Saturday August 12 2017

Follow on us:

Contact Us

ಎಲ್ಲೂರು; 48.39ಲಕ್ಷ ರೂ. ವೆಚ್ಚದ ಅಭಿವೃದ್ಧಿ ಅದಾನಿ ಯುಪಿಸಿಎಲ್ ಕಾಮಗಾರಿಗಳಿಗೆ ಚಾಲನೆ

ನ್ಯೂಸ್ ಕನ್ನಡ ವರದಿ-(12.08.17): ಕಾಪು: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ಇಂದು ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವೀರಭದ್ರ ದೇವಸ್ಥಾನದಿಂದ ಮಾಣಿಯೂರು ಕೆರೆಗೆ ಹೋಗುವ ರಸ್ತೆಯ ಕಾಂಕ್ರೀಟೀಕರಣ ಹಾಗೂ ಕೇಂಜ ಮುದರಂಗಡಿ ಮುಖ್ಯರಸ್ತೆಯಿಂದ ಮಾಣಿಯೂರು ಗ್ರಾಮದ ತನಕ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ತನ್ನ ಸಿಎ¸.ಆರ್ ಯೋಜನೆಯಡಿಯಲ್ಲಿ ಚಾಲನೆ ನೀಡಿತು.

ಒಟ್ಟು ರೂ. 48.39 ಲಕ್ಷ ವೆಚ್ಚದ ಈ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಯುಪಿಸಿಎಲ್ ಕಂಪನಿಯ ಜಂಟಿ ಅಧ್ಯಕ್ಷರಾದ ಕಿಶೋರ್ ಆಳ್ವ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಿ ಮಧ್ವರಾಜ್ ಅವರು ಗುದ್ದಲಿ ಪೂಜೆ ಮಾಡುವುದರ ಮೂಲಕ ಹಸಿರು ನಿಶಾನೆಯನ್ನು ತೋರಿಸಿದರು. ಗುದ್ದಲಿ ಪೂಜೆಯನ್ನು ಎಲ್ಲೂರು ದೇವಸ್ಥಾನದ ಅರ್ಚಕರಾದ ಗುರುರಾಜ ಭಟ್ ಮತ್ತು ವೀರಭದ್ರ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ ಭಟ್ ನೆರವೇರಿಸಿದರು. ಅತೀ ಶೀಘ್ರದಲ್ಲೇ ಕಾಮಗಾರಿ ಕಾರ್ಯ ಪ್ರಾರಂಭವಾಗಲಿದೆ ಎಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕಿಶೋರ್ ಆಳ್ವ ಅವರು ತಿಳಿಸಿದರು.

ಸ್ಥಾವರದ ವಠಾರದಲ್ಲೇ ಸಿಮೆಂಟ್ ಗ್ರೈಂಡಿಂಗ್ ಘಟಕ:
ಯುಪಿಸಿಎಲ್‍ನ ಈಗಿನ ಘಟಕಗಳಿಂದ ಉತ್ಪತ್ತಿಯಾಗುವ ಹಾರೂ ಬೂದಿಯನ್ನು ಸ್ಥಳೀಯ ಇಟ್ಟಿಗೆ ತಯಾರಕ ಸಂಸ್ಥೆಗಳು ಹಾಗೂ ಸಿಮೆಂಟ್ ತಯಾರಕ ಕಾರ್ಖಾನೆಗಳು ಉಪಯೋಗಿಸಿತ್ತಿದ್ದು, ಯುಪಿಸಿಎಲ್ ಯೋಜನೆ ವಿಸ್ತೀರ್ಣದಿಂದ ಅಧಿಕ ಪ್ರಮಾಣದಲ್ಲಿ ಹಾರೂಬೂದಿ ಉತ್ಪತ್ತಿಯಾಗುವುದರಿಂದ ಅದನ್ನು ಸಂಪೂರ್ಣವಾಗಿ ಉಪಯೋಗಿಸಲು ಸ್ಥಾವರದ ವಠಾರದಲ್ಲೇ ಸಿಮೆಂಟ್ ಗ್ರೈಂಡಿಂಗ್ ಘಟಕವನ್ನು ಸ್ಥಾಪಿಸಲು ಅದಾನಿ ಸಮೂಹವು ಯೋಜಿಸಿದ್ದು, ಆ ಸಿಮೆಂಟ್ ಘಟಕದಿಂದ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಿದಂತಾಗುತ್ತದೆ. ಎಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಯುವಕರಿಗೆ ಉದ್ಯೋಗವನ್ನು ಕಲ್ಪಿಸಲುಲು ಆದ್ಯತೆ ನೀಡಲಾಗುವುದು ಎಂದು ಆಳ್ವ ಅವರು ತಿಳಿಸಿದರು.

ಇದಲ್ಲದೆ ಮಂಗಳೂರಿನ ಕೈಗಾರಿಕ ಸಂಸ್ಥೆಗಳು ಮಂಗಳೂರು ಮಹಾನಗರ ಪಾಲಿಕೆಗೆ ಕೈಗಾರಿಕ ಘಟಕಗಳಿಗೆ ನೀರಿನ ಅವಶ್ಯಕತೆಯ ಬೇಡಿಕೆ ಇಟ್ಟಿದ್ದು, ಮಹಾನಗರ ಪಾಲಿಕೆ ಖಾಸಗಿ ಸಂಘ ಸಂಸ್ಥೆಗಳು ಸಮುದ್ರ ನೀರಿನ್ನು ಶುದ್ಧೀಕರಿಸುವ ಘಟಕವನ್ನು (ಡಿಸಲೈನೇಷನ್ ಪ್ಲ್ಯಾಂಟ್) ಸ್ಥಾಪಿಸಿ ಮಂಗಳೂರು ಜನರಿಗೆ ಮತ್ತು ಕೈಗಾರಿಕ ಉದ್ದೇಶಕ್ಕೆ ನೀರನ್ನು ಪೂರೈಸುವ ಯೋಜನೆ ಮಾಡಿದ್ದು, ಅದಾನಿ ಸಮೂಹವು ನೀರನ್ನು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸಲು ಕ್ರಿಯಾಯೋಜನೆ ತಯಾರಿಸುತ್ತಿದ್ದು, ಈ ನೀರಿನ ಡಿಸಲೈನೇಷನ್ ಘಟಕದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಲು ಸಹ ಅದಾನಿ ಸಮೂಹದ ಯೋಜನೆ ಆಗಿದೆ ಎಂದು ಕಿಶೋರ್ ಆಳ್ವ ಈ ಸಂದರ್ಭದಲ್ಲಿ ತಿಳಿಸಿದರು.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಮಲದೇವಾಡಿಗ, ಮೋಹನ್ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಚಂದ್ರಶೇಖರ್, ಯುಪಿಸಿಎಲ್ ಕಂಪನಿಯ ಹಿರಿಯ ಪ್ರಬಂಧಕರಾದ ರವಿ ಆರ್. ಜೇರೆ, ಪ್ರಬಂಧಕರಾದ ವಸಂತ ಕುಮಾರ್, ಅದಾನಿ ¥sóËಂಡೇಶನ್‍ನ ಅನುದೀಪ್ ಪೂಜಾರಿ, ಸುಕೇಶ್ ಸುವರ್ಣ ಉಪಸ್ಥಿತರಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸುರತ್ಕಲ್: ಗುಂಪು ಹಿಂಸಾ ಹತ್ಯೆಯ ವಿರುದ್ಧ ಬೃಹತ್ ಸಮಾವೇಶ

ಮುಂದಿನ ಸುದ್ದಿ »

ಕಲ್ಲಡ್ಕ ಶಾಲೆಗೆ ಅನುದಾನ ರದ್ದುಪಡಿಸಿದ್ದು ರಾಕ್ಷಸೀಯ ಪ್ರವೃತ್ತಿ: ಜನಾರ್ದನ ಪೂಜಾರಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×