Thursday December 7 2017

Follow on us:

Contact Us

ತನ್ನ ಮಗಳ ಬಗ್ಗೆ ಟ್ರೋಲ್ ಮಾಡಿದವರಿಗೆ ಟ್ವಿಟ್ಟರ್ ನಲ್ಲಿ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್ !

ನ್ಯೂಸ್ ಕನ್ನಡ ವರದಿ: ಅಭಿಷೇಕ್ ಬಚ್ಚನ್ ನಿಜ ಜೀವನದಲ್ಲಿ ತುಂಬಾ ಕಾಮಿಡಿ ಮಾಡುವ, ಯಾವತ್ತೂ ಗೆಳೆಯರೊಂದಿಗೆ ತಮಾಷೆ ಹಾಸ್ಯ ಚಟಾಕಿ ಹಾರಿಸುವ ಸ್ವಭಾವದ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತುಂಬಾ ಕ್ರಿಯಾಶೀಲರಾಗಿರುವ ಅಭಿಷೇಕ್ ತಮ್ಮ ಸ್ನೇಹಿತರ ಕಾಲೆಳೆಯುತ್ತಾ ಟ್ರೋಲ್ ಮಾಡುತ್ತಾ ಸುದ್ದಿಯಲ್ಲಿರುತ್ತಿದ್ದರು. ತಮ್ಮ ಬಗ್ಗೆ ಯಾರಾದರೂ ಟ್ರೋಲ್ ಮಾಡಿದರೂ ಅದನ್ನು ತಮಾಷೆಯಾಗಿ ಸ್ವೀಕರಿಸಿ ಹುರುದುಂಬಿಸುತ್ತಿದ್ದರು.

ಆದರೆ ಈ ನಟ ಎಲ್ಲಾ ತಂದೆಯಂತೆ ತಮ್ಮ ಮಕ್ಕಳ ವಿಷಯಕ್ಕೆ ಬಂದಾಗ ತುಂಬಾ ಖಡಕ್. ತನ್ನ ಮುದ್ದಿನ ಮಗಳು ಆರಾಧ್ಯಳನ್ನು ಟ್ವಿಟ್ಟರ್ ನಲ್ಲಿ ಯಾರೋ ಟ್ರೋಲ್ ಮಾಡಿದಾಗ ಯಾವತ್ತೂ ಕಾಮಿಡಿ ಮೂಡ್ ನಲ್ಲಿರುವ ಅಭಿಷೇಕ್ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಆರಾಧ್ಯ ತನ್ನ ತಾಯಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಜೊತೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು ಮತ್ತು ತಾಯಿಯೊಂದಿಗಿದ್ದ ಎಲ್ಲಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತಿತ್ತು. ಈ ವಿಷಯದ ಕುರಿತು ‘ಅಭಿಷೇಕ್ ನಿಮ್ಮ ಮಗಳು ಸ್ಕೂಲ್ ಗೆ ಹೋಗ್ತಿಲ್ವ? ತಾಯಿಯ ಜೊತೆ ಟ್ರೀಪ್ ಗೆ ಹೋಗಲು ಶಾಲೆ ಅವರು ಹೇಗೆ ಅನುಮತಿ ನೀಡುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ, ಯಾವಾಗ ನೊಡಿದ್ದರು ತನ್ನ ಅಹಂಕಾರದ ತಾಯಿ ಜೊತೆ ಕೈ-ಕೈ ಹಿಡಿದು ತಿರುಗುತ್ತಿರುತ್ತಾಳೆ. ಆಕೆಯ ಬಾಲ್ಯ ಸಾಮಾನ್ಯವಾಗಿಲ್ಲ’ ಎಂದು ಶೆರಿನ್ ಬ್ಯಾಟ್ಡಿ ಟ್ವೀಟ್ ಮಾಡಿದ್ದರು.

ಶೆರಿನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್ “ಮೇಡಂ, ನನಗೆ ತಿಳಿದ ಹಾಗೆ ವಾರಾಂತ್ಯದಲ್ಲಿ ಹಲವು ಶಾಲೆಗಳು ಮುಚ್ಚಿರುತ್ತದೆ. ಅವಳು ವಾರದ ದಿನಗಳಲ್ಲಿ ಮಾತ್ರ ಶಾಲೆಗೆ ಹೋಗುತ್ತಾಳೆ. ಬಹುಶಃ ನಿಮ್ಮ ಟ್ವೀಟ್ ನಲ್ಲಿ ನೀವು ನಿಮ್ಮ ಕಾಗುಣಿತವನ್ನು ಪರಿಗಣಿಸಬೇಕು” ಎಂದು ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ. ಅಭಿಷೇಕ್ ಆ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಶೆರಿನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಕ್ಯಾನ್ಸರ್ ನಿಂದ ಬಳಲುತ್ತಿರುವ ಅಭಿಮಾನಿಯ ಕೊನೆಯ ಆಸೆ ಈಡೇರಿಸಿ ಮನಗೆದ್ದ ಕಿಚ್ಚ!

ಮುಂದಿನ ಸುದ್ದಿ »

ನೋಟ್ ಬ್ಯಾನ್ ಮಾಡಿದ ಕೇವಲ 53 ದಿನಗಳಲ್ಲೇ ನಡೆಯಿತು ಈ ಘಟನೆ!

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×