ಧರ್ಮಸ್ಥಳದಲ್ಲಿ ಪಂಚಮಹಾ ವೈಭವದ ವೇದಿಕೆ ಚಪ್ಪರ ಕುಸಿತ: ಹಲವರಿಗೆ ಗಾಯ!

0
537

ನ್ಯೂಸ್ ಕನ್ನಡ ವರದಿ(14.2.19): ಧರ್ಮಸ್ಥಳದಲಿ ಬಾಹುಬಲಿ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪಂಚ ಮಹಾ ವೈಭವದ ವೇದಿಯ ಚಪ್ಪರವು ಕುಸಿತಗೊಂಡು ಹಲವಾರು ಮಂದಿ ಗಾಯಗೊಂಡ ಘಟನೆಯು ನಡೆದಿದೆ. ಧರ್ಮಸ್ಥಳದಲ್ಲಿ ವೈಭವದಿಂದ ನಡೆಸಲಾಗುವ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿನ ಬೃಹತ್ ವೇದಿಕೆಗೆ ಹಾಕಿದ್ದ ಪೆಂಡಾಲ್ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಹಲವರನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

ಪೆಂಡಾಲ್ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆಯಿದ್ದು, ಸ್ವಯಂಸೇವಕರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ತಗಡು ಶೀಟುಗಳಿಂದ ನಿರ್ಮಿಸಲಾಗಿದ್ದ ಈ ಪೆಂಡಾಲ್ ನ ಬಹುಭಾಗ ಕುಸಿದುಬಿದ್ದಿರುವುದಾಗಿ ತಿಳಿದುಬಂದಿದೆ. ಪೆಂಡಾಲ್ ಕುಸಿತದ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಹಾಗಾಗಿ ಸಂಭವನೀಯ ಭಾರೀ ಅಪಾಯವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here