ಪ್ರವಾಹ ಸಂತ್ರಸ್ತ ನಿಧಿಗೆ ಧರ್ಮಸ್ಥಳದಿಂದ 25 ಕೋಟಿ ರೂಪಾಯಿ ಘೋಷಣೆ!

0
241

ನ್ಯೂಸ್ ಕನ್ನಡ ವರದಿ (18-8-2019): ರಾಜ್ಯಾದ್ಯಂತ ಬಹಳ ನಷ್ಟ ಅತಿವೃಷ್ಟ ಹಾಗೂ ಪ್ರವಾಹದಿಂದಾಗಿದೆ. ಇದಕ್ಕೆ ಹಲವೆಡೆಯಿಂದ ಪರಿಹಾರ ಹರಿದು ಬರುತ್ತಾ ಇದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ನೆರವನ್ನು ಡಾ.ವಿರೇಂದ್ರ ಹೆಗ್ಗಡೆ ಘೋಷಣೆ ಮಾಡಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶ್ರಮಿಕ ಕಾಳಜಿಯ ರಿಲೀಫ್ ಫಂಡ್ ಗೆ 50 ಲಕ್ಷ ರೂಪಾಯಿಯನ್ನು ಶಾಸಕರ ಮೂಲಕ ಹಸ್ತಾಂತರ ಮಾಡಿದ್ದಾರೆ. ಈ ಕುರಿತು ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವೀರೇಂದ್ರ ಹೆಗ್ಗಡೆ ಮಾತನಾಡಿದರು. ಈ ಸಂದರ್ಭದಲ್ಲಿ ಹೇಮಾವತಿ ವಿ.ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಡಾ.ಎಲ್.ಎಚ್. ಮಂಜುನಾಥ್ ಉಪಸ್ಥಿತರಿದರು. ಅನಾವೃಷ್ಟಿಯ ಸಂದರ್ಭದಲ್ಲೂ ಧರ್ಮಸ್ಥಳ ನೆರವಿನ ಹಸ್ತ ಚಾಚಿತ್ತು.

LEAVE A REPLY

Please enter your comment!
Please enter your name here