Wednesday January 11 2017

Follow on us:

Contact Us
Belthangady 4 daeth6

ಬೆಳ್ತಂಗಡಿ: ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ಸಾವು- ಸಂಪೂರ್ಣ ವರದಿ

ನ್ಯೂಸ್ ಕನ್ನಡ ವರದಿ(11.01.2017)-ಬೆಳ್ತಂಗಡಿ: ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿ ಒಬ್ಬರು ಅಪಾಯದಿಂದ ಪಾರಾದ ಘಟನೆಯ ಹೆಚ್ಚಿನ ಮಾಹಿತಿಗಳು ನ್ಯೂಸ್ ಕನ್ನಡ ಡಾಟ್ ಇನ್ ಗೆ ಲಭ್ಯವಾಗಿದೆ.

ಮೃತಪಟ್ಟವರು ಉಡುಪಿ ಜಿಲ್ಲೆಯ ಫಕೀರನಕಟ್ಟೆ ನಿವಾಸಿಗಳಾದ ರಹೀಮ್(30), ಇತನ ಪತ್ನಿ ರುಬೀನಾ(25), ರುಬಿನಾಳ ತಂಗಿ ಯಾಸಿನ್ (23) ತಮ್ಮ ಸುಬಾನ್ (15) ಎಂಬವರಾಗಿದ್ದು ಅಪಾಯದಿಂದ ಪಾರಾದವರು ರುಬಿನಾರ ತಾಯಿ ಮೈಮುನಾ(55) ಎಂಬವರಾಗಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ಪ್ರಸಿದ್ದ ಪ್ರವಾಸಿ ತಾಣ ನಡ ಗ್ರಾಮದ ಗಡಾಯಿಕಲ್ಲು (ಜಮಲಾಬಾದ್ ಕೋಟೆ) ಹಾಗೂ ಇಲ್ಲಿನ ದರ್ಗಾ ವೀಕ್ಷಿಸಿ ನಂತರ ಅದರ ಬಳಿ ಇರುವ ಬೆಳ್ತಂಗಡಿ ನದಿಯಲ್ಲಿ ಸ್ನಾನಮಾಡಲು ಹೋಗಿದ್ದರು. ನಡ ಗ್ರಾಮದ ಮಂಜೊಟ್ಟಿಯಿಂದ ಜಮಲಾಬಾದ್ ಕೋಟೆಗೆ ಸಂಪರ್ಕಿಸುವ ರಸ್ತೆ ಮಧ್ಯದಲ್ಲೆ ಸೇತುವೆ ಇದ್ದು ಅಲ್ಲಿ ಕಾರು ನಿಲ್ಲಿಸಿ ಬೆಳ್ತಂಗಡಿ ನದಿಯಲ್ಲಿನ ನೀರಿನ ಗುಂಡಿಗೆ ಸ್ನಾನಮಾಡಲು ಇಳಿದಿದ್ದಾರೆ.

ಇದೇ ವೇಳೆ ಮಧ್ಯಾಹ್ನ ಸುಮಾರು 2ಗಂಟೆಯ ವೇಳೆಗೆ ಸಾರ್ವಜನಿಕರು ಇವರನ್ನು ನೋಡಿದ್ದು, ನಂತರ ಸ್ವಲ್ಪ ಸಮಯದ ಬಳಿಕ ಸಮೀಪ ಇರುವ ತೋಟದಲ್ಲಿ ನೀರು ಹಾಕುತ್ತಿದ್ದ ಸ್ಥಳೀಯರಿಗೆ ಬೊಬ್ಬೆ ಹಾಕುವುದನ್ನು ಕೇಳಿದ್ದು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದು ನೋಡಿದಾಗ ಮಹಿಳೆಯೋರ್ವಳು ಮುಳುಗುತ್ತಿರುವ ದೃಶ್ಯ ಕಂಡುಬಂದಿದ್ದು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಸಾರ್ವಜನಿಕರು ಸ್ಥಳಕ್ಕೆ ಬಂದಿದ್ದು ಈಕೆಯನ್ನು ನೀರಿನಿಂದ ಮೇಲಕ್ಕೆತ್ತಿ ಆಕೆಯನ್ನು ಬದುಕಿಸಿದ್ದಾರೆ. ತಕ್ಷಣ ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಕುಳಿತಿದ್ದ ಇವರದ್ದೇ ಕುಟುಂಬದ ಸದಸ್ಯೆ ಸಾಹಿನಾ ಇವರು ನೀಡಿದ ಮಾಹಿತಿಯಂತೆ ಇನ್ನುಳಿದ ನಾಲ್ವರು ನೀರಿನೊಳಗಿದ್ದಾರೆ ಎಂಬ ವಿಚಾರ ತಿಳಿದು ಸ್ಥಳೀಯರು ಮುಳುಗು ತಜ್ಞರ ನೆರವಿನೊಂದಿಗೆ ನೀರಿನಲ್ಲಿ ಹುಡುಕಾಡಿದ್ದು ನಾಲ್ವರ ಮೃತದೇಹಗಳು ನದಿಯಲ್ಲಿ ಪತ್ತೆಯಾಗಿದೆ.

ಸಣ್ಣ ಮಕ್ಕಳಿದ್ದ ಕಾರಣದಿಂದಾಗಿ ಮೈಮುನಾಳ ಕಿರಿಯ ಮಗಳು ಸಾಹಿನಾ ಮತ್ತು ರುಬಿನಾಳ ಒಂದು ವರ್ಷದ ಮಗು, ಮಕ್ಕಳಾದ ಸೈಮ್ (4) ಮತ್ತು ಸುಹೈಲ್(3) ಅವರು ಕಾರಿನಲ್ಲಿಯೇ ಕುಳಿತಿದ್ದರು ತನ್ನ ಕುಟುಂಬದವರು ನೀರಿನಲ್ಲಿ ಮುಳುಗಿದ ವಿಚಾರ ಇವರಿಗೆ ಮೊದಲು ತಿಳಿದೇ ಇರಲಿಲ್ಲ ಕಾರಿನಲ್ಲಿಯೇ ಕುಳಿತ ಕಾರಣ ಇವರು ಬದುಕಿ ಉಳಿದಂತಾಗಿದೆ.

ನದಿಯಲ್ಲಿ ಈ ಪ್ರದೇಶದಲ್ಲಿ ಆಳವಿರುವ ಗುಂಡಿಯಿದೆ ಇದರ ಅರಿವಿಲ್ಲದೆ ಈಜುಬಾರದ ಇವರು ಇಲ್ಲಿ ಸ್ನಾನಕ್ಕೆ ಇಳಿದಿದ್ದರು. ನೀರಿನಲ್ಲಿ ಆಟವಾಡುತ್ತಾ ಸುಬಾನ್ ಹೆಚ್ಚು ನೀರಿರುವ ಕಡೆಗೆ ಹೋಗಿದ್ದು ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಇದನ್ನು ಗಮನಿಸಿದ ಇತರರು ಆತನನ್ನು ಬದುಕಿಸಲು ಮುಂದಾಗಿದ್ದಾರೆ ಈ ಸಂದರ್ಭ ಇವರು ಒಬ್ಬೊಬ್ಬರಾಗಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ ಇವರು ಯಾರಿಗೂ ಸರಿಯಾಗಿ ಈಜು ಬಾರದಿದ್ದ ಕಾರಣದಿಂದಾಗಿ ನೀರು ಹೆಚ್ಚು ಆಳವಿರದಿದ್ದರೂ ಎಲ್ಲರೂ ನಿರಿನ ಸೆಳೆತಕ್ಕೆ ಇಲುಕಿ ಮುಳುಗಿ ಮೃತ ಪಟ್ಟಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, ಎಸ್.ಐ.ರವಿ, ತಹಶೀಲ್ದಾರರು ತಿಪ್ಪೇ ಸ್ವಾಮೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಗೆ ಸಂಬಂಧ ಪಟ್ಟ ಇತರ ಸುದ್ದಿಗಳನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

►ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ದಾರುಣ ಸಾವು
http://www.newskannada.in/?p=124726

nksbdgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಸೇತುವೆ ನಿರ್ಮಾಣಕ್ಕೆ ಚಾಲನೆ: ಇಚ್ಛಾಶಕ್ತಿಯಿದ್ದಾಗ ಅಭಿವೃದ್ಧಿ ಕಾರ್ಯ ಸುಗಮ – ಸಚಿವ ರೈ

ಮುಂದಿನ ಸುದ್ದಿ »

ಎಟಿಎಂನಲ್ಲಿ ಬಂತು ಅರ್ಧ ನೋಟು!

ಸಿನೆಮಾ

  • kattappa

    ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಕರ್ನಾಟಕದಲ್ಲಿ!

    March 18, 2017

    ನ್ಯೂಸ್ ಕನ್ನಡ ವರದಿ(18.03.2017)-ಬೆಂಗಳೂರು: ಬಾಹುಬಲಿ-2 ಚಿತ್ರಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನಿಷೇಧ ಮಾಡುವಂತೆ ಭಾರೀ ಒತ್ತಾಯಗಳು ಕೇಳಿ ಬಂದಿದೆ. ತಮಿಳು ನಟ ಸತ್ಯರಾಜ್ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಕನ್ನಡಿಗರ ...

    Read More
  • eega

    ಕಿಚ್ಚ ಸುದೀಪ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

    March 1, 2017

    ನ್ಯೂಸ್ ಕನ್ನಡ(1-3-2017): 2012-13ನೆ ಸಾಲಿನ “ನಂದಿ ಪ್ರಶಸ್ತಿ”ಯನ್ನು ಆಂಧ್ರಪ್ರದೇಶ ಸರಕಾರ ಘೋಷಿಸಿದ್ದು, “ಅಭಿನಯ ಚಕ್ರವರ್ತಿ” ಕಿಚ್ಚ ಸುದೀಪ್ ಅತ್ಯುತ್ತಮ ಖಳನಟನಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ, ಎಸ್.ಎಸ್. ರಾಜಮೌಳಿ ನಿರ್ದೇಶನದ “ಈಗ” ಚಿತ್ರದ ನಟನೆಗಾಗಿ ಸುದೀಪ್ ಅವರಿಗೆ “ನಂದಿ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×