Saturday November 19 2016

Follow on us:

Contact Us

ವಿದೇಶಿಯರ ಎಟಿಎಂ ಮಾಹಿತಿ ಕಳವು ಮಾಡಿ ಲಕ್ಷಾಂತರ ರೂ.ವಂಚನೆ; ಐವರ ಬಂಧನ

ನ್ಯೂಸ್ ಕನ್ನಡ  ವರದಿ(19.11.2016)ಕಾಸರಗೋಡು: ಅಮೆರಿಕನ್ ಪ್ರಜೆಗಳ ಎಟಿಎಂ ಮಾಹಿತಿಗಳನ್ನು ಸೋರಿಕೆ ಮಾಡಿ ಕೇರಳ ಹಾಗೂ ಇತರ ಕಡೆಗಳಲ್ಲಿ ಹಣ ವಂಚನೆಗೆ ಸಂಬಂಧಪಟ್ಟಂತೆ ಐದು ಮಂದಿಯನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹಿದಾಯತ್ ನಗರ ಚೆಟ್ಟು೦ಗುಯಿಯ ಮುಹಮ್ಮದ್ ನಜೀಬ್ (24), ಕಣ್ಣೂರು ಚೆರುಕುನ್ನುವಿನ ಕೆ.ವಿ ಬಷೀರ್ (31), ಅಬ್ದುಲ್ ರಹಮಾನ್ (30), ಮುಳಿಯಾರ್ ಮೂಲಡ್ಕ ದ ಎ . ಎಂ ಮುಹಮ್ಮದ್ ರಿಯಾಜ್ (22), ಅಬ್ದುಲ್ ಮಹರೂಫ್ ಬಾಸಿತ್ ಅಲಿ 20) ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ಐಷಾರಾಮಿ ಕಾರು ಮತ್ತು ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ.ಈ ವೇಳೆ ತಂಡದಲ್ಲಿದ್ದ ಮುಂಬೈಯ ಸೈಫ್ ಮತ್ತು ಉಪ್ಪಳದ ನೌಶಾದ್ ಪರಾರಿಯಾಗಿದ್ದಾರೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಗರದ ಆನೆಬಾಗಿಲು ರಸ್ತೆ ಯಲ್ಲಿ ಎರಡು ಕಾರುಗಳಲ್ಲಿ ಸಂಚರಿಸುತ್ತಿದ್ದ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಅಮೆರಿಕಾದ ರಹಸ್ಯ ಕೇಂದ್ರದಿಂದ ಆನ್ ಲೈನ್ ಮೂಲಕ ಅಕೌ೦ಟ್ ನಂಬ್ರ, ಕ್ರೆಡಿಟ್ ಕಾರ್ಡ್ ನಂಬ್ರ , ಪಿನ್ ನಂಬ್ರ ಮೊದಲಾದವುಗಳ ಮಾಹಿತಿಗಳನ್ನು ಪಡೆದು ಸ್ವೇಪ್ ಮೆಷಿನ್ ಮೂಲಕ ನಕಲಿ ಕ್ರೆಡಿಟ್ ಕಾರ್ಡ್ ತಯಾರಿಸಿ ಜುವೆಲ್ಲರಿ, ಮಳಿಗೆ ಹಾಗೂ ಇನ್ನಿತರ ಕಡೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಮಾಗ್ರಿ ಖರೀದಿಸುತ್ತಿದ್ದರು.

ಬಂಧಿತರಿಂದ 67 ಕ್ರೆಡಿಟ್ ಕಾರ್ಡ್ ಗಳು,  7 ಮೊಬೈಲ್ ಫೋನ್, ಟಾಬ್ , ಲ್ಯಾಪ್ ಟಾಪ್, ಸೈಫ್ ಮೆಷಿನ್ ಮತ್ತು ಎರಡು ಕಾರು ಮತ್ತು ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಇವರಿಗೆ ಅಕೌಂಟ್ ಗಳ ಮಾಹಿತಿಗಳನ್ನು ಆನ್ ಲೈನ್ ಮೂಲಕ ಸೋರಿಕೆ ಮಾಡಿ ನೀಡಿದ್ದು ಉತ್ತರ ಪ್ರದೇಶದ ನಿವಾಸಿಯೋರ್ವ ಎಂದು ಮಾಹಿತಿ ನೀಡಿದ್ದಾರೆ.ಪರಾರಿಯಾಗಿರುವ ಉಪ್ಪಳದ ನೌಶಾದ್ ಒಂದೂವರೆ ವರ್ಷದ ಹಿಂದೆ ದುಬೈ ಯಲ್ಲಿ ಇದೇ ರೀತಿ 30ಲಕ್ಷ ರೂ. ವಂಚನೆ ನಡೆಸಿದ್ದು, ಬಂಧಿತನಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದನು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

gt

vf

nkskkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಪೊಲೀಸರ ಭತ್ಯೆ ಹೆಚ್ಚಳ; ವೇತನ ಹೆಚ್ಚಳಕ್ಕೆ ಸಮಿತಿ ರಚನೆ: ಸಿಎ

ಮುಂದಿನ ಸುದ್ದಿ »

ಯು.ಟಿ ಖಾದರ್ ಭಯೋತ್ಪಾದಕರ ಪರ ನಿಲ್ಲುವುದನ್ನು ನಿಲ್ಲಿಸಲಿ-ಕಲ್ಲಡ್ಕ ಪ್ರಭಾಕರ್ ಭಟ್

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×