ಮುಸ್ಲಿಮರು ಬಿಜೆಪಿಗೆ ಮತ ಹಾಕಿಲ್ಲ, ಆಗಾಗಿ ವಿಶೇಷ ಪ್ಯಾಕೇಜ್ ಕೊಡಲ್ಲ: ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

0
45

ನ್ಯೂಸ್ ಕನ್ನಡ ವರದಿ: ಹೊನ್ನಾಳಿ ಕ್ಷೇತ್ರದಲ್ಲಿ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಿಲ್ಲ, ಕಳೆದ ಚುನಾವಣೆಯಲ್ಲಿ ನನಗೆ ಮುಸ್ಲಿಂ ಸಮುದಾಯದಿಂದ ಒಂದೂ ಮತ ಬಂದಿಲ್ಲ, ಹೀಗಾಗಿ ಈ ಸಮುದಾಯಕ್ಕೆ ಯಾವುದೇ ಪ್ಯಾಕೇಜ್ ಕೊಡುವುದಿಲ್ಲ ಎಂದು ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಕಾಸಸೌಧದ ಕಚೇರಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕೆಲವು ಮಸೀದಿಗಳು ಮದ್ದು ಗುಂಡು ಸಂಗ್ರಹ ಹಾಗೂ ಭಯೋತ್ಪಾದಕ ತಾಣಗಳಾಗಿದ್ದು, ಮದರಸಾಗಳಲ್ಲಿ ಮಕ್ಕಳ ಮೈಂಡ್ ವಾಷ್ ಮಾಡಿ ಭಯೋತ್ಪಾದಕರನ್ನು ಸೃಷ್ಠಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ ಐ ಹಾಗೂ ಎಸ್ ಡಿಪಿಐ ನಿಷೇಧಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುತ್ತಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here