ಲಂಚ ಹೊಡೆದಿಲ್ಲ, ಬ್ಲೂ ಫಿಲಂ ನೋಡಿಲ್ಲ, ಆದರೂ ಷಡ್ಯಂತ್ರದಿಂದ ಜೈಲಿಗೆ ಹೋದೆ: ಡಿಕೆಶಿ

0
378

ನ್ಯೂಸ್ ಕನ್ನಡ ವರದಿ: ಉಪಚುನಾವಣಾ ಪ್ರಚಾರದ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನಾನು ಯಾವುದೇ ಲಂಚ ತೆಗೆದುಕೊಂಡಿಲ್ಲ, ನೀಲಿಚಿತ್ರ ನೋಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಆದರೂ ಬಿಜೆಪಿಯವರು ಷಡ್ಯಂತ್ರ ಮಾಡಿ ನನ್ನನ್ನು ಜೈಲಿಗೆ ಕಳುಹಿಸಿದರು ಎಂದು ಡಿ.ಕೆ.ಶಿವಕುಮಾರ್‌ ಕಿಡಿಕಾರಿದರು.

ಇಂದು ಯಶವಂತಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಡಿಕೆಶಿ, ಈ ಮೊದಲು
ಯಾರಾದರೂ ಜನಪ್ರತಿನಿಧಿ ಸತ್ತಾಗ ಮಾತ್ರ ಬೈಎಲೆಕ್ಷನ್ ನಡೆಯುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಎಂದರು. ಇನ್ನು ಬಿಜೆಪಿ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿ ನಿನ್ನ ಸಮಾಧಿ ನೀನೇ ಕಟ್ಟಿಕೊಳ್ತಿದ್ದೀಯ ಎಂದು ಹೇಳಿದ್ದೆ, ಆದರೂ ಆತ ನನ್ನ ಮಾತು ಕೇಳದೆ ಬಿಜೆಪಿಗೆ ಹೋದ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ, ಸೋಮಶೇಖರ್‌ ಮತ್ತು ಮುನಿರತ್ನ ಬಂದು ಕ್ಯಾಂಟೀನ್‌ ಮಾಡೋಣ ಅಂದರು. ಅದಕ್ಕೆ ಇಂದಿರಾ ಕ್ಯಾಂಟೀನ್‌ ಎಂದು ಹೆಸರಿಡೋಣ ಎಂದರು. ಇವರಿಗೆ ಜನ್ಮ ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಆದ್ರೆ, ಈಗ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆಂದು ಹರಿಹಾಯ್ದರು. ಬಿಜೆಪಿ ನೋಟು ತೆಗೆದುಕೊಂಡು ಕಾಂಗ್ರೆಸ್‌ಗೆ ವೋಟು ಹಾಕಿ. ನಮಗೆ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಎಲ್ಲಾ 15 ಜನರನ್ನೂ ಸೋಲಿಸಿ ಅವರಿಗೆ ಪಾಠ ಕಲಿಸಿ ಎಂದು ಡಿ.ಕೆ.ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here