Monday March 7 2016

Follow on us:

Contact Us
panaje

ಮೂಲಭೂತ ಸೌಕರ್ಯ ವಂಚಿತ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ

ನ್ಯೂಸ್ ಕನ್ನಡ ವಿಶೇಷ ವರದಿ-ಪುತ್ತೂರು: ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವು ಹಲವು ಮೂಲಭೂತ ಸೌಕರ್ಯಗಳಿಂದ ಹಾಗೂ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಇಲ್ಲಿಗೆ ಬರುವ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಇಲ್ಲಿನ ನಾಗರಿಕರು ಆಗ್ರಹಿಸುತ್ತಿದ್ದಾರೆ.

ಓರ್ವ ವೈದ್ಯೆ: ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ನಮಿತಾ ನಾಯ್ಕ್ ಎಂಬ ಓರ್ವ ವೈದ್ಯೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ 2 ವೈದ್ಯ ಹುದ್ದೆ ಇದೆಯಾದರೂ ಕೇವಲ ನಮಿತಾ ನಾಯ್ಕ್ ಅವರೇ ಎಲ್ಲವನ್ನೂ ಮಾಡುತ್ತಿರುವುದರಿಂದ ಅವರಿಗೂ ಕೆಲಸದ ಒತ್ತಡ ಇರುವುದಲ್ಲದೇ ಅವರು ಫೀಲ್ಡ್ ಕೆಲಸಗಳಿಗೆ, ಟ್ರೈನಿಂಗ್, ಮೀಟಿಂಗ್ ಮೊದಲಾದವುಗಳಿಗೆ ಹೋದಾಗ ಇಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಟ ನಡೆಸಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಹಾಗಾಗಿ ಶೀಘ್ರದಲ್ಲಿ ಇಲ್ಲಿನ ಆಸ್ಪತ್ರೆಗೆ ಇನ್ನೋರ್ವ ವೈದ್ಯರನ್ನು ಸಂಬಂಧಪಟ್ಟವರು ನೇಮಿಸುವುದು ಅಗತ್ಯವಾಗಿದೆ.

ಸ್ಟಾಫ್ ನರ್ಸ್ ಇಲ್ಲ: ಪಾಣಾಜೆ ಆರೋಗ್ಯ ಕೇಂದ್ರವು ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು ಸುಮಾರು 30 ಸಾವಿರ ಜನ ಸಾಂದ್ರತೆಯನ್ನು ಹೊಂದಿದೆ. ಇಲ್ಲಿ ಸ್ಟಾಫ್ ನರ್ಸ್‍ಗೆ 3 ಹುದ್ದೆ ಇತ್ತು, ಆದರೆ ಅದನ್ನು ಆರೋಗ್ಯ ಇಲಾಖೆ 3 ವರ್ಷಗಳ ಹಿಂದೆ ಕ್ಯಾನ್ಸಲ್ ಮಾಡಿದೆ. ಹಾಗಾಗಿ ಇಲ್ಲಿಗೆ ಸ್ಟಾಫ್ ನರ್ಸ್ ಅಗತ್ಯವಾಗಿ ಬೇಕಾಗಿದ್ದು ಆರೋಗ್ಯ ಇಲಾಖೆ ಮತ್ತೆ ಸ್ಟಾಫ್ ನರ್ಸ್‍ನ್ನು ಇಲ್ಲಿಗೆ ನೇಮಕ ಮಾಡಬೇಕಾಗಿದೆ. ಅದರ ಜೊತೆಗೆ ಕಿರಿಯ ಪುರುಷ ಆರೋಗ್ಯ ಸಹಾಯಕರ 5 ಹುದ್ದೆ ಖಾಲಿ ಇದ್ದು ಅದನ್ನು ಭರ್ತಿ ಮಾಡಬೇಕಾಗಿದೆ.

ಹಳೆಯ ಡಕೋಟಾ ಜೀಪು ಬದಲಾಗಬೇಕು: ಫೀಲ್ಡ್ ಹೋಗಲು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ, ವೈದ್ಯರಿಗೆ ತಕ್ಷಣ ಬೇಕಾದಲ್ಲಿ ಪ್ರಯಾಣಿಸಬಹುದಾದ ಜೀಪು ಬಹಳಷ್ಟು ಹಳೆಯದಾಗಿದ್ದು ಅದನ್ನು ಬದಲಾಯಿಸಿ ಹೊಸ ವಾಹನದ ವ್ಯವಸ್ಥೆ ಮಾಡಬೇಕಾಗಿದೆ. ಪ್ರಸ್ತುತ ಇರುವ ಹಳೆಯ ಜೀಪಿನ ರಿಪೇರಿಗೆ ಸಾಕಷ್ಟು ಹಣ ಖರ್ಚು ಮಾಡಲಾಗುತ್ತಿದ್ದು ಅದನ್ನು ಬದಲಾಯಿಸುವುದೇ ಸೂಕ್ತ ಎಂದು ಆಸ್ಪತ್ರೆಯ ಸಿಬ್ಬಂದಿಗಳೂ ಆಗ್ರಹಿಸುತ್ತಿದ್ದಾರೆ.

ನೀರಿನ ಸಮಸ್ಯೆ ಇದೆ: ಆರೋಗ್ಯ ಕೇಂದ್ರಕ್ಕೆ ನೀರಿನ ಸಮಸ್ಯೆಯೂ ಇದೆ, ಹಾಗಾಗಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಗೆ ಅನಿವಾರ್ಯವಾಗಿದೆ ಜೊತೆಗೆ ನಿಡ್ಪಳ್ಳಿ, ಇರ್ದೆ ಉಪಕೇಂದ್ರಕ್ಕೆ ಶಾಶ್ವತ ನೀರಿನ ವ್ಯವಸ್ಥೆಯ ಅನಿವಾರ್ಯತೆಯೂ ಇದೆ. ಅದನ್ನು ಸಂಬಂಧಪಟ್ಟವರು ಮಾಡಬೇಕಾಗಿದೆ.

ಆಸ್ಪತ್ರೆ ಆವರಣದಲ್ಲೇ ಪಾರ್ಕಿಂಗೆ, ಕ್ರಿಕೆಟ್: ಆಸ್ಪತ್ರೆಯ ವಠಾರದಲ್ಲೇ ದೊಡ್ಡ ಟ್ರಕ್ ಹಾಗೂ ಇತರ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದ್ದು ಅದನ್ನು ಯಾರೂ ಕೇಳುವವರೇ ಇಲ್ಲ ಎಂಬಂತಾಗಿದೆ. ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ವಿಶಾಲವಾದ ಸ್ಥಳ ಇರುವುದರಿಂದ ಇಲ್ಲಿ ವಾಹನ ಪಾರ್ಕಿಂಗ್ ಮಾಡಿ ಹೋಗುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದ್ದು ಇದಕ್ಕೆ ಆವರಣ ಗೋಡೆ ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಸಂಜೆ ಹೊತ್ತಿನಲ್ಲಿ ಇಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕ್ರಿಕೆಟ್ ಆಟ ಆಡುತ್ತಿದ್ದು ಅದೂ ಕೂಡಾ ಸಮಸ್ಯೆಯಾಗಿ ಪರಿಣಮಿಸಿದೆ. ಇತ್ತೀಚೆಗೆ ಇಲ್ಲಿ ಆಟ ಆಡಿದರ ಪರಿಣಾಮವಾಗಿ ಚೆಂಡು ತಗುಲಿ ಆಸ್ಪತ್ರೆಯ ಕಿಟಕಿಯ ಗಾಜುಗಳು ಒಡೆದು ಹೋಗಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ಇಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಹಾಗೂ ಆಟವಾಡಲು ಅವಕಾಶ ನೀಡದೇ ಇರಬೇಕಾದಲ್ಲಿ ಇಲ್ಲಿಗೆ ಆವರಣ ಗೋಡೆ ಅಗತ್ಯವಾಗಿ ಬೇಕಾಗಿದೆ. ಹಾಗಾಗಿ ಶೀಘ್ರದಲ್ಲಿ ಆಸ್ಪತ್ರೆಯ ಸುತ್ತ ಆವರಣ ಗೋಡೆ ನಿರ್ಮಿಸುವುದು ಅಗತ್ಯವಾಗಿದೆ.

ಇತರ ಅವಶ್ಯಕತೆಗಳು: ಇಲ್ಲಿ ಖಾಯಂ ಗ್ರೂಪ್ ಡಿ. 2 ಹುದ್ದೆ ಖಾಲಿ ಇದ್ದು ಅದು ಭರ್ತಿ ಮಾಡಬೇಕು. ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಅಗತ್ಯವಿದ್ದು ಭರ್ತಿ ಮಾಡಬೇಕಾಗಿದೆ. ಬೆಟ್ಟಂಪಾಡಿ ಉಪಕೇಂದ್ರದ ಕಟ್ಟಡ ನಾದುರಸ್ಥಿಯಲ್ಲಿದ್ದು ಹೊಸ ಕಟ್ಟಡದ ಅವಶ್ಯಕತೆ ಇದೆ.

ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇ ಆದಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿರುವ ಜನರಿಗೆ ಯಾವುದೇ ತೊಂದರೆಗಳಿಲ್ಲದೆ ಎಲ್ಲ ವೈದ್ಯಕೀಯ ಸೇವೆಗಳು ಲಭ್ಯವಾಗಲು ಸಾಧ್ಯವಿದೆ. ಇಲ್ಲಿನ ನಾಗರಿಕರೂ ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ.

ಇನ್ನೊಂದು ವೈದ್ಯರ ನೇಮಕವಾದರೆ ಒಳ್ಳೆಯದು-ಡಾ.ನಮಿತಾ ನಾಯ್ಕ್

ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ದೊಡ್ಡದಾದ ಕಾರಣ ಎಲ್ಲಾ ಅಂಗನವಾಡಿಗಳಿಗೆ, ಎಂಡೋ ಪೀಡಿತರ ಸಂದರ್ಶನ, ಸ್ಕೂಲ್ ಚೆಕಪ್, ಆಶ್ರಮ ಶಾಲೆ, ಮೊರಾರ್ಜಿ ದೇಸಾಯಿ ಶಾಲೆ ಮೊದಲಾದವುಗಳಿಗೆ ಭೇಟಿ ನೀಡಬೇಕಾಗಿರುವುದರ ಜೊತೆಗೆ ಮೀಟಿಂಗ್ ಹಾಗೂ ಟ್ರೈನಿಂಗ್‍ಗೂ ಹೋಗಬೇಕಾಗುತ್ತದೆ. ಇವೆಲ್ಲವುಗಳನ್ನು ನಿಭಾಯಿಸುವ ವೇಳೆ ಆಸ್ಪತ್ರೆಯಲ್ಲಿ ಕೆಲವೊಮ್ಮೆ ನಾನು ಅನಿವಾರ್ಯವಾಗಿ ಇರುವುದಿಲ್ಲ. ಈ ವೇಳೆ ರೋಗಿಗಳಿಗೆ ತೊಂದರೆಯಾಗುತ್ತಿರುವುದು ನಿಜ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಇನ್ನೊಂದು ವೈದ್ಯರನ್ನು ಇಲ್ಲಿಗೆ ನೇಮಕ ಮಾಡಿದರೆ ಒಳ್ಳೆಯದು ಎಂದು ಇಲ್ಲಿನ ವೈದ್ಯೆ ನಮಿತಾ ನಾಯ್ಕ್ ತಿಳಿಸಿದ್ದಾರೆ.

ಖಾಲಿ ಹುದ್ದೆಗಳು ಭರ್ತಿಯಾಗಲಿ- ವಿ.ಸಿ. ವಿಮಲಮ್ಮಲ್

ಇಲ್ಲಿ ಹಲವು ಹುದ್ದೆಗಳು ಖಾಲಿ ಇರುವುದು ನಿಜ. ಇಲ್ಲಿನ ಜನಸಾಂದ್ರತೆ ಹಾಗೂ ವ್ಯಾಪ್ತಿಯನ್ನು ಗಮನದಲ್ಲಿರಿಸಿಕೊಂಡು ಇಲ್ಲಿಗೆ ಬೇಕಾಗಿರುವ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆ ಮಾಡಿದ್ದೇ ಆದಲ್ಲಿ ಇಲ್ಲಿಗೆ ಬರುವ ರೋಗಿಗಳಿಗೆ ಇನ್ನಷ್ಟು ಉಪಕಾರಿಯಾಗಲಿದೆ. ಸ್ಟಾಫ್ ನರ್ಸ್ ಅಗತ್ಯವಾಗಿ ಬೇಕಾಗಿದೆ ಎಂದು ಹಿರಿಯ ಆರೋಗ್ಯ ಸಹಾಯಕಿ ವಿ.ಸಿ. ವಿಮಲಮ್ಮಲ್ ತಿಳಿಸಿದ್ದಾರೆ.

ಪ್ರತಿಭಟನೆ ಮಾಡುತ್ತೇವೆ-ಕೃಷ್ಣ ನಿಡ್ಪಳ್ಳಿ

ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವು ಹಲವು ಸೌಲಭ್ಯಗಳಿಂದ ವಂಚಿತವಾಗಿದ್ದು ಕೂಡಲೇ ಅವ್ಯವಸ್ಥೆಗಳನ್ನು ಸರಿಪಡಿಸಿ ಜನರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಕಲ್ಪಿಸುವಂತೆ ಕೋರಿ ನಾವು ಕಳೆದ ವರ್ಷ ಪುತ್ತೂರು ಸಹಾಯಕ ಕಮಿಷನ್‍ರವರಿಗೆ ಮನವಿ ಸಲ್ಲಿಸಿದ್ದೆವು. ಅವರು ಜಿಲ್ಲಾಧಿಕಾರಿಗಳಿಗೆ ಬರೆದಿರುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೂ ಇಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಸಂಬಂಧಪಟ್ಟವರು ಇನ್ನೂ ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಸದೇ ಇದ್ದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ಡಿ.ವೈ.ಎಫ್.ಐ. ಪುತ್ತೂರು ತಾಲೂಕು ಅಧ್ಯಕ್ಷ ಕೃಷ್ಣ ನಿಡ್ಪಳ್ಳಿ ತಿಳಿಸಿದ್ದಾರೆ.

nkyrpgkp

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವಿಟ್ಲ: ಮಸ್ಕತ್ ನಲ್ಲಿ ಹೃದಯಾಘಾತದಿಂದ ಸಾವು

ಮುಂದಿನ ಸುದ್ದಿ »

ಉಳ್ಳಾಲ: ಪ್ರವಾದಿಯವರ ಮೇಲೆ ಗೌರವ ಅಗತ್ಯ- ಶಾಫಿ ಸಅದಿ

ಸಿನೆಮಾ

 • bhavana

  ನಟಿ ಭಾವನಾರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದವನ ಬಂಧನ

  February 18, 2017

  ನ್ಯೂಸ್ ಕನ್ನಡ(18-2-2017): ಚಿತ್ರನಟಿ ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಳಂನಲ್ಲಿ ಭಾವನಾ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನಾ ಅವರ ಕಾರು ಚಾಲಕನಾಗಿದ್ದ ...

  Read More
 • Marali Manege

  ಸೆನ್ಸಾರ್ ಮಂಡಳಿಯವರನ್ನೂ ಕಣ್ಣೀರು ಹಾಕಿಸಿದ ಚಿತ್ರ ಬಿಡುಗಡೆಗೆ ಸಿದ್ಧ

  February 16, 2017

  ಯೋಗೇಶ್ ಮಾಸ್ಟರ್ ನಿರ್ದೇಶನದ ಚಿತ್ರ ಸಂಘಪರಿವಾರ-ಪ್ರಗತಿಪರರ ಅಭಿಪ್ರಾಯವನ್ನೂ ಬದಲಿಸಬಹುದಂತೆ ನ್ಯೂಸ್ ಕನ್ನಡ ವರದಿ(16.02.2017)-ಮಂಗಳೂರು: ಯೋಗೇಶ್ ಮಾಸ್ಟರ್ ಅವರು ನಿರ್ದೇಶಿಸಿರುವ ‘ಮರಳಿ ಮನೆಗೆ’ ಕನ್ನಡ ಚಿತ್ರವು ಇದೀಗ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ನಾಯಕರ ವೈಭವೀಕರಣದ ಚಿತ್ರಗಳನ್ನೇ ನೋಡಿ ...

  Read More
 • kaabil-hoon-lyrics-title-song-hrithik-roshan-yami-gautam

  ಬಾಕ್ಸ್ ಆಫೀಸ್ ನಲ್ಲಿ “ಕಮಾಲ್” ಮಾಡಿದ “ಕಾಬಿಲ್”

  February 8, 2017

  ನ್ಯೂಸ್ ಕನ್ನಡ(8-2-2017): ಹೃತಿಕ್ ರೋಶನ್-ಯಾಮಿ ಗೌತಮ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರ “ಕಾಬಿಲ್” ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಿದ್ದು, ಸುಮಾರು 80 ಕೋಟಿ ರೂ. ಗಳಿಸಿದೆ. ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಗಳಿಸಿದ ಕಾಬಿಲ್ ಎರಡನೆ ವಾರಾಂತ್ಯದಲ್ಲಿ 14.55 ...

  Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×