ಬಿಎಲ್ ಸಂತೋಷ್ ಮುಂದಿನ ಮುಖ್ಯಮಂತ್ರಿ, ತಲೆಕೆಟ್ಟವರ ಮಾತು ಅಂದ್ರು ಈಶ್ವರಪ್ಪ

0
802

ನ್ಯೂಸ್ ಕನ್ನಡ ವರದಿ: ಉಪ ಚುನಾವಣೆ ಬಳಿಕ ಬಿಎಸ್ ಯಡಿಯೂರಪ್ಪ ಬದಲಿಗೆ‌ ಬಿ.ಎಲ್. ಸಂತೋಷ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ನಿಮ್ಮಂತವರು ಪ್ರಶ್ನೆ ಕೇಳಿದಾಗ ತಲೆ ಕೆಟ್ಟವರು ಹಾಗೆ ಹೇಳುತ್ತಾರೆ. ಇದರಲ್ಲಿ ಅರ್ಥವೇ ಇಲ್ಲ, ಯಡಿಯೂರಪ್ಪ ಅವರೇ ಮುಂದಿನ ಮೂರುವರೆ ವರ್ಷಗಳವರೆಗೆ ಮುಖ್ಯಮಂತ್ರಿ ಆಗಿರ್ತಾರೆ ಎಂದರು.

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಹೆಚ್ಚಿನ‌ ಸ್ಥಾನ ಗೆದ್ದು ಬಹುಮತ ಪಡೆಯುವ ಕಾರಣ ಅನ್ಯ ಪಕ್ಷಗಳ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಪಕ್ಷದಲ್ಲಿ ಸಮಸ್ಯೆಗೆ ತಾವಾಗಿಯೇ ಪಕ್ಷ ತೊರೆದರೆ ಅದಕ್ಕೆ ನಾವು ಹೊಣೆಯಲ್ಲ. ನಂತರ ಅವರಾಗಿಯೇ ಬಿಜೆಪಿ ಪಕ್ಷಕ್ಕೆ ಬಂದರೆ ನಾವೇನೂ ಮಾಡಕ್ಕಾಗಲ್ಲ ಎಂದರು.

LEAVE A REPLY

Please enter your comment!
Please enter your name here