂತನ ಅಭಿಯಾನವನ್ನು ಹಮ್ಮಿಕೊಂಡಿದೆ.

ಮುಸ್ಲಿಂ ಸಮುದಾಯದ ಅತ್ಯಂತ ಬಡ ಕುಟುಂಬಗಳು ರಂಝಾನ್ ತಿಂಗಳ ಕೊನೆಯಲ್ಲಿ ಬರುವ ಹಬ್ಬದ ದಿನ ಹೊಸ ಬಟ್ಟೆ ತೊಡುವ ಆಸೆ ಇದ್ದರೂ ಅವರಿಗೆ ಬಟ್ಟೆ ಖರೀದಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ಇವರು ಹಬ್ಬವನ್ನು ಸಂತೋಷದಿಂದ ಆಚರಿಸಬೇಕು ಎಂಬ ಉದ್ದೇಶದಿಂದ ಹಬ್ಬದ ಪ್ರಯುಕ್ತ ಸಾವಿರಾರು
ರುಪಾಯಿಯ ಬಟ್ಟೆ ಖರೀದಿಸುವಾಗ, ಅದರ ಜೊತೆಗೆ ಒಂದು ಜೊತೆ ಹೆಚ್ಚುವರಿ ಬಟ್ಟೆಯನ್ನು ಖರೀದಿಸಿ ದಾನ ಮಾಡುವ ಮೂಲಕ ಬಡವರೂ ರಂಝಾನ್ ಸಂತೋಷದಿಂದ ಆಚರಿಸಲು ನೆರವಾಗುವ ಎಂಬುದಾಗಿ ಅಲ್ ಅಮೀನ್ ಹೆಲ್ಪ್-ಲೈನ್ ಅಭಿಯಾನ ಹಮ್ಮಿಕೊಂಡಿದೆ.

ಹಬ್ಬಕ್ಕಾಗಿ ನಾವು ವಸ್ತ್ರ ಖರೀದಿಸುವಾಗ ನಮ್ಮ ನೆರೆಯ, ಅಥವಾ ನಮ್ಮ ಪರಿಚಯದ, ಅಥವಾ ನಮ್ಮದೇ ಕುಟುಂಬದಲ್ಲಿರುವ ಅತೀ ಬಡವರಿಗೆ ದಾನವಾಗಿ ನೀಡಲು ಒಂದು ಜೊತೆ ಬಟ್ಟೆಯನ್ನು ಖರೀದಿಸಿ ನೀಡೋಣ, ಇದರಿಂದ ಬಡವರಿಗೂ ರಂಜಾನ್ ಹಬ್ಬದ ಸಂತೋಷ ಅನುಭವಿಸುವ ಬಾಗ್ಯ ನಾವು ಕಲ್ಪಿಸಿದಂತಾಗುತ್ತದೆ.

ಇದರ ಜೊತೆ ಅಲ್‌ ಅಮೀನ್ ಹೆಲ್ಪ್-ಲೈನ್ ಹಳೆಯ ಬಟ್ಟೆಗಳ ಸಂಗ್ರಹಕ್ಕೂ ಮುಂದಾಗಿದ್ದು ಸಂಗ್ರಹವಾದ ಹಳೆಯ ಬಟ್ಟೆಗಳನ್ನು ಅತೀ ಬಡವರಿಗೆ ತಲುಪಿಸುವ ‌ಕೆಲಸವನ್ನು ಈ ಹೆಲ್ಪ್-ಲೈನ್ ಸಂಘಟನೆ ಮಾಡಲಿದೆ. ಈ ಸಂಘಟನೆಯ ಈ ಒಂದು ಅಭಿಯಾನಕ್ಕೆ ಸಾರ್ವಜನಿಕರ ಬೆಂಬಲದ ಅಗತ್ಯವೂ ಇದ್ದು ಇದನ್ನು ಯಶಸ್ವಿಗೊಳಿಸಬೇಆಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ. ಇವರೊಂದಿಗೆ ಕೈಜೋಡಿಸಲು ಇಚ್ಚಿಸುವ ದಾನಿಗಳು ಕೆಳಗೆ ಕೊಟ್ಟಿರುವ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

ANSAR PUTTIGE
+966 59 112 5657

IRSHAD N G
+91 89517 87804

ANSAR MOODBIDRE
+91 99640 64340

NIFAL BEDRA
+91 73496 77794

ABU SAJJAD
+91 91484 45523

NAWAZ N G
+973 3826 8057

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಲಾರಿ

ಮುಂದಿನ ಸುದ್ದಿ »

ಎಲ್ಲೂರು; ಸಲೀಂ ಮದನಿ ನೇತ್ರತ್ವದಲ್ಲಿ ಬಡ ಕುಟುಂಬಕ್ಕೆ ವಿವಿಧ ಸವಲತ್ತು ವಿತರಣೆ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×