7 ರಿಂದ 10ನೇ ತರಗತಿಯ ಪರೀಕ್ಷೆಗಳು ಮುಂದೂಡಿಕೆ; ಸಾರ್ವಜನಿಕ ಶಿಕ್ಷಣೆ ಇಲಾಖೆ ಅಧಿಕೃತ ಆದೇಶ

0
48

ನ್ಯೂಸ್ ಕನ್ನಡ ವರದಿ: ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ರಾಜ್ಯದ 7ರಿಂದ 10ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್ 31, 2020ರ ನಂತ್ರ ನಡೆಸಲಾಗುತ್ತದೆ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಣೆ ಮಾಡಿತ್ತು. ಇದೀಗ ಏಪ್ರಿಲ್ 14, 2020ರ ವರೆಗೆ ಇಡೀ ಭಾರತವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ, 7ರಿಂದ 10ನೇ ತರಗತಿಯ ಪರೀಕ್ಷೆಯನ್ನು ಏಪ್ರಿಲ್ 20, 2020ರ ವರೆಗೆ ಮುಂದೂಡಿಕೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೂಡಿದ ಆದೇಶ ಹೊರಡಿಸಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ನೋವೆಲ್ ಕೊರೊನಾ ವೈರಸ್ ಕೋವಿಡ್-19 ಸೋಂಕು ತಡೆಗಟ್ಟುವಿಕೆಗೆ ಮುಂಜಾಗ್ರತ ಕ್ರಮವಾಗಿ ದಿನಾಂಕ 14-03-2020ರಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು 31-03-2020ರವರೆಗೆ ಮುಂದೂಡಿ ಪರೀಕ್ಷಾ ಪೂರ್ವಸಿದ್ಧತಾ ರಜೆಯನ್ನು ಘೋಷಿಸಲಾಗಿತ್ತು.

ಆದ್ರೇ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವುದು ಮುಂದುವರೆಯುತ್ತಿರುವುದರಿಂದ ಹಾಗೂ ದಿನಾಂಕ 15-04-2020ರವರೆಗೆ ಇಡೀ ರಾಷ್ಟ್ರವನ್ನು ಲಾಕ್ ಡೌನ್ ಮಾಡುವಂತೆ ಮಾನ್ಯ ಪ್ರಧಾನ ಮಂತ್ರಿಗಳು ಘೋಷಿಸಿರುವ ಹಿನ್ನಲೆಯಲ್ಲಿ ಈ ಕೆಳಕಂಡ ಪ್ರಕ್ರಿಯೆಗಳನ್ನು ದಿನಾಂಕ 20-04-2020ರ ವರೆಗೆ ಮುಂದೂಡಲಾಗಿದೆ.

7ರಿಂದ 9ನೇ ತರಗತಿಯ ಪರೀಕ್ಷೆಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರ್ ಟಿ ಇ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಗಳು ಶಾಲೆಗಳಲ್ಲಿ 2020-21ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆಗಳು ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳ ಪರಿಕಷ್ಕೃತ ವೇಳಾ ಪಟ್ಟಿಯನ್ನು ದಿನಾಂಕ 24-04-2020ರ ನಂತ್ರ ಪ್ರಕಟಿಲಾಗುವುದು. ಈ ವಿಷಯವನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಾಟ್ಸ್ ಅಪ್, ಎಸ್ ಎಂ ಎಸ್, ಇ ಮೇಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ರವಾನಿಸಲು ಶಾಲಾ ಮುಖ್ಯ ಶಿಕ್ಷಕರು, ಶಾಲಾ ಆಡಳಿತ ಮಂಡಳಿಯವರಿಗೆ ಸೂಚಿಸಿ ಸಾರ್ವಜನಿಕರ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here