ಅಲ್ ರಾಭಿಯ ಮಂಗಳೂರು ವತಿಯಿಂದ ದುಬೈನಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಕೂಟ!

0
945

ನ್ಯೂಸ್ ಕನ್ನಡ ವರದಿ: ಅಲ್ ರಾಭಿಯ ಮಂಗಳೂರು ತಂಡದ ವತಿಯಿಂದ ಇದೇ ಬರುವ ಅಕ್ಟೋಬರ್ 25ರಂದು ಅಲ್ ಅಹಲೀ ಕ್ಲಬ್ ನ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರ ಮಟ್ಟದ ಅದ್ಧೂರಿಯ ಕಬಡ್ಡಿ ಪಂದ್ಯಾಕೂಟ ನಡೆಯಲಿದ್ದು ಕಬಡ್ಡಿ ಫೆಸ್ಟ್ ಸೀಸನ್ -1 ಗೆ ಭರದ ಸಿದ್ಧತೆ ನಡೆದಿದೆ.

ಯುಎಈಯಲ್ಲಿರವ ಭಾರತೀಯರಿಗಾಗಿ ನಡೆಯಲಿರುವ
ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಕೂಟದ ಕುರಿತು ಮಾಹಿತಿ ನೀಡುವ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮ ದುಬೈ ದಸರಾ ಸಮಾರಂಭದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅವ್ ಕಾಫ್ ಸಾಂಸ್ಕೃತಿಕ ಸಂವಹನ ಇಲಾಖೆಯ ಮುಖ್ಯಸ್ಥರಾದ ಫಯಾಝ್ ಅಬ್ದುಲ್ಲಾ ಅಲ್ ಮಝ್ರೂಕಿ, ಯುವ ಉದ್ಯಮಿ, ಫ್ಯಾಮಿಲಿ ಗ್ರೂಪ್ ಕಂಪೆನಿಯ ಸಿಈಓ ಮಹಮ್ಮದ್ ನವೀದ್ ಮಾಗುಂಡಿ, ಅವ್ ಕಾಫ್ ಸಾಂಸ್ಕೃತಿಕ ಸಲಹೆಗಾರ ಜಾವೇದ್ ಅಹ್ಮದ್ ಖತೀಬ್, ಕರ್ನಾಟಕ ಮೀಡಿಯಾ ಫಾರಂ ಯುಎಈ ಅಧ್ಯಕ್ಷ ಇಮ್ರಾನ್ ಖಾನ್ ಎರ್ಮಾಳ್, ಯುಎಈ ಎಕ್ಸ್’ಚೇಂಜಿನ ತಾರನಾಥ್ ರೈ, ಅಲ್ ರಾಭಿಯ ಮಂಗಳೂರು ತಂಡದ ನಾಯಕ ಮಹಮ್ಮದ್ ಹಾಫಿಲ್, ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕಿ, ಕೋಚ್ ಪೂಜಾ ಹಾಸನ್, ಪಂದ್ಯಾಕೂಟದ ಆಯೋಜಕರಾದ ಯಾಕೂಬ್ ಹೊಸಮಠ, ಅಮನುಲ್ಲಾ ಹಾಗೂ ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here