ಪಥಸಂಚಲನಕ್ಕೆ ಜನ ಎಲ್ಲಿಂದ ಬರುತ್ತಿದ್ದಾರೆ ಎಂಬ ಮಾಹಿತಿ ಗೊತ್ತಿದೆ: ಡಿಕೆಶಿ ಕಿಡಿ

0
33

ನ್ಯೂಸ್ ಕನ್ನಡ ವರದಿ: ರಾಮನಗರದಲ್ಲಿ ಆರ್.ಎಸ್.ಎಸ್ ವತಿಯಿಂದ ಕೈಗೊಂಡಿದ್ದ ಪಥಸಂಚಲನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಮನಗರದಲ್ಲಿ ಆರ್.ಎಸ್.ಎಸ್ ನವರು ಕೈಗೊಂಡಿರುವ ಪಥಸಂಚಲಕ್ಕೆ ಕಿಡಿಕಾರಿದರು. ಆರ್.ಎಸ್.ಎಸ್ ನವರು ಚಡ್ಡಿಯಾದರೂ ಹಾಕಿಕೊಳ್ಳಲಿ, ಪ್ಯಾಂಟ್ ಆದ್ರೂ‌ ಹಾಕಿಕೊಳ್ಳಲಿ, ಪಂಚೆಯಾದ್ರೂ ಹಾಕಿಕೊಳ್ಳಲಿ ಏನ್ ಬೇಕಾದ್ರೂ ಮಾಡಿಕೊಳ್ಳಲಿ. ನಮ್ಮ ರಾಜಕೀಯ ನಾವು ಮಾಡುತ್ತೇವೆ. ಪಥ ಸಂಚಲನಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅಲ್ಲದೇ, ಪಥಸಂಚಲನಕ್ಕೆ ಜನ ಎಲ್ಲಿಂದ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಪಥ ಸಂಚಲನ, ಉರುಳು ಸೇವೆ ಮಾಡಲಿ. ನಮ್ಮ ಅಭ್ಯಂತರವೇನಿಲ್ಲ. ಬಿಜೆಪಿ ಟಾರ್ಗೆಟ್ ಮಾಡುತ್ತಿದ್ದರೆ ಅದಕ್ಕೆಲ್ಲ ಹೆದರುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here