Thursday December 22 2016

Follow on us:

Contact Us
Editorial1

ಆದಿವಾಸಿಗಳ ಹೋರಾಟ ಹತ್ತಿಕ್ಕಲು ಸೌಹಾರ್ದತೆ ಮೆರೆದ ಕಾಂಗ್ರೆಸ್-ಬಿಜೆಪಿ

ರಾಜ್ಯದಲ್ಲಿ ಯಾವ ಸರಕಾರವಿದ್ದರೂ, ಆದಿವಾಸಿಗಳ ಮತ್ತು ಹಿಂದುಳಿದವರಿಗೆ ನ್ಯಾಯಕೊಡಲು ಸಾಧ್ಯವಿಲ್ಲ ಎನ್ನುವ ಸತ್ಯಾಂಶ ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿಗೆ ತಳ್ಳಿ ಮಜಾ ನೋಡುತ್ತಿರುವ ಘಟನೆಯು ಸಾಬೀತುಪಡಿಸಿದೆ. ತೀರಾ ಬಡತನವನ್ನು ಎದುರಿಸುತ್ತಿದ್ದ ಆದಿವಾಸಿಗಳ ಮನೆಗಳನ್ನು ಜೆಸಿಬಿ ಮೂಲಕ ಡಿಸೆಂಬರ್ 7ರಂದು  ಕೊಡಗು ಜಿಲ್ಲಾಡಳಿತ  ಸರ್ವನಾಶ ಮಾಡಿ ಅವರನ್ನು ಬೀದಿಪಾಲುಗೊಳಿಸಿದೆ. ಮಹಿಳೆಯರು ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ಬೆತ್ತಲೆ ಪ್ರತಿಭಟನೆಯನ್ನು ಮಾಡಿದರೂ ನಿಷ್ಕರುಣಿ ಅಧಿಕಾರಿಗಳಿಗೆ ಕರುಣೆಯೇ ಬರಲಿಲ್ಲ. ಆ ಬಳಿಕ ಮಳೆ ಚಳಿಯ ನಡುವೆಯೇ ಆದಿವಾಸಿಗಳು  ದಾರುಣ ಸ್ಥಿತಿಯಲ್ಲಿ ಜೀವನ ಸಾಗಿಸಿದ್ದರು. ಮಕ್ಕಳು ಮಹಿಳೆಯರು ಎನ್ನದೇ ಮರಗಳಡಿಯಲ್ಲಿ ಮಲಗುವಂತಾಗಿತ್ತು. ಆಹಾರ, ನೀರಿನ ಸಮಸ್ಯೆಯೇರ್ಪಟ್ಟಿತ್ತು. ಮಕ್ಕಳು ಆರೋಗ್ಯ ಸಮಸ್ಯೆಯಿಂದಾಗಿ ಅಸ್ವಸ್ಥರಾಗಿದ್ದರು. ಈ ಸಂದರ್ಭಗಳಲ್ಲಿ ಕೊಡಗು ಜಿಲ್ಲೆಯ ಯಾವುದೇ ಸಂಘಟನೆಗಳಿಗೆ, ರಾಜಕೀಯ ಪಕ್ಷಗಳಿಗೆ ಇವರ ಸಮಸ್ಯೆಯನ್ನು ಕೇಳಬೇಕು ಎನಿಸಿರಲಿಲ್ಲ.  ಆದರೆ ಇದೇ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ವಂಚಿತರ ಹಕ್ಕುಗಳ ಸಮಿತಿಯು ದಿಡ್ಡಳ್ಳಿಗೆ ಆಗಮಿಸಿ ಆದಿವಾಸಿಗಳ ಪರ ಧ್ವನಿಯೆತ್ತಿತು. ಇದರಿಂದಾಗಿ ಆದಿವಾಸಿಗಳ ಸಮಸ್ಯೆಯು ಹೊರಪ್ರಪಂಚಕ್ಕೆ ತಿಳಿಯುವಂತಾಗಿತ್ತು.

ಭೂಮಿ ಮತ್ತು ವಸತಿ ವಂಚಿತರ ಹಕ್ಕುಗಳ ಸಮಿತಿಯ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ಈ ಹೋರಾಟವನ್ನು ಹತ್ತಿಕ್ಕಲು ವ್ಯವಸ್ಥಿತ ಪ್ರಯತ್ನವೊಂದು ಆರಂಭವಾಯಿತು. ಇದರ ನಡುವೆಯೇ ಸಂಸದ ಪ್ರತಾಪ ಸಿಂಹರು ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ಆದಿವಾಸಿಗಳ ವಿರುದ್ಧ ಸಮರ ಸಾರಿದ್ದರು. ಸಂಸದರಿಗೆ ಆದಿವಾಸಿಗಳು ಏನು ದ್ರೋಹ ಬಗೆದಿದ್ದಾರೋ ತಿಳಿಯದು. ಆದರೆ ಈ ಹೋರಾಟದ ವಿರುದ್ಧ ಸಂಸದರಂತು ತಿರುಗಿ ಬಿದ್ದು, ಆದಿವಾಸಿಗಳ ಪರ ನಿಂತು ಅವರ ಸಮಸ್ಯೆಗಳನ್ನು ಸರಕಾರಕ್ಕೆ ತಿಳಿಸಿದ  ಭೂಮಿ ಮತ್ತು ವಸತಿ ವಂಚಿತರ ಹಕ್ಕುಗಳ ಸಮಿತಿಯ ಕಾರ್ಯಕರ್ತರನ್ನು ಹೊರಗಿನವರು ಎಂದು ಹೇಳಿಕೆ ನೀಡಿದ್ದರು. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ,  ಕೊಡಗಿನ ದಿಡ್ಡಹಳ್ಳಿಯ ಆದಿವಾಸಿಗಳ ಪುನರ್ವಸತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯ ನಂತರವೂ ಆದಿವಾಸಿಗಳ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲಿಲ್ಲ. ಯಾವ ಜಿಲ್ಲಾಧಿಕಾರಿಯೂ ಯಾವ ಉಸ್ತುವಾರಿ ಸಚಿವರಿಂದಲೂ ಆದಿವಾಸಿಗಳ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗಲಿಲ್ಲ.

ಈ ನಡುವೆ ವಿವಿಧ ಸಂಘಟನೆಗಳು ಆದಿವಾಸಿಗಳ ಬೆನ್ನಿಗೆ ನಿಂತು ಹೋರಾಟವನ್ನು ತೀವ್ರಗೊಳಿಸಿ ಸರಕಾರಕ್ಕೆ ಬಿಸಿಮುಟ್ಟಿಸಲು ಯೋಜನೆ ರೂಪಿಸಿದ್ದವು. ಪರಿಣಾಮವಾಗಿ ಮಡಿಕೇರಿ ಚಲೋ ಎಂಬ ಹೋರಾಟವು ರೂಪುಗೊಂಡಿತ್ತು. ಇದೇ ಡಿಸೆಂಬರ್ 23ರಂದು ಈ ಬೃಹತ್ ಪ್ರತಿಭಟನೆಯನ್ನು ನಡೆಸಲು ದಿನ ನಿಗದಿಯಾಗಿತ್ತು. ಇದರ ನಡುವೆಯೇ ಸಂಸದ ಪ್ರತಾಪ್ ಸಿಂಹರಿಂದ ಅವಮಾನಕ್ಕೊಳಗಾಗಿದ್ದ ಆದಿವಾಸಿಗಳನ್ನು ಸಮಾಧಾನಪಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜೊತೆಯಲ್ಲಿ ಬಿಜೆಪಿಗರು ಆದಿವಾಸಿಗಳ ಬಳಿಗೆ ಬಂದಿದ್ದರು. ಈ ಹಿಂದೆ ಸಂಸದ ಪ್ರತಾಪ್ ಸಿಂಹ ಹೋರಾಟಗಾರರಲ್ಲೊಂದು ರೀತಿ ಮಾತನಾಡಿ ಹೊರಗಡೆ ಮಾಧ್ಯಮಗಳಿಗೊಂದು ರೀತಿಯ ಹೇಳಿಕೆ ನೀಡಿ ಬಿಜೆಪಿ ಮೇಲೆ ಆದಿವಾಸಿಗಳಿಗೆ ಇದ್ದ ನಂಬಿಕೆಯನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಯಡಿಯೂರಪ್ಪ ಅವರ ಎದುರಲ್ಲಿಯೇ ಆದಿವಾಸಿಗಳು ಮತ್ತು ಹೋರಾಟಗಾರರು ಬಿಜೆಪಿಗೆ ಧಿಕ್ಕಾರ ಕೂಗಿದ್ದರು. ಈ ವಿದ್ಯಮಾನದ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತವು ಸೆಕ್ಷನ್ 144 ಜಾರಿ ಮಾಡಿರುವುದು ಇದೀಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಒಂದೆಡೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಲಸ್ಯತನ ಮತ್ತೊಂದೆಡೆ ಬಿಜೆಪಿಗರ ದ್ವೇಷವನ್ನು ಕಟ್ಟಿಕೊಂಡು ಸಂಕಷ್ಟದಲ್ಲಿರುವ ಆದಿವಾಸಿಗಳಿಂದ ಅವರಿಗೆ ಆಸರೆಯಾಗಿರುವ ಮಾನವ ಹಕ್ಕುಗಳ ಹೋರಾಟಗಾರನ್ನು ಬೇರ್ಪಡಿಸುವ ವ್ಯವಸ್ಥಿತ ಷಡ್ಯಂತ್ರವೊಂದು ಹುಟ್ಟಿಕೊಂಡಿತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾತಿಗೆ ಕೊಡಗು ಜಿಲ್ಲಾಡಳಿತ ಕವಡೆಕಾಸಿನ ಕಿಮ್ಮತ್ತು ನೀಡಲಿಲ್ಲ. ಮುಖ್ಯಮಂತ್ರಿಗಳ ಮಾತಿನಂತೆ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತವು ಮುಂದಾಗಿದ್ದರೆ, ಮತ್ತಷ್ಟು ಪ್ರತಿಭಟನೆಗಳನ್ನು ಅದು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿದ್ದರೂ, ಕಾಂಗ್ರೆಸಿನ ಯಾವ ನಾಯಕರಿಗೂ ದಿಡ್ಡಳ್ಳಿಗೆ ಭೇಟಿ ನೀಡಿ ವಿಚಾರಿಸಬೇಕು ಎಂದು ಅನ್ನಿಸಲೇ ಇಲ್ಲ. ಸಿದ್ದರಾಮಯ್ಯರ ಪ್ರತಿ ನಡೆಯನ್ನು ವಿರೋಧಿಸುತ್ತಿದ್ದ ಮತ್ತು ಬದಲಾವಣೆಯ ಹರಿಕಾರ ಎಂದೇ ಹೇಳಿಕೊಳ್ಳುತ್ತಿರುವ ಕೊಡಗಿನ ಸಮೀಪ ಜಿಲ್ಲೆಯಲ್ಲಿರುವ ಜನಾರ್ದನ ಪೂಜಾರಿಯವರೇ ಆದಿವಾಸಿಗಳ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡಿಲ್ಲ. ಇನ್ನು ಬೇರೆ ನಾಯಕರು ಹೇಗೆ ತಾನೆ ಮಾತನಾಡಿಯರು. ಕಾಂಗ್ರೆಸ್ ನ ಜಡ ಹಿಡಿದ ಸಚಿವರುಗಳಿಗೆ ದಿಡ್ಡಳ್ಳಿಗೆ ಬರಲೂ ಕಷ್ಟವಾಗುತ್ತಿದೆ. ಸಚಿವ ಆಂಜನೇಯರಿಗೆ ಉಡುಪಿಯ ಕೊರಗರ ಹಾಡಿಯಲ್ಲಿ ವಾಸ್ತವ್ಯ ಹೂಡಿ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಡಿಸೆಂಬರ್ 31ಕ್ಕೆ ಬರುತ್ತಿದ್ದಾರೆ. ಇವರಿಗೆ ಆದಿವಾಸಿಗಳ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಅವರು, ದಿಡ್ಡಳ್ಳಿಯಲ್ಲಿ ಬಂದು ವಾಸ್ತವ್ಯ ಹೂಡುತ್ತಿದ್ದರು. ದಿಡ್ಡಳ್ಳಿಯ ಆದಿವಾಸಿಗಳ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿಗರು ದ್ವೇಷಕಾರುತ್ತಿದ್ದು, ಇದರ ಹಿಂದೆ ಕಾಫಿ ಎಸ್ಟೇಟ್ ಗಳ ಹಿತಕಾಯುವ ವ್ಯವಸ್ಥಿತ ಸಂಚು ಕಂಡುತ್ತಿದೆ.

ಸೆಕ್ಷನ್ 144 ಹಾಕುವ ಮೂಲಕ ಆದಿವಾಸಿಗಳ ಪರಿಣಾಮಕಾರಿ ಹೋರಾಟವನ್ನು ಹತ್ತಿಕ್ಕಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗರು ಸೌಹಾರ್ದತೆ ಮೆರೆಯುತ್ತಿದ್ದಾರೆ. ಇವುಗಳ ನಡುವೆಯೇ ಹೋರಾಟಗಾರರನ್ನು ನಕ್ಸಲರು ಎಂದು ಬಿಂಬಿಸಲು ಕೊಡಗು ಜಿಲ್ಲಾಡಳಿತ ವ್ಯವಸ್ಥಿತವಾದ ಸಂಚನ್ನು ರೂಪಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕೈಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪ್ರಜಾಪ್ರಭುತ್ವ ಮಾದರಿಯ ಹೋರಾಟ ನಡೆಸುತ್ತಿರುವವರು ನಕ್ಸಲರಾಗಲು ಹೇಗೆ ಸಾಧ್ಯ? ಅದೂ ಬಿಜೆಪಿಗೆ ಧಿಕ್ಕಾರ ಕೂಗಿದ ಬಳಿಕ ಏಕಾಏಕಿ ನಕ್ಸಲರ ಆಗಮನ ಎಂಬ ವದಂತಿ ಹರಡಿದ್ದು ಹೇಗೆ? ಇದರ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ನ ಅನೈತಿಕ ಸಂಬಂಧಗಳಿವೆ ಎಂಬ ಶಂಕೆಗಳು ಉಂಟಾಗಿವೆ.

-ಸಂಪಾದಕರು

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನ್ಯೂಸ್ ಕನ್ನಡ ಓದುಗರಲ್ಲಿ ಒಂದು ವಿನಂತಿ

ಮುಂದಿನ ಸುದ್ದಿ »

ಆಸ್ಪತ್ರೆ ಖಾಸಗೀಕರಣದ ಬಗ್ಗೆ ಜನರಿಗಿಲ್ಲದ ಆಸಕ್ತಿ ಆರೋಗ್ಯ ಸಚಿವರಿಗೇಕೆ?

ಸಿನೆಮಾ

 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More
 • kaabil-hoon-lyrics-title-song-hrithik-roshan-yami-gautam

  ಬಾಕ್ಸ್ ಆಫೀಸ್ ನಲ್ಲಿ “ಕಮಾಲ್” ಮಾಡಿದ “ಕಾಬಿಲ್”

  February 8, 2017

  ನ್ಯೂಸ್ ಕನ್ನಡ(8-2-2017): ಹೃತಿಕ್ ರೋಶನ್-ಯಾಮಿ ಗೌತಮ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರ “ಕಾಬಿಲ್” ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಿದ್ದು, ಸುಮಾರು 80 ಕೋಟಿ ರೂ. ಗಳಿಸಿದೆ. ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಗಳಿಸಿದ ಕಾಬಿಲ್ ಎರಡನೆ ವಾರಾಂತ್ಯದಲ್ಲಿ 14.55 ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×