ಬ್ಯಾರೀಸ್ ಚೇಂಬರ್ಸ್ ಯುಎಈ ಸಂಘಟನಾ ಕಾರ್ಯದರ್ಶಿ ಅಶ್ರಫ್ ಷಾ ಮಂತೂರ್’ಗೆ ಪ್ರತಿಷ್ಠಿತ ಕದಂಬ ಪ್ರಶಸ್ತಿ

0
12

ನ್ಯೂಸ್ ಕನ್ನಡ ವರದಿ ರಾಮನಗರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ 12ನೇ ರಾಜ್ಯ ಸಮಾವೇಶ ಮತ್ತು ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಬ್ಯಾರೀಸ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಯುಎಈ ಘಟಕದ ಸಂಘಟನಾ ಕಾರ್ಯದರ್ಶಿ ಅಶ್ರಫ್ ಷಾ ಮಂತೂರ್ ಅವರಿಗೆ ಪ್ರತಿಷ್ಠಿತ ಕಂದಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಮನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ ಕೃಷ್ಣೇಗೌಡರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆದ ರಾಜ್ಯ ಸಮಾವೇಶದ ಕನ್ನಡ ರಥಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿ ಉದ್ಘಾಟಿಸಿದರು.

ಸಮಾರಂಭದ ಮುಖ್ಯ ಆಕರ್ಷಣೆಯಾದ, ಕನ್ನಡ ನಾಡು ನುಡಿ ಮತ್ತು ಕನ್ನಡಿಗರ ಸೇವೆಯನ್ನು ಗುರುತಿಸಿ ನೀಡಲ್ಪಡುವ ಪ್ರತಿಷ್ಠಿತ ಕದಂಬ ಪ್ರಶಸ್ತಿಯನ್ನು ಈ ಬಾರಿ ಕರಾವಳಿ ಮೂಲದ ಅನಿವಾಸಿ ಭಾರತೀಯ ಯುವ ಉದ್ಯಮಿ ಅಶ್ರಫ್ ಷಾ ಮಾಂತೂರ್ ಪಡೆದರು.

ಗಲ್ಫ್ ರಾಷ್ಟ್ರ ದುಬೈನ ಖ್ವರಿಯತ್ ಅಲ್ ಶಾಮ್ಸ್ ಕಾಂಟ್ರಾಕ್ಟಿಂಗ್ ಎಂಬ ಕಟ್ಟಡ ನಿರ್ಮಾಣ ಕಂಪನಿಯ ಮಾಲಕರಾದ ಯಶಸ್ವಿ ಉದ್ಯಮಿ ಅಶ್ರಫ್ ಗಲ್ಫ್ ರಾಷ್ಟ್ರಗಳಲ್ಲಿ “ಕನ್ನಡಿಗರಿಗಾಗಿ ಉದ್ಯೋಗ” ಎಂಬ ನಿರಂತರ ಅಭಿಯಾನ ಹಾಗೂ ಕಾನೂನಾತ್ಮಕ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಉಚಿತ ಕಾನೂನು ಸಲಹೆ ಸೌಲಭ್ಯ ನೀಡುವ ದುಬೈ ಅನಿವಾಸಿ ಕನ್ನಡಿಗರು ಸಂಸ್ಥೆಯ ಕಾರ್ಯದರ್ಶಿಯಾಗಿ ಸಕ್ರಿಯವಾಗಿದ್ದು, ಅವರು ತಮ್ಮ ಸಂಸ್ಥೆಯಲ್ಲೂ ಹಲವಾರು ಕನ್ನಡಿಗರಿಗೆ ಉದ್ಯೋಗವಕಾಶ ನೀಡಿದ್ದಾರೆ ಹಾಗೂ ಉದ್ಯೋಗ ಅರಸಿ ಬಂದ ನೂರಾರು ಕನ್ನಡಿಗರಿಗೆ ಉದ್ಯೋಗ ಕೊಡಿಸಲು ನೆರವಾಗಿದ್ದಾರೆ.

LEAVE A REPLY

Please enter your comment!
Please enter your name here