ನ್ಯಾಯಾಲಯದ ಮೇಲೆ ಗೌರವ, ನಂಬಿಕೆ ಇದೆ, ಆದಷ್ಟು ಬೇಗ ಡಿಕೆಶಿ ಹೊರಗೆ ಬರ್ತಾರೆ! ಯಾರು ಪ್ರತಿಭಟನೆ ಮಾಡಬೇಡಿ: ಡಿಕೆ.ಸುರೇಶ್ ಮನವಿ

0
207

ನ್ಯೂಸ್ ಕನ್ನಡ ವರದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಡಿ ವಿಶೇಷ ಕೋರ್ಟ್ ಇಂದು ವಜಾಗೊಳಿಸಿದೆ. ಕೋರ್ಟ್ ನಿಂದ ಆದೇಶ ಹೊರಬೀಳುತ್ತಿದ್ದಂತೆ ಡಿಕೆಶಿ ತವರು ಕನಕಪುರದಲ್ಲಿ ನೀರವ ಮೌನ ಆವರಿಸಿದೆ. ಈ ಮಧ್ಯೆ, ಕೋರ್ಟ್ ಆದೇಶ ಹೊರಬಿದ್ದ ಬಳಿಕ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್ ಯಾರೂ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಡಿಕೆಶಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ನ್ಯಾಯಾಲಯದ ಮೇಲೆ ಗೌರವ, ನಂಬಿಕೆ ಇದೆ. ಇದೆಲ್ಲವೂ ತಾತ್ಕಾಲಿಕವಷ್ಟೇ, ಆದಷ್ಟು ಬೇಗ ಡಿ.ಕೆ.ಶಿವಕುಮಾರ್ ಹೊರಗೆ ಬರುತ್ತಾರೆ. ಯಾರೂ ಕೂಡ ಪ್ರತಿಭಟನೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here