ದುಬೈಯಲ್ಲಿ ಯಶಸ್ವಿಯಾದ ಧ್ವನಿ ರಂಗಪ್ರತಿಷ್ಠಾನದ ‘ಮೃಚ್ಛಕಟಿಕ’

0
134

ಧ್ವನಿ ಪ್ರತಿಷ್ಠಾನ ತನ್ನ32 ವರ್ಷ ಯಶಸ್ವಿ ಹೆಜ್ಜೆಗುರುತನ್ನು ಮೂಡಿಸಿ 33ನೇ ವರ್ಷಾಚರಣೆಯ ವಿಶೇಷ ಸಂಭ್ರಮಾಚರಣೆಯರಂಗ ಪ್ರಯೋಗ ಮೂಲ ಸಂಸ್ಕೃತ ನಾಟಕಡಾ. ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್‍ರವರ ಕನ್ನಡ ಅನುವಾದ “ಮೃಚ್ಛಕಟಿಕ” ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಶ್ರೀ ಪ್ರಕಾಶ್‍ರಾವ್ ಪಯ್ಯಾರ್‍ರವರ ನಿರ್ದೆಶನದಲ್ಲಿ 2019 ಜನವರಿ 8ನೇ ತಾರೀಕು ಶುಕ್ರವಾರ ಸಂಜೆ7.00 ಗಂಟೆಗೆ ರಂಗವೇರಿಸಲಾಯಿತು. ಶ್ರೀಮತಿ ರಂಜನಿ ಕೃಷ್ಣಪ್ರಸಾದ್ ಮತ್ತು ಅಕ್ಷತಾ ಆಚಾರ್ಯರವರಿಂದ ಭರತನಾಟ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

“ರಂಗ ಸಿರಿ ಉತ್ಸವ- 2019 ” ಕಾನ್ಸುಲ್‍ಜನರಲ್‍ದುಬಾಯಿ – ಗೌರವಾನ್ವಿತ ಶ್ರೀ ವಿಪುಲ್‍ರವರಿಂದಉದ್ಘಾಟನೆ. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾನ್ಸುಲೇಟ್‍ ಜನರಲ್‍ ದುಬಾಯಿ ಗೌರವಾನ್ವಿತ ಶ್ರೀ ವಿಪುಲ್ “ರಂಗ ಸಿರಿ ಉತ್ಸವ2109 ” ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಗೌರವ ಅತಿಗಳಾಗಿ ಕನ್ನಡ ಚಲನ ಚಿತ್ರರಂಗದ ಪ್ರಖ್ಯಾತ ಹತ್ತು ಬಾರಿರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿರುವ ಪಿ. ಶೇಷಾದ್ರಿ, ಗಲ್ಫ್ ಮೆಡಿಕಲ್‍ಯುನಿವರ್ಸಿಟಿ ಉಪಕುಲಪತಿಗಳಾದ ಪ್ರೋ ಎಂ. ವೆಂಕಟರಮಣ ಹಾಗೂ “ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ಪುರಸ್ಕೃತರಂಗಭೂಮಿ ತಪಸ್ವಿ ಶ್ರೀ ಗುಂಡಣ್ಣ ಸಿ.ಕೆ. ಮತ್ತು ಪ್ರಮುಖ ಪ್ರಾಯೋಜಕರು ಗಳಾದ ಶ್ರೀ ಗುಣಶೀಲ್ ಶೆಟ್ಟಿ. ಶ್ರೀ ಪ್ರವೀಣ್‍ಕುಮಾರ್ ಶೆಟ್ಟಿ, ಶ್ರೀ ಹರೀಶ್ ಶೇರಿಗಾರ್ ಉಪಸ್ತಿತರಿದ್ದರು.

ಧ್ವನಿ ಪ್ರತಿಷ್ಠಾನದಅಧ್ಯಕ್ಷರಾಗಿರುವ ಶ್ರೀ ಪ್ರಕಾಶ್‍ರಾವ್ ಪಯ್ಯಾರ್‍ರವರು ಸರ್ವರನ್ನು ಸ್ವಾಗತಿಸಿದರು. ಗೌರವಾನ್ವಿತ ಶ್ರೀ ವಿಪುಲ್‍ರವರಿಗೆಧ್ವನಿ ಪ್ರತಿಷ್ಠಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. “ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ರಂಗಭೂಮಿ ತಪಸ್ವಿ ಶ್ರೀ ಗುಂಡಣ್ಣ ಸಿ.ಕೆ. ರವರಿಗೆ ಪ್ರದಾನಿಸಲಾಯಿತು.

ನಾಲ್ಕು ದಶಕಗಳಿಂದ ಕನ್ನಡರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ರಂಗಭೂಮಿ ತಪಸ್ವಿ ಶ್ರೀ ಗುಂಡಣ್ಣ ಸಿ.ಕೆ. ರವರಿಗೆ “ಧ್ವನಿ ಶ್ರೀರಂಗ” ರಂಗ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿಯನು ಸ್ವೀಕರಿಸಿದ ಗುಂಡಣ್ಣರವರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿ ವಿದೇಶದ ಮಣ್ಣಿನಲ್ಲಿ ಕನ್ನಡರಂಗಭೂಮಿಯ ಪ್ರಯೋಗವನ್ನು ಹಲವಾರು ವರ್ಷಗಳಿಂದ ಶಿಸ್ತುಭದ್ಧವಾಗಿ ನಡೆಸಿಕೊಂಡು ಬರುತ್ತಿರುವಧ್ವನಿ ಪ್ರತಿಷ್ಠಾನಕ್ಕೆ ಶುಭವನ್ನು ಹಾರೈಸಿದರು.

ಗೌರವ ಅತಿಗಳಾಗಿ ಕನ್ನಡ ಚಲನ ಚಿತ್ರರಂಗದ ಪ್ರಖ್ಯಾತ ಹತ್ತು ಬಾರಿರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿರುವ ಪಿ. ಶೇಷಾದ್ರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದೇಶಲ್ಲಿಕನ್ನಡ ಭಾಷೆಯನ್ನು ವೈಭವೀಕರಿಸಿ ಕನ್ನಡ ಭಾಷೆಯನ್ನು ಶ್ರೀಮಂತವಾಗಿರಿಸಿರುವ ಧ್ವನಿ ಪ್ರತಿಷ್ಠಾನಕ್ಕೆ ತಮ್ಮ ಮೆಚ್ಚುಗೆಯನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.

ಗಲ್ಫ್ ಮೆಡಿಕಲ್‍ ಯುನಿವರ್ಸಿಟಿ ಉಪಕುಲಪತಿಗಳಾದ ಪ್ರೋ ಎಂ. ವೆಂಕಟರಮಣರವರನ್ನು ಸನ್ಮಾನಿಸಿ ಗೌರವಿಸಲಾಯಿತು. 2018ನೇ ಸಾಲಿನ ಅಂತಾರಾಷ್ಟ್ರೀಯ “ಧ್ವನಿ ಪುರಸ್ಕಾರ” ಶ್ರೀಮತಿ ಗೋಪಿಕಾ ಮಯ್ಯರವರಿಗೆ ಗೌರವಿಸಲಾಯಿತು.

ಕನ್ನಡ ರಂಗಭೂಮಿಗೆ ಹಾಗು ಮಾದ್ಯಮಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ 2018ನೇ ಸಾಲಿನ ಅಂತಾರಾಷ್ಟ್ರೀಯ “ಧ್ವನಿ ಪುರಸ್ಕಾರ” ಪ್ರಶಸ್ತಿಯನ್ನು ಶ್ರೀಮತಿ ಗೋಪಿಕಾ ಮಯ್ಯರವರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಧ್ವನಿ ಪ್ರತಿಷ್ಠಾನದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಜೊತೆಜೊತೆಯಾಗಿ ಭಾಗವಹಿಸಿಕೊಂಡು ಬಂದಿರುವ ಗೋಪಿಕಾ ಮಯ್ಯರವರು ಧ್ವನಿ ರಂಗ ಪ್ರಯೋಗಗಳಲ್ಲಿ ಏಳು ಎಂಟು ನಾಟಕಗಳಲ್ಲಿ ನಾಯಕಿ ನಟಿಯಾಗಿ ಪ್ರಮುಖ ಪಾತ್ರದಲ್ಲಿತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯತೆಯನ್ನು ಪಡೆದಿರುವವರು, ಧ್ವನಿ ಪ್ರತಿಷ್ಠಾನದ ಪ್ರಮುಖ ಪ್ರಾಯೋಜಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಪ್ರಾರ್ಥನೆ ರಮ್ಯ ಜಾಗಿರ್ದಾರ್, ಕಾರ್ಯಕ್ರಮ ನಿರೂಪಣೆಯನ್ನುಅಚ್ಚುಕಟ್ಟಾಗಿ ಶ್ರೀಮತಿ ಶ್ವೇತಾ ನಾಡಿಗ್ ಮತ್ತು ಸಹನಾ ಕುಲಕರ್ಣಿ ನೆರವೇರಿಸಿಕೊಟ್ಟರು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಲತಾ ಹೆಗ್ಡೆಯವರು ವಂದಾರ್ಪಣೆಯನ್ನು ಸಲ್ಲಿಸಿದರು.

ಸಭಾಂಗಣ ಭರ್ತಿಯಾಗಿದ್ದ ಪ್ರೇಕ್ಷಕರ ಮನ ಗೆದ್ದರಂಗ ಪ್ರಯೋಗ “ಮೃಚ್ಛಕಟಿಕ”
ದುಬಾಯಿಯರಂಗ ವೇದಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಖ್ಯಾತ ನಾಟಕಗಳನ್ನು ಧ್ವನಿ ಪ್ರತಿಷ್ಠಾನ ಯಶಸ್ವಿಯಾಗಿ ರಂಗವೇರಿಸಿಕೊಂಡು ಬರುತ್ತಿದೆ.. ಈ ಎಲ್ಲಾ ನಾಟಕಗಳಿಗೆ ಅಪಾರಆಸಕ್ತಿಯ ಪ್ರೇಕ್ಷಕವರ್ಗ ಸಾಕ್ಷಿಕರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿಯೂ ಸಭಾಮ್ಗಣ ಭರ್ತಿಯಾಗಿ ನಾಟಕಕೊನೆಯ ಹಂತದವರೆಗೂ ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ದುಬಾಯಿಯಯಾಂತ್ರಿಕ ಬದುಕಿನ ನಡುವಿನಲ್ಲಿಯೂ ತಮ್ಮ ಹೆಚ್ಚಿನ ಅಮೂಲ್ಯ ಸಮಯವನ್ನು ರಂಗತಾಲಿಮು ನಡೆಸಲು ಸ್ಥಳಿಯ ಪ್ರತಿಭೆಗಳು ವಿನಿಯೋಗಿಸಿಕೊಂಡು ತಮ್ಮಅದ್ಭುತ ಅಭಿನಯದೊಂದಿಗೆ ವೇದಿಕೆಯಲ್ಲಿ ಪ್ರಸ್ತುತಪಡಿಸಿ ಕಥಾಹಂದರದಲ್ಲಿ ಪ್ರತಿಯೊಂದು ಪಾತ್ರಗಳಿಗೆ ಜೀವತುಂಬಿದ್ದಾರೆ. ಇತ್ತಿಚಿನ ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಿಗೆ ಮನ ಸೋತಿರುವ ವೀಕ್ಷರಿರುವ ಈ ನವ್ಯಯುಗದಲ್ಲಿಯೂ “ಧ್ವನಿ ಪ್ರತಿಷ್ಠಾನ” ತಂತ್ರಜ್ಞಾನವನ್ನು ಬಳಸಿ ರಂಗವಿನ್ಯಾಸ, ಬೆಳಕಿನ ವ್ಯವಸ್ಥೆ, ಸಂಗೀತ ಸಂಯೋಜನೆ, ಹಿನ್ನೆಲೆಧ್ವನಿ, ಕ್ಷಣಾರ್ಧದಲ್ಲಿ ದೃಶ್ಯಕ್ಕೆ ತಕ್ಕಂತೆ ರಂಗ ಪರಿಕರಗಳನ್ನು ಬದಲಿಸುವ ಪರದೆಯ ಹಿಂಬದಿಯ ತಂಡ ಇವೆಲ್ಲಾವೂ ಅಪಾರ ಅನುಭವಿರುವರಂಗ ನಿರ್ದೇಶಕ ಶ್ರೀ ಪ್ರಕಾಶ್‍ರಾವ್ ಪಯ್ಯಾರ್‍ರವರ ನಿರ್ದೇಶನಕ್ಕೆ ಸಾಕ್ಷಿಯಾಗಿತ್ತು.

ನಟನಾ ವರ್ಗದಲ್ಲಿ : ಆರತಿಆಡಿಗ, ವಾಸು ಬಾಯರು, ಪ್ರಭಾಕರ್‍ಕಾಮತ್, ನಾಗಭೂಷಣ್‍ಕಶ್ಯಪ್, ಸಪ್ನಾಕಿರಣ್, ಅಶೋಕ್‍ಅಂಚನ್, ರುದ್ರಯ್ಯ ನವೆಲಿ ಹಿರೆಮಠ್, ಆದೇಶ್ ಹಾಸನ, ಗುರುರಾಜ್ ಪುತ್ತೂರು, ಹರೀಸ್ ಪೂಜಾರಿ, ಜಾನೆಟ್ ಸಿಕ್ವೇರಾ, ಜಯಂತ್ ಶೆಟ್ಟಿ, ಕೃಷ್ಣ ಕುಮಾರ್, ಮೋಹನ್ ಬಿ.ಪಿ., ನರಸಿಂಹನ್ ಜಿ.ಎಸ್. ಜೇಶ್ ಬಾಯಾರ್, ರಮೇಶ್ ಲಕ್ಯ, ಸಾನ್ವಿ ಪ್ರಕಾಶ್ ಶರ್ಮಾ, ಸಂದೀಪ್‍ದೇವಾಡಿಗ, ಸಂಧ್ಯರವಿಕುಮಾರ್, ಶ್ವೇತಾ ನಾಡಿಗ್ ಶರ್ಮಾ, ವೆಂಕಟೇಶ್‍ರಾವ್, ವಿನಾಯ್ಕ ಹೆಗ್ಡೆ, ದೀಪಾ ಮರಿಯಾ, ಶೋಬಿತಾ ಪ್ರೇಂಜೀತ್,

ಸಂಗೀತಾ ಸಂಯೋಜನೆ :ಅರುಣ್‍ಕಾರ್ಲೋ, ಬೆಳಕಿನ ವ್ಯವಸ್ಥೆ : ಅರುಣ್ ಮಣಿಪಾಲ್,
ರಂಗ ವಿನ್ಯಾಸ : ಬಿ. ಕೆ. ಗಣೇಶ್‍ರೈ, ಡಿಜಿಟಲ್‍ಡಿಸ್ಪ್ಲೇ : ನವೀನ್ ಸಿಕ್ವೇರಾ. ತಬಲಾ ರಾಜೇಶ್‍ಆಡಿಗ,

ತೆರೆಯ ಹಿಂದಿನ ರುವಾರಿಗಳು : ಸತೀಶ್ ಹೆಗ್ಡೆ, ಅಶೋಕ್ ಬೈಲೂರ್, ರಿತೇಶ್‍ಅಂಚನ್, ಅನಿಲ್ ಪೂಜಾರ, ಸಂತೋಶ್ ಪೂಜಾರಿ, ಗಣೇಶ್‍ಕುಲಾಲ್, ಉದಯ ನಂಜಪ್ಪ, ಸಾಯಿ ಮಲ್ಲಿಕಾ, ಲತಾ ಹೆಗ್ಡೆ. ಧ್ವನಿ ಪ್ರತಿಷ್ಠಾನದಆಶ್ರಯದಲ್ಲಿ ನಡೆದ “ಮೃಚ್ಛಕಟಿಕ” ಅಂತಿಮ ಭಾಗದಲ್ಲಿ ನಟನಾತಂಡ, ತಾಂತ್ರಿಕ ವರ್ಗದವರಿಗೆಗೌರವ ಅತಿಥಿಗಳ ಸಮ್ಮುಖದಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಬಿ.ಕೆ.ಗಣೇಶ್‍ರೈ

ಯು.ಎ.ಇ.

LEAVE A REPLY

Please enter your comment!
Please enter your name here