ಅಲ್-ಅಮೀನ್ ಯೂತ್ ವಿಂಗ್ ದುಬೈ ವತಿಯಿಂದ ಮೀಲಾದ್ ಫೆಸ್ಟ್ 2019 ಕಾರ್ಯಕ್ರಮ

0
189

ನ್ಯೂಸ್ ಕನ್ನಡ ವರದಿ: ಮನುಕುಲದ ವಿಮೋಚಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರವರ ಜನ್ಮ ದಿನದ ಅಂಗವಾಗಿ ಬ್ರಹತ್ ಮೀಲಾದ್ ಸಮಾವೇಶವು ದಿನಾಂಕ 9/11/2019 ರಂದು ದುಬಾಯಿಯ ತಾಜ್ ರೆಸ್ಟೋರೆಂಟ್ ಜಬಲ್-ಆಲಿ ಯಲ್ಲಿ ಜನಾಬ್ ಕೆ.ಕೆ ಜಬ್ಬಾರ್ ಕಲ್ಲಡ್ಕ ಇವರ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಸಾಯಂಕಾಲ 4 ಘಂಟೆಗೆ ಮೌಲೂದ್ ಪಾರಾಯಣದಿಂದ ಆರಂಭಗೊಂಡು ರಾತ್ರಿ 12 ರ ತನಕ ಮಿಲಾದ್ ಫೆಸ್ಟ್ ಕಾರ್ಯಕ್ರಮ ವಿಜೃಂಭಣೆಯಲ್ಲಿ ನಡೆಯಿತು. ಅಬ್ದುಲ್ ಅಝೀಝ್ ಅಹ್ಸನಿ ಸುಳ್ಯ ಮೌಲೂದ್ ಪಾರಾಯಣಕ್ಕೆ ನೇತೃತ್ವ ನೀಡಿದರೆ ಕಾರ್ಯಕ್ರಮದಲ್ಲಿ ನಿಝಮುದ್ದೀನ್ ಸಖಾಫಿ ಎಮ್ಮೆಮಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ನೆಬಿ ಕೀರ್ತನೆಗಳನ್ನು ಹಾಡಿ ಹೊಗಳುದರ ಮೂಲಕ ಶಾಫಿ & ಟೀಂ ಬುರ್ದಾ ಮಜ್ಲಿಸ್ ನಡೆಸಿದರು ಹಾಗೂ ಅಲ್- ಅಮೀನ್ ದಫ್ ಕಮಿಟಿ ತಂಡದಿಂದ ಅತ್ಯಾಕರ್ಷಕ ದಫ್ ಪ್ರದರ್ಶನ ನಡೆಯಿತು ನಂತರ ನೂತನ ಶೈಲಿಯ ಮೀಲಾದ್ ಕಲಾ-ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಉಸ್ತಾದ್ ಸಲ್ಮಾನ್ ಅಝಹರಿಯವರು ಪ್ರವಾದಿ ಪ್ರೇಮದ ವಿಷಯವನ್ನಾಧರಿಸಿ ಮಾತನಾಡಿದರು. ಶಫೀಕ್ ಗಡಿಯಾರ್ ಹಾಗೂ ಖಲೀಲ್ ಇಚ್ಲಂಗೋಡ್ ಮತ್ತು ಅಬೂಬಕ್ಕರ್ ಸಿದ್ದೀಕ್ ರವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು, ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜನಾಬ್ ಕೆ.ಕೆ.ಜಬ್ಬಾರ್ ಕಲ್ಲಡ್ಕ, ಜನಾಬ್ ಬದ್ರುದ್ದೀನ್‌ ಹೆಂತಾರ್, ಜನಾಬ್ ಅಶ್ರಫ್ ಪರ್ಲಡ್ಕ, ಜನಾಬ್ ಹನೀಫ್ ಕಣ್ಣೂರು ಜನಾಬ್ ಖಲೀಲ್ ಇಚ್ಲಂಗೋಡು ನಾಸಿರ್ ಕಲ್ಲಡ್ಕ ರವರು ಪ್ರವಾದಿ (ಸ ರ) ರವರ ಜೀವನ ಚರಿತ್ರೆಯ ಅಲ್ಪ ಸ್ವಲ್ಪ ವಿಷಯವನ್ನು ಪ್ರಾಸ್ತಾವಿಕ ಭಾಷಣದ ಮೂಲಕ ತಿಳಿಸಿದರು ಹಾಗೂ ಕಾರ್ಯಕ್ರಮದ ನಿರೂಪಕರಾಗಿ ಮುನೀರ್ ರೆಂಜ ಮತ್ತು ಸಿದ್ದಿಕ್ ಕಬಕ ರವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಿದರು, ಬಿಲಾಲ್ ಗೋಳ್ತಮಜಲ್ ನೇತೃತ್ವದಲ್ಲಿ ಸಂಘಟಿಸಿದ ಅಲ್ ಅಮೀನ್ ಯೂತ್ ವಿಂಗ್ ಸದಸ್ಯರು ಕಾರ್ಯಕ್ರಮದುದ್ದಕ್ಕೂ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಆಗಮಿಸಿದ ಅತಿಥಿಗಳನ್ನು ಶಾಫಿ ಕಂದಲ್ ಸ್ವಾಗತಿಸಿದರು ಮತ್ತು ನಾಸಿರ್ ಕಲ್ಲಡ್ಕ ವಂದಿಸಿದರು, ಕಾರ್ಯಕ್ರಮದ ವ್ಯವಸ್ಥಾಪಕರಾಗಿ ರಝಕ್ ಕರಾಯಿ ಕಾರ್ಯನಿರ್ವಹಿಸಿದರು.

LEAVE A REPLY

Please enter your comment!
Please enter your name here