Tuesday January 10 2017

Follow on us:

Contact Us

ಕ್ಯಾಸಿಯಾ ಆಮದು ಸ್ಥಗಿತ ಸ್ವಾಗತಾರ್ಹ: ಲಿಯೋನಾರ್ಡ್ ಜಾನ್

ನ್ಯೂಸ್ ಕನ್ನಡ ವರದಿ(10.01.2017)-ಮಡಿಕೇರಿ: ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ‘ಕ್ಯಾಸಿಯಾ’(ದಾಲ್ಚೀನಿಯನ್ನು ಹೋಲುವ ಚಕ್ಕೆ) ಎನ್ನುವ ಚಕ್ಕೆಯನ್ನು ಭಾರತದ ಐದು ಪ್ರಮುಖ ಬಂದರುಗಳ ಮೂಲಕ ಯಾವುದೇ ಪರೀಕ್ಷೆಗಳಿಲ್ಲದೆ 83 ಲಕ್ಷ ಕೆ.ಜಿ.ಗಳಷ್ಟು ಆಮದು ಮಾಡಿಕೊಳ್ಳಲಾಗಿದೆ. ಇದರ ವಿರುದ್ಧ ಕಳೆದ ಎರಡು ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಕರ್ನಾಟಕದ ಮಂಗಳೂರು ಮತ್ತು ಗೋವಾ ಬಂದರಿನಲ್ಲಿ ಕ್ಯಾಸಿಯಾ ಆಮದು ಸ್ಥಗಿತಗೊಂಡಿರುವುದಾಗಿ ಕಣ್ಣನೂರಿನ ಪಯ್ಯಂಬಲ ನಿವಾಸಿ ಹಾಗೂ ಬೆಳೆಗಾರ ಲಿಯೋನಾರ್ಡ್ ಜಾನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದದ ಔಷಧೀಯ ಅಂಶಗಳನ್ನು ಹೊಂದಿರುವ ದಾಲ್ಚೀನಿಯನ್ನು ನೆರೆಯ ಶ್ರೀಲಂಕಾದಲ್ಲಿ ಮತ್ತು ಭಾರತದಲ್ಲಿ ಬೆಳೆಯಲಾಗುತ್ತದೆ. ಇದರ ಬೆಲೆ ಪ್ರತಿ ಕೆಜಿಗೆ 400 ರೂ.ಗಳಿಂದ 1500 ರೂ.ಗಳವರೆಗೆ ಇದೆ. ಅದೇ ಚೈನಾ, ಇಂಡೋನೇಷಿಯಾ, ವಿಯೆಟ್ನಾಂ ರಾಷ್ಟ್ರಗಳಲ್ಲಿನ ಅರಣ್ಯ ಉತ್ಪನ್ನವಾಗಿರುವ ‘ಕ್ಯಾಸಿಯಾ’ ಎನ್ನುವ ಚಕ್ಕೆ, ದಾಲ್ಚೀನಿಯನ್ನು ಹೋಲುತ್ತದಾದರು ಅತ್ಯಂತ ವಿಷಕಾರಕವಾಗಿದೆ. ಇದರ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ರೋಗಗಳು ಬರುವ ಸಾಧ್ಯತೆಗಳು ಹೆಚ್ಚು. ಆದರೆ, ದಾಲ್ಚೀನಿಯನ್ನು ಹೋಲುವ ಕ್ಯಾಸಿಯಾ ಬೆಲೆÉ ಪ್ರತಿ ಕೆಜಿಗೆ ಸರಿ ಸುಮಾರು 70 ರೂ.ಗಳಷ್ಟೆ ಆಗಿದೆಯೆಂದು ತಿಳಿಸಿದರು.

ಆರೋಗ್ಯಕ್ಕೆ ಹಾನಿಕಾರಕವಾಗಿದ್ದರು ಅತ್ಯಂತ ಕಡಿಮೆ ಬೆಲೆಗೆ ದೊರಕುವ ಕ್ಯಾಸಿಯಾವನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ ಬಂದರಿನ ಮೂಲಕ 37 ಲಕ್ಷ ಕೆಜಿ, ವಿಶಾಖಪಟ್ಟಣಂ ಬಂದರಿನ ಮೂಲಕ 8 ಲಕ್ಷ ಕೆಜಿ, ಚೆನ್ನೈ ಬಂದರಿನ ಮೂಲಕ 15 ಲಕ್ಷ ಹೀಗೆ ದೇಶದ ವಿವಿಧ ಬಂದರುಗಳಿಂದ ಕ್ಯಾಸಿಯಾವನ್ನು ಆಮದು ಮಾಡಿಕೊಂಡು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದು ವಿಶ್ವದ ಅತ್ಯಂತ ದೊಡ್ಡ ಭ್ರಷ್ಟಾಚಾರ ಪ್ರಕರಣವೆಂದು ಆತಂಕ ವ್ಯಕ್ತಪಡಿಸಿದರು.

ಆಹಾರ ಪದಾರ್ಥಗಳ ಆಮದಿನ ಸಂದರ್ಭ ದಕ್ಷಿಣ ಭಾರತದಲ್ಲಿ ಅವುಗಳನ್ನು ಪರೀಕ್ಷೆಗೆ ಒಳಪಡಿಸಲು ಇರುವ ಏಕೈಕ ಕೇಂದ್ರ ಮೈಸೂರಿನ ಆಹಾರ ಪರೀಕ್ಷಾ ಕೇಂದ್ರ್ರವಾಗಿದೆ. ಈ ಕೇಂದ್ರದಲ್ಲಿ ಹೊರದೇಶಗಳಿಂದ ಆಮದಾಗಿರುವ ಕ್ಯಾಸಿಯಾ ಪರೀಕ್ಷೆಗೆ ಒಳಪಟ್ಟು ಯಶಸ್ವಿಯಾಗಿ ಹೊರ ಬಂದಿಲ್ಲ. ಹೀಗಿದ್ದೂ ಅನಧಿಕೃತವಾಗಿ ಭಾರೀ ಪ್ರಮಾಣದ ಕ್ಯಾಸಿಯಾ ಆಮದಾಗುತ್ತಿದ್ದು, ಇದು ಇಡೀ ರಾಷ್ಟ್ರದ ಜನತೆಯ ಆರೋಗ್ಯ ಹದಗೆಡಿಸಲು ಸಾಕಾಗುವಷ್ಟು ಇದೆ ಎಂದು ಗಂಭೀರ ಆರೋಪ ಮಾಡಿದರು.

ಭಾರತೀಯ ವೈದ್ಯ ಪದ್ಧತಿಗಳಲ್ಲಿ ಒಂದಾಗಿರುವ ಆಯುರ್ವೇದ ಔಷಧಿಗಳಲ್ಲಿ ಔಷಧೀಯ ಅಂಶಗಳುಳ್ಳ ದಾಲ್ಚೀನಿ ಬದಲಾಗಿ ಕ್ಯಾಸಿಯಾ ಶೇ.70 ರಷ್ಟು ಬಳಕೆಯಾಗುತ್ತಿದೆ. ಪ್ರಸ್ತುತ ಕೇಂದ್ರ ಸರ್ಕಾರ ಆಯುರ್ವೇದ, ಯೋಗ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ ವೈದ್ಯ ಪದ್ಧತಿಗಳನ್ನು ಒಗ್ಗೂಡಿಸಿ ಇದಕ್ಕಾಗಿ ‘ಆಯುಷ್’ ಸಚಿವಾಲಯವನ್ನು ರಚಿಸುವ ಮೂಲಕ ಈ ವೈದ್ಯ ಪದ್ಧತಿಗಳ ಔಷಧಿ ತಯಾರಿಕೆಯ ಬಗ್ಗೆ ನಿಗಾ ವಹಿಸಿರುವುದು ಸ್ವಾಗತಾರ್ಹವೆಂದು ಲಿಯೋನಾರ್ಡೋ ಜಾನ್ ತಿಳಿಸಿದರು.

nkicmgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ತಾಯಿಯ ರಥಯಾತ್ರೆ

ಮುಂದಿನ ಸುದ್ದಿ »

ದೋಷ ನಿವಾರಣೆಗಾಗಿ ಜ.15 ರಂದು ಭಾಗಮಂಡಲದಲ್ಲಿ ವಿಶೇಷ ಪೂಜೆ

ಸಿನೆಮಾ

 • ಮದುವೆಯಾಗಲಿದ್ದಾರೆ ಲೂಸ್ ಮಾದ ಯೋಗೀಶ್

  May 23, 2017

  ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ. ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ...

  Read More
 • ಮಕ್ಕಳಿಗಾಗಿ ಮತ್ತೆ ಒಂದಾದ ಹೃತಿಕ್ ರೋಶನ್-ಸೂಸೇನ್

  May 23, 2017

  ನ್ಯೂಸ್ ಕನ್ನಡ-(23.5.17):ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು. ಆದರೆ ವಿಚ್ಛೇದನ ಪಡೆದ ಮೇಲೂ ...

  Read More
 • ಸೀರಿಯಲ್ ಗಳಲ್ಲಿ ಅವಕಾಶ ಸಿಗದೇ ಪೈಂಟರ್ ಆದ ಖ್ಯಾತ ನಟ!

  May 22, 2017

  ನ್ಯೂಸ್ ಕನ್ನಡ ವರದಿ-(22.5.17)ಇಸ್ಲಾಮಾಬಾದ್: ಪಾಕ್ ನಟ ಶಾಹಿದ್ ನಸೀಬ್  ಕೆಲಸವಿಲ್ಲದೆ ಗೋಡೆಗೆ ಬಣ್ಣಬಳಿಯುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಟಿವಿ ಸೀರಿಯಲ್‍ಗಳಲ್ಲಿ ನಟಿಸಿರುವ ಪ್ರತಿಭಾಂತ ನಟ ಈತ. ಈಗ ಒಂದು ಹೊತ್ತಿನ ಕೂಲಿಗಾಗಿ ಗೋಡೆಗೆ ಪೈಂಟ್ ಬಳಿಯುತ್ತಿದ್ದಾರೆ. ದುಲ್ಲಾರಿ, ...

  Read More
 • 80ರ ಹರೆಯದ ವೃದ್ಧೆಯ ಪಾತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್!

  May 20, 2017

  ನ್ಯೂಸ್ ಕನ್ನಡ ವರದಿ-(20.5.17): ನಟಿ ಕಂಗನಾ ಅವರು ತಮ್ಮ ಸ್ವಂತ ನಿರ್ದೇಶನದ “ತೇಜು” ಸಿನೆಮಾದಲ್ಲಿ ವೃದ್ಧೆ ಮಹಿಳೆಯ ಪಾತ್ರ ನಿರ್ವಹಿಸುವುದಾಗಿ ಘೋಷಿಸಿದ್ದಾರೆ. “ನನ್ನ ಮೊದಲ ನಿರ್ದೇಶನದ ‘ತೆಜು’ ಚಿತ್ರದಲ್ಲಿ ನಾನು 80 ವರ್ಷ ವಯಸ್ಸಿನ ಮಹಿಳೆ ಪಾತ್ರವಹಿಸುತ್ತೇನೆ. ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×