ರಾಕ್ಷಸರ ಬಳಿ ಕೊರೊನ ಬರೋದಿಲ್ಲ, ನನಗಂತೂ ಬಂದಿಲ್ಲ: ಸಚಿವ ಈಶ್ವರಪ್ಪ

0
147

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ, ರಾಕ್ಷಸರ ಹತ್ತಿರ ಕೊರೋನಾ ಬರೋದಿಲ್ಲ. ನಿಮಗೇನಾದ್ರೂ ಬಂದಿದ್ಯಾ..? ನನಗಂತೂ ಬಂದಿಲ್ಲ ಎಂಬುದಾಗಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ಸುದ್ದಿಗೋಷ್ಠಿಯಲ್ಲಿ ಕೊರೋನಾ ಭೀತಿಯ ನಡುವೆ ನಗೆಕಡಲಲ್ಲಿ ತೇಲಿಸಿದ ಪ್ರಸಂಗಕ್ಕೆ ಸಾಕ್ಷಿಯಾದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ, ಸುದ್ದಿಗೋಷ್ಠಿಯ ಆರಂಭದಲ್ಲಿ ರಾಕ್ಷಸರಿಗೆ ಕೊರೋನಾ ಬರೋದಿಲ್ಲ. ನಿಮಗೇನಾದ್ರೂ ಬಂದಿದ್ಯಾ ಎಂಬುದಾಗಿ ಪ್ರಶ್ನೆ ಮಾಡಿದ್ದಲ್ಲದೇ, ನನಗಂತೂ ಬಂದಿಲ್ಲ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದರು.

ಇನ್ನೂ ಮುಂದುವರೆದು, ಕೊರೋನಾ ಬರುತ್ತದೆ ಎಂಬುದಾಗಿ ಹೆದರಿಕೆಯಿಂದ ಮನೆಯಲ್ಲಿ ಕುಳಿತುಕೊಂಡ್ರೇ ಕೆಲಸ ಮಾಡೋಕ ಆಗುತ್ತಾ..? ಮನಸ್ಸಿನಲ್ಲಿ ಆತ್ಮಸ್ಥೈರ್ಯ ತುಂಬಿಕೊಂಡು ಕೆಲಸಕ್ಕೆ ಇಳಿಯಬೇಕು. ರೋನಾ ಬರುತ್ತದೆ ಎಂದು ಹೆದರಿಕೊಂಡು ಶಾಸಕರು, ಸಚಿವರು ಸಂಸದರು ಮನೆಯಲ್ಲೇ ಉಳಿದುಕೊಂಡರೆ ಅಭಿವೃದ್ಧಿ ಕಾರ್ಯಗಳ ಗತಿಯೇನು? ತಲೆ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here