ಡೊನಾಲ್ಡ್ ಟ್ರಂಪ್ ಅಮೇರಿಕಾದಲ್ಲಿ ಮಾತ್ರವಲ್ಲ, ಭಾರತದಲ್ಲೂ ದೇವರು!

0
338

ನ್ಯೂಸ್ ಕನ್ನಡ ವರದಿ (19-6-2019): ನಟಿಯರ ಹೆಸರಿನಲ್ಲಿ ದೇವಸ್ಥಾನವನ್ನೇ ಕಟ್ಟಿದ ಉದಾಹರಣೆಗಳಿವೆ. ನಟಿ ಖುಷ್ಬೂ ಹೀಗೆ ಹಲವರ ದೇವಾಲಯ ನಿರ್ಮಾಣ ಮಾಡಿದ್ದು ನಾವು ಕೇಳಿ ಬಲ್ಲೆವು ಆದರೆ, ತೆಲಂಗಾಣದ ಈ ಯುವಕ ತನ್ನ ವಿಚಿತ್ರ ಅಭಿರುಚಿಯಿಂದ ಸುದ್ದಿಯಲ್ಲಿದ್ದಾನೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಅಭಿಮಾನಿಯಾಗಿರುವ ಈತ, ಅವರನ್ನು ದೇವರಂತೆಯೇ ಪೂಜಿಸುತ್ತಿದ್ದಾನೆ. ಅಮೇರಿಕಾದಲ್ಲಿ ಇವರಿಗೆ ಇಂತಹ ಗೌರವ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರತದ ಈ ಅಭಿಮಾನಿ ಮಾತ್ರ ಭಾರತದಲ್ಲಿ ಅವರನ್ನು ಪೂಜಿಸುತ್ತಾ ಇದ್ದಾನೆ. ಇದು ಯಾವ ಪರಿಯ ಹುಚ್ಚಾಟವೋ ದೇವರೊಬ್ಬರಿಗೇ ಪ್ರೀತಿ, ಏನೇ ಇರಲಿ ಅದು ಅವರವರ ನಂಬಿಕೆ.

ತೆಲಂಗಾಣದ ಜಂಗಮ್‌ನ ಕೊನ್ನೆ ಗ್ರಾಮದಲ್ಲಿನ ಬುಸ್ಸಾ ಕೃಷ್ಣ ಎಂಬ ಯುವಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರು ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ್ದಾನೆ. ಅದನ್ನು ಜೂನ್ 14ರಂದು ಟ್ರಂಪ್ ಜನ್ಮದಿನದಂದು ಅನಾವರಣಗೊಳಿಸಿದ್ದಾನೆ. ಟ್ರಂಪ್ ಅವರ ಪ್ರತಿಮೆಗೆ ದಿನವೂ ಪೂಜೆ ಹಾಗೂ ಪ್ರತಿನಿತ್ಯವೂ ಪ್ರತಿಮೆಗೆ ಹಾಲಿನ ಅಭಿಷೇಕವನ್ನೂ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಡೊನಾಲ್ಡ್ ಟ್ರಂಪ್ ಅವರ ನೇರ ಹಾಗೂ ನಿಷ್ಠುರವಂತಿಕೆಯ ನಡೆಯಿಂದ ಪ್ರಭಾವಿತನಾಗಿರುವುದಾಗಿ ಆತ ಹೇಳುತ್ತಾನೆ.  ಈ ಹಿಂದೆ ಅವರ ಫೋಟೊಗಳನ್ನು ಪೂಜಿಸಿ ವೈರಲ್ ಆಗಿದ್ದ.

ಪ್ರತಿಮೆ ಅನಾವರಣ ಮಾಡುವುದಕ್ಕೂ ಮೂರು ವರ್ಷಗಳ ಹಿಂದಿನಿಂದ ಕೃಷ್ಣ ಎಂಬ ಹೆಸರಿನ ಈ ಯುವಕ ಡೊನಾಲ್ಡ್ ಟ್ರಂಪ್ ಅವರ ಫೋಟೋಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ.  ಮೂಲತಃ ಕೃಷಿಕನಾದ ಈತ ಸಾಫ್ಟ್ ವೇರ್ ಉದ್ಯೋಗಿ ಹತ್ಯೆ ಕಾರಣ 2017ರಲ್ಲಿ ಅಮೆರಿಕದ ಕನ್ಸಾಸ್ ಬಾರ್‌ನಲ್ಲಿ ಅಲ್ಲಿನ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬ ದ್ವೇಷದ ಕಾರಣದಿಂದ ತೆಲಂಗಾಣ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸ್ ಕುಚ್ಚಿಬೊಟ್ಲ ಅವರನ್ನು ಹತ್ಯೆ ಮಾಡಿದ ಘಟನೆ ನಂತರ ಟ್ರಂಪ್ ಅವರನ್ನು ಆರಾಧಿಸಲು ಆರಂಭಿಸಿದ್ದಾಗಿ ಆತ ತಿಳಿಸಿದ್ದಾನೆ. ಆ ಘಟನೆ ನನಗೆ ತೀವ್ರ ನೋವುಂಟು ಮಾಡಿತು. ನಾವು ಅವರೆಡೆಗೆ ಪ್ರೀತಿ ಮತ್ತು ಅನುಭೂತಿ ತೋರಿಸಿದಾಗ ಮಾತ್ರ ಅಮೆರಿಕದ ಅಧ್ಯಕ್ಷ ಮತ್ತು ಅವರ ಜನರು ಭಾರತೀಯರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎನಿಸಿತು. ಈ ಕಾರಣದಿಂದ ಟ್ರಂಪ್ ಅವರಿಗೆ ಒಂದು ದಿನ ಈ ಪ್ರಾರ್ಥನೆ ತಲುಪುತ್ತದೆ ಎಂಬ ಭರವಸೆಯೊಂದಿಗೆ ನಾನು ಅವರನ್ನು ಪೂಜಿಸಲು ಆರಂಭಿಸಿದೆ’ ಎಂದು ವಿವರಿಸಿದ್ದಾನೆ.

LEAVE A REPLY

Please enter your comment!
Please enter your name here