Tuesday January 10 2017

Follow on us:

Contact Us

ಕಾಮಗಾರಿಯಾದರೂ ನೀರು ಪೂರೈಕೆಯಿಲ್ಲ: ಅಧಿಕಾರಿಗಳಿಂದ ಅವ್ಯವಹಾರ ಜಿ.ಪಂ. ಸದಸ್ಯರಿಂದ ಆರೋಪ

ನ್ಯೂಸ್ ಕನ್ನಡ ವರದಿ(10.01.2017)-ಕಾರವಾರ: ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ, ಸರಕಾರದ ಯೋಜನೆ ಪಡೆಯಲು ವಿವಿಧ ಬ್ಯಾಂಕುಗಳಲ್ಲಿ ಬಡವರಿಗೆ ಸಾಲ ಸೌಲಭ್ಯ ನೀಡದಿರುವುದು, ಜಿಲ್ಲೆಯ ಆಯಾ ಭಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ವಿಷಯದಲ್ಲಿ ಮಂಗಳವಾರ ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ, ವಾದ ವಿವಾದಗಳು ನಡೆದವು.

ಸರಕಾರದಿಂದ ಮಂಜೂರಿಯಾದ ಯೋಜನೆಗಳ ಕಾಮಗಾರಿ ನಡೆದಿವೆ. ಜಲಮೂಲಗಳಿರುತ್ತವೆ. ಕಾಮಗಾರಿಯಾದ ಬಗ್ಗೆ ಗುತ್ತಿಗೆದಾರರಿಗೆ ಬಿಲ್ ಮೊತ್ತ ನೀಡಲಾಗಿತ್ತದೆ. ಆದರೆ ನೀರಿನ ಅವಶ್ಯಕತೆ ಇರುವ ಸಂದರ್ಭದಲ್ಲಿ ಜನರಿಗೆ ಟ್ಯಾಂಕ್ ಮೂಲಕ ನೀರು ಪೂರೈಸಲಾಗುತ್ತದೆ ಎಂದು ಸದಸ್ಯ ಆಲ್ಬರ್ಟ್ ಡಿಕೋಸ್ಟಾ ಆರೋಪಿಸಿದರು.

ಈ ಎಲ್ಲ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಬಳಿ ವಿಚಾರಿಸಿದರೆ ಸೂಕ್ತ ಮಾಹಿತಿ ನೀಡುವುದಿಲ್ಲ. ಇದರಿಂದಾಗಿ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಅಧಿಕಾರಿಗಳು ಭಾರಿ ಗೋಲಮಾಲ್ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ಇದಕ್ಕೆ ಅನೇಕ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಇನ್ನು ಕೆಲವೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉಲ್ಬಣಗೊಳ್ಳಲಿದೆ. ನೀರಿನ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಕ್ರಮಕೈಗೊಳ್ಳವ ಬದಲು, ಕ್ರಮಕೈಗೊಳ್ಳಲು ಈಗಲೇ ಪ್ರಾರಂಭಿಸಿ ಎಂದು ಸದಸ್ಯೆ ಗಾಯಿತ್ರಿ ಗೌಡ ಸಭೆಯ ಗಮನಕ್ಕೆ ತಂದರು.

ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಿ

ಕಾಮಗಾರಿಯ ವಹಿಸಿಕೊಂಡ ಗುತ್ತಿಗೆದಾರರು ಎಲ್ಲ ವ್ಯವಸ್ಥೆ ಇದ್ದೂ ಸಹ ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡದ ಪಕ್ಷದಲ್ಲಿ ಅಂಥ ಗುತ್ತಿಗೆದಾರರಿಗೆ ಮುಂದಿನ ದಿನದಲ್ಲಿ ಯಾವುದೇ ಕಾಮಗಾರಿ ನೀಡಬೇಕು. ಅಲ್ಲದೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ. ತಪ್ಪು ಕಂಡು ಬಂದರೆ ಅಂಥ ಗುತ್ತಿಗೆದಾರರ ಹೆಸರನ್ನು ಬ್ಲ್ಯಾಕ್‍ಲೀಸ್ಟ್‍ಗೆ ಸೇರಿಸಿ ಎಂದು ಸದಸ್ಯ ಆಲ್ಟರ್ಟ್ ಡಿಕೋಸ್ಟಾ ಸಭೆಗೆ ತಿಳಿಸಿದರು. ನೀರಿ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವ ನಿಟ್ಟಿನಲ್ಲಿ ಕೈಗೊಂಡ ಸಾಕಷ್ಟು ಕಾಮಗಾರಿಯಾಗಿದೆ. ಬಿಲ್ ಪಾವತಿಯಾಗಿದೆ. ಆದರೆ ನೀರಿನ ಪೂರೈಕೆ ಮಾತ್ರ ಆಗಿಲ್ಲ. ಎಲ್ಲ ಕಾಮಗಾರಿ ಸೂಕ್ತ ರೀತಿಯಲ್ಲಿ ಆಗಿವೆ ಎಂದು ಎಂದು ಮೇಲಾಧಿಕಾರಿಗೆ ಹಾಗೂ ಜಿಪಂ ಅಧ್ಯಕ್ಷರಿಗೆ ಅಧಿಕಾರಿಗಳು ಯಾಮಾರಿಸುತ್ತಿದ್ದಾರೆ ಎಂದರು.

ಬಳಿಕ ಸದಸ್ಯೆ ಉಷಾ ಹೆಗಡೆ ಮಾತನಾಡಿ, ತುರ್ತು ಕಾಮಗಾರಿ ನಡೆಸಿ ನೀರು ಪೂರೈಸಲು ಪ್ರತಿ ಜಿಪಂ ವ್ಯಾಪ್ತಿಗೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಕಳೆದ ಎರಡು ತಿಂಗಳ ಹಿಂದೆ ಆಶ್ವಾಸನೆ ನೀಡಲಾಗಿತ್ತು. ಆದರೆ ಇದುವರೆಗೂ ನೀಡಿಲ್ಲ. ಬೇಸಿಗೆ ಹತ್ತಿರದಲ್ಲೇ ಇದೆ. ತುರ್ತು ಕಾಮಗಾರಿಗಳನ್ನಾದರೂ ಶೀಘ್ರದಲ್ಲೇ ಕೈಗೆತ್ತಿಕೊಳ್ಳಿ ಎಂದು ಆಗ್ರಹಿಸಿದರು. ಇದಕ್ಕೆ ಬೆಂಬಲ ವ್ಯಕ್ತ ಪಡಿಸಿದ ಮಾತನಾಡಿದ ಸದಸ್ಯ ಜಿ. ಎನ್ ಹೆಡೆ ಮುರೇಗಾರ ಬೇಸಿಗೆಯಲ್ಲಿ ಬಾವಿಯ ನೀರು ಕಡಿಮೆಯಾಗುತ್ತಿದೆ ಈ ಸಂದರ್ಭದಲ್ಲಿ ಬಾವಿಯನ್ನು ಸುಮಾರು ಐದು ಫುಟು ಆಳ ಮಾಡಿದರೆ ನೀರಿನ ಸಮಸ್ಯೆಯನ್ನು ಸಾಕಷ್ಟು ನೀಗಿಸಬಹುದು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಾವಿಗಳ ಆಳ ಮಾಡಿಸಿಸುವ ಕಾಮಗಾರಿ ಕೈಗೊಂಡರೆ ಜಿಲ್ಲೆಯಲ್ಲಿ ಬಹಳಷ್ಟು ನೀರಿನ ಸಮಸ್ಯೆಗೆ ಪರಿಹಾರ ಒದಗುತ್ತದೆ. ಆದರೆ ಅತಿಕ್ರಮಣ ಜಾಗದಲ್ಲಿರುವ ಬಾವಿಗಳ ಕಾಮಗಾರಿ ಕೈಗೊಳ್ಳಲು ಆಸ್ಪದ ಇಲ್ಲ. ಜಿಲ್ಲೆಯಲ್ಲಿ ಶೇ. 80ರಷ್ಟು ಮನೆಗಳು ಅತಿಕ್ರಮಣ ಜಾಗದಲ್ಲಿವೆ. ಈ ಹಿನ್ನೆಲೆಯಲ್ಲಿ ನಿಯಮವನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ತಿಪ್ಪಣ್ಣ ಪಾಟೀಲ್, ಬಸವರಾಜ ದೊಡ್ಮನಿ, ಶಿವಾನಂದ ಆರ್. ಹೆಗಡೆ, ಜಿಲ್ಲಾ ಪಂಚಾಯತ್ ಸದಸ್ಯರು, ಅಧಿಕಾರಿಗಳು, ತಾಲೂಕು ಪಂಚಾಯತ್ ಅಧ್ಯಕ್ಷರು ಇದ್ದರು.

nksbkgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ಸಮಾಲೋಚನಾ ಸಭೆ: ವರದಕ್ಷಿಣೆ ರಹಿತ ವಿವಾಹದ ಬಗ್ಗೆ ಹಲವು ನಿರ್ಣಯ

ಮುಂದಿನ ಸುದ್ದಿ »

ಸುಳ್ಯ ಶ್ರೀಚೆನ್ನಕೇಶವನಿಗೆ ಜಾತ್ರೋತ್ಸವ ಸಂಭ್ರಮ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×