Saturday August 12 2017

Follow on us:

Contact Us

ಸರಕಾರಿ ಕಾಲೇಜಿಗೆ ದೊರಕದಿರುವ ಅನ್ನಭಾಗ್ಯ ಖಾಸಗಿ ಶಾಲೆಗೆ ದೊರಕಿರುವುದು ಆಶ್ಚರ್ಯ!: ಸಚಿನ್ ರಾಜ್ ಶೆಟ್ಟಿ

ನ್ಯೂಸ್ ಕನ್ನಡ ವರದಿ-(12.08.17): ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 8 ವರ್ಷಗಳಿಂದ ಬಿಸಿಯೂಟ ನಡೆಯುತ್ತಿದ್ದು, ವಿದ್ಯಾರ್ಥಿಗಳಿಂದ ವರ್ಷಕ್ಕೆ 1000ರೂ. ಸಂಗ್ರಹಿಸಿದರೂ ಊಟದ ವ್ಯವಸ್ಥೆಗೆ ಸಾಲುತ್ತಿಲ್ಲ. ಈ ಹಿಂದೆ ಇದರ ಬಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದಾಗ, ದತ್ತಿ ಇಲಾಖೆಯ ಕಾನೂನಿನಲ್ಲಿ ಅವಕಾಶ ಇಲ್ಲವೆಂದು ಮನವಿ ತಿರಸ್ಕರಿಸಿದ್ದಾರೆ.

ಆದರೆ ಕಲ್ಲಡ್ಕದ ಎರಡು ಖಾಸಗಿ ಶಾಲೆಗಳಿಗೆ 2ಕೋಟಿ ರೂ. ಮಿಕ್ಕಿದ ಹಣವನ್ನೇ ಚೆಕ್ ಮೂಲಕ ಪಡೆದಿರುವುದನ್ನು ಕಂಡಾಗ ಆಶ್ಚರ್ಯ ಎನಿಸಿದೆ. ಈ ಎರಡು ಶಾಲೆಗಳಿಗೆ ಸರಕಾರದ ಬಿಸಿಯೂಟದ ಯೋಜನೆ ಇದ್ದರೂ, ಇದನ್ನು ತಿರಸ್ಕರಿಸಿ ದೇವಸ್ಥಾನದಿಂದ ಹಣ ಪಡೆದು ಸರಕಾರದ ಬಿಸಿಯೂಟದ ಅಡುಗೆಯವರಿಂದ ಈ ಕಾರ್ಯ ಮಾಡಿಸಿರುವುದನ್ನು ಕಂಡಾಗ ಶಾಲೆಯ ಮುಖ್ಯಸ್ಥರು ಕಾನೂನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.

ಉಸ್ತುವಾರಿ ಸಚಿವರು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುವವರು. ಇವರ ಬಗ್ಗೆ ಆರೋಪ ಮಾಡಲು ಕಲ್ಲಡ್ಕ ಶಾಲೆಯ ಮುಖ್ಯಸ್ಥರಿಗೆ ಹಕ್ಕಿಲ್ಲ ಎಂದು ಬೆಳ್ಳಾರೆಯ ಡಾ. ಕೆ. ಶಿವರಾಮ ಕಾರಂತ ಸರಕಾರಿ ಪದವಿಪೂರ್ವ ಕಾಲೇಜು ಇದರ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸುರತ್ಕಲ್: ಗುಂಪು ಹಿಂಸಾ ಹತ್ಯೆಯ ವಿರುದ್ಧ ಬೃಹತ್ ಸಮಾವೇಶ

ಮುಂದಿನ ಸುದ್ದಿ »

ಚಿತ್ರನಟ ಉಪೇಂದ್ರ ಸಾರಥ್ಯದಲ್ಲಿ ‘ಪ್ರಜಾಕೀಯ’ ಪಕ್ಷ ಸ್ಥಾಪನೆ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×