Tuesday February 16 2016

Follow on us:

Contact Us

ಮಂಗಳೂರು: ಮರಳು ಮಾಫಿಯಾ ಆರಂಭಿಸಿದ್ದು ಪಾಲೆಮಾರ್-ಸಚಿವ ರೈ

ನ್ಯೂಸ್ ಕನ್ನಡ ವರದಿ-ಮಂಗಳೂರು: ಜಿಲ್ಲೆಯಲ್ಲಿ ಮರಳು ಮಾಫಿಯಾ ಪ್ರಾರಂಭವಾದದ್ದೇ  ಜೆ.ಕೃಷ್ಣ ಪಾಲೆಮಾರ್ ಅವರಿಂದ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ನಗರದಲ್ಲಿಂದು ಕರೆಯಲಾಗಿದ್ದ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಬಿಜೆಪಿ ನಾಯಕರು ಕಾಂಗ್ರೆಸಿಗೆ  ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.  ಮುಖ್ಯವಾಗಿ ಜೆ.ಕೃಷ್ಣ ಪಾಲೆಮಾರ್  ಕಾಂಗ್ರೆಸ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸದ್ಯ   ಸಿ ಆರ್ ಝೆಡ್ ವ್ಯಾಪ್ತಿಯಲ್ಲಿ ಮರಳನ್ನು ಸಾಗಿಸಲು ಲೈಸನ್ಸ್ ರಿನಿವಲ್  ಮಾಡಬೇಕಾಗಿದೆ. ನಾನ್ ಸಿ ಆರ್ ಝೆಡ್ ವ್ಯಾಪ್ತಿಯಲ್ಲಿ ಮರಳನ್ನು ಸಾಗಿಸಲು ಟೆಂಡರ್ ಕರೆಯಲಾಗಿದೆ ಎಂದು ಅವರು ತಿಳಿಸಿದರು.

ಮರಳು ಮಾಫಿಯಾದಲ್ಲಿ ಸಚಿವರ ಚೇಳಗಳು ತೊಡಗಿಸಿಕೊಂಡಿದ್ದಾರೆ ಎಂಬ ಪಾಲೇಮಾರ್ ಮಾತನ್ನು ಖಂಡಿಸುತ್ತೇನೆ ಎಂದ ಅವರು, ನಾನು ಯಾವುದೇ ಬಿಲ್ಡರ್ ಅಲ್ಲ, ಆದರೆ ಬಿಜೆಪಿ ಬೆಂಬಲಿತರು ಈ ಕಾರ್ಯದಲ್ಲಿ ಸಾಕಷ್ಟಿದ್ದಾರೆ.  ಬಿಜೆಪಿ ಕಾಲದಲ್ಲಿ ಯಾವುದೇ ರಾಜಸಂಗ್ರಹ ಧನವಾಗಿಲ್ಲ. ಆದರೆ ಕಾಂಗ್ರೆಸ್ ಅಧಿಕಾರವಧಿಯಲ್ಲಿ 14.9ಕೋ.ರೂ. ರಾಜಸಂಗ್ರಹ ಧನವಾಗಿದೆ ಎಂದು ಅವರು ತಿಳಿಸಿದರು.

ದೇವಸ್ಥಾನಕ್ಕೆ ಮರ ಸಾಗಿಸಲು ಸಹಕರಿಸಿದ್ದೇನೆ!

9/11 ಬಗ್ಗೆ ಪ್ರತಿಕ್ರಿಯಿಸಿದ ಅವರು ಇದನ್ನು ಜಾರಿಗೆ ತಂದದ್ದು ಬಿಜೆಪಿಯವರ ಕಾಲದಲ್ಲಿಯೇ, ಇದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿಲ್ಲ, ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ನಾನು ಅರಣ್ಯ ಸಚಿವನಾಗಿದ್ದು, ಮರ ಕಳ್ಳತನಕ್ಕೆ ಸಹಕಾರ ನೀಡಿಲ್ಲ. ಮರಕಳ್ಳತನಕ್ಕೆ ಕ್ಷಮೆಯಿಲ್ಲ ಎಂದ ಅವರು, ದೇವಸ್ಥಾನಗಳಿಗೆ ಕೊಂಡೊಯ್ಯುವ ಮರಗಳ ಸಾಗಾಣಿಕೆಗೆ ಪರೋಕ್ಷವಾಗಿ ಸಹಕರಿಸಿದ್ದೇನೆ ಎಂದು ತಿಳಿಸಿದರು.

ಮತೀಯ ಸಾಮರಸ್ಯ  ಕೆರಳಿಸುವ ಧರ್ಮದ ಹೆಸರಿನಲ್ಲಿ  ವಿಭಜನೆ, ಹತ್ಯೆ ಮಾಡಿದ ಆರೋಪಿಗಳಿಗೆ ರಕ್ಷಣೆ ನೀಡುವವರು ಯಾರು?  ಹರೀಶ್ ಪೂಜಾರಿ, ನಝೀರ್ ಕೊಲೆಗೆ ಕಾರಣ ಯಾರು?  ಮತೀಯ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವವರು ಯಾರು? ಇವೆಲ್ಲದರ ಬಗ್ಗೆ ತನಿಖೆ ನಡೆಸುವಾಗ ಕಾನೂನು ಮೂಲಕ ವಕೀಲರನ್ನು ನೇಮಿಸುವುದು ಯಾರಾಗಿದ್ದಾರೆ? ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಆರೋಪ ಹೊರಿಸಿದ ಅವರು, ಮತೀಯ ಸಾಮರಸ್ಯಕ್ಕೆ ನಾಗರಿಕ ಸಮಾಜ ಒಟ್ಟಾಗಿ ಕೆಲಸ ಮಾಡಬೇಕು ಎಂದರು,

ಉಳಾಯಿಬೆಟ್ಟು ಪ್ರಕರಣ- ಬಂಧಿತ ವ್ಯಕ್ತಿ ಅಪರಾಧಿಯಲ್ಲ

ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಳಾಯಿಬೆಟ್ಟು ಪ್ರಕರಣ ಸಂಬಂಧ ಬಂಧಿತ ಅಮಾಯಕ, ವರ್ಷಗಳ ಹಿಂದೆಯೇ ಆಗಿನ ಕಮಿಷನರ್ ಈ ಕೇಸಿಗೆ ಮಹತ್ವ ನೀಡಬೇಡಿ ಎಂದಿದ್ದಾರೆ. ಅಂದು ಉಳಾಯಿಬೆಟ್ಟುವಿನಲ್ಲಿ ರಸ್ತೆಯ ವಿಷಯದ ಬಗ್ಗೆ 2ಗುಂಪುಗಳ ಮಧ್ಯೆ ನಡೆದ ಘರ್ಷಣೆ  ನಡೆದಿದ್ದು, 50ಜನರ ಮೇಲೆ ಕೇಸಿದೆ. ನನ್ನ ಮಟ್ಟಿಗೆ ಬಂಧಿತ ವ್ಯಕ್ತಿ ಅಪರಾಧಿಯಲ್ಲ ಆತ ಅಮಾಯಕ ಎಂದರು.

ಪೊಲೀಸ್ ಅಧಿಕಾರಿ ವರ್ಗಾವಣೆಯ ಬಗ್ಗೆ ಮಾತನಾಡಿದ ಅವರು, ಪಾಲೇಮಾರ್ ಅವರು ಕೂಡ ಇನ್ಸ್‌ಪೆಕ್ಟರ್ ಪ್ರಮೋದ್ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ. ಈಗಿನ ವರ್ಗಾವಣೆ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕೋಡಿಜಾಲ್ ಇಬ್ರಾಹಿಂ,  ಶಶಿಧರ್ ಹೆಗ್ಡೆ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

nklhmgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ತನ್ನ ವರ್ಗಾವಣೆಗೆ ತಾನೇ ತಡೆಯಾಜ್ಞೆ ನೀಡಿದ ನ್ಯಾಯಾಧೀಶ!

ಮುಂದಿನ ಸುದ್ದಿ »

ವಿಟ್ಲ: ಮಕ್ಕಳ ತುಳು ಸಾಹಿತ್ಯ ಸಮ್ಮೇಳನ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×