ಅದ್ಯಾವ ಪ್ರಭಾಕರ ನನಗೆ ಗೊತ್ತಿಲ್ಲ ಆದರೆ ಯೇಸು ಪ್ರತಿಮೆ ಆ ಜಾಗದಲ್ಲೇ ನಿರ್ಮಾಣ ಆಗುತ್ತೆ: ಡಿಕೆಶಿ

0
17

ನ್ಯೂಸ್ ಕನ್ನಡ ವರದಿ: ಕಪಾಲಬೆಟ್ಟದ ಗೋಮಾಳ ಜಾಗದಲ್ಲೇ ಯೇಸು ಪ್ರತಿಮೆ ನಿರ್ಮಾಣ ಆಗತ್ತೆ. ಅದಕ್ಕೆ ಯಾವ ಅಡ್ಡಿಯೂ ಆಗುವುದಿಲ್ಲ. ಬಿಜೆಪಿಯವರು ಕೆಲವರು ಭಾಗಿಯಾಗಬಹುದೇ ಹೊರತು ನಮ್ಮ ಜಿಲ್ಲೆಯ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಾರರು ಎಂದು ಶಾಸಕರ ಡಿ.ಕೆ.ಶಿವಕುಮಾರ್ ತಿಳಿದಿದರು.

ಮತಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಕೇಳಿಕೊಂಡು ಬದುಕು ಸಾಗಿಸುತ್ತಿರುವವರು ನಾವು.

ಈ ಪಾಠವನ್ನು ನಮ್ಮ ಅಜ್ಜ, ನನ್ನ ಗುರು ಎಲ್ಲರೂ ಹೇಳಿಕೊಟ್ಟಿದ್ದಾರೆ. ನನಗೆ ಮಾನವ ಧರ್ಮವೇ ದೊಡ್ಡದು. ನನಗೆ ಅದ್ಯಾವ ಪ್ರಭಾಕರನನ್ನೂ ಗೊತ್ತಿಲ್ಲ. ನಂಗೆ ಅವರ ಪರಿಚಯವೂ ಇಲ್ಲ. ನಾನು ಅವರ ಹೆಸರೂ ಕೇಳಿಲ್ಲ. ಮುಖ್ಯಮಂತ್ರಿಗಳು, ಮಂತ್ರಿಗಳೂ ಇಲ್ಲಿ ಬಂದು ಜಾಗ ಪರಿಶೀಲನೆ ಮಾಡಲಿ. ತಪ್ಪೇನಿಲ್ಲ ಎಂದು ಹೇಳಿದರು.

ನಮ್ಮ ಜಿಲ್ಲೆಯ ಬಗ್ಗೆ ಅವರಿಗೆ ಯಾರಿಗೂ ಗೊತ್ತಿಲ್ಲ. ನಾವು ಬಾಲಗಂಗಾಧರನಾಥ ಸ್ವಾಮೀಜಿ 25 ಕೋಟಿ ರೂಪಾಯಿ ಕೊಟ್ಟಿದ್ದೇವೆ. ನಾನೇ ಸಂಸ್ಕೃತಿ ಸಚಿವನಾಗಿದ್ದಾಗ ಬಜೆಟ್​ನಲ್ಲಿ ಸೇರಿಸಲಾಗಿತ್ತು. ಕುಮಾರಸ್ವಾಮಿಯವರು ಬಜೆಟ್​ನಲ್ಲಿ ಓದಿದ್ದರು ಅದನ್ನು ಎಂದು ಹೇಳಿದರು.

LEAVE A REPLY

Please enter your comment!
Please enter your name here