ಡ್ರಗ್ಸ್‌ ಕೇಸ್‌ – ಕನ್ನಡದ ಈ ಸ್ಟಾರ್ ದಂಪತಿಗಳಿಗೆ ನಾಳೆ ಹಾಜರಾಗಲು ಸಿಸಿಬಿ ನೋಟಿಸ್‌!

0
22

ನ್ಯೂಸ್ ಕನ್ನಡ ವರದಿ: ಚಂದನವನದ ಮಾದಕ ದ್ರವ್ಯದ ವಿರುದ್ಧ ನಡೆಯುತ್ತಿರುವ ಚುರುಕಿನ ತನಿಖೆ ಇದೀಗ ಕುತೂಹಲಕಾರಿ ತಿರುವು ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್‌ ದಂಪತಿ ದಿಗಂತ್‌, ಐಂದ್ರಿತಾ ರೇಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ.

ಕೆಲವು ದಿನಗಳ ಹಿಂದೆ ನಟಿ ಐಂದ್ರಿತಾ ರೇಯವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್‌ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಖ್‌ ಫಾಝಿಲ್‌ ಜೊತೆ ಇದ್ದ ಫೋಟೋಗಳು ಸಹ ಸಿಕ್ಕಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಐಂದ್ರಿತಾ ರೇ, ನಾನು ಸಿನಿಮಾ ಪ್ರಮೋಶನ್ ಗಾಗಿ ಕೊಲಂಬೋದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಚಿತ್ರ ಪ್ರಚಾರಕ್ಕಾಗಿ ನಮ್ಮ ಮ್ಯಾನೇಜರ್ ಹೋಗಬೇಕು ಅಂತ ಹೇಳಿದ್ದರಿಂದ ಸೊಹೈಲ್ ಮತ್ತು ಅರ್ಬಾಜ್ ಖಾನ್ ಜೊತೆ ಹೋಗಿದ್ದೇನೆ. ಶೇಖ್ ಫಾಝಿಲ್ ನನಗೆ ವೈಯಕ್ತಿಯ ಪರಿಚಯವಿಲ್ಲ ಎಂದು ತಿಳಿಸಿದ್ದರು.

ಆದರೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ನಾಳೆ ಹೆಚ್ಚಿನ ಸ್ಪಷ್ಟನೆ ಸಿಗಲಿದೆ

LEAVE A REPLY

Please enter your comment!
Please enter your name here