ಆತ್ಮಹತ್ಯೆಗೂ ಮುನ್ನ ಪರಮೇಶ್ವರ್ ಪಿಎ ಹೇಳಿದ್ದೇನು ಗೊತ್ತೆ?

0
2616

ನ್ಯೂಸ್ ಕನ್ನಡ ವರದಿ: ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್​ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಇಂದು ಅವರ ಪಿಎ ರಮೇಶ್​ ಕುಮಾರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳವ ಮುನ್ನ ರಮೇಶ್​​, ಸ್ನೇಹಿತರೊಬ್ಬರಿಗೆ ಕರೆ ಮಾಡಿ ನಾನು ಬಡವ.. ನನ್ನ ಮನೆಯ ಮೇಲೆ ಐಟಿ ದಾಳಿ ಮಾಡಿದ್ದಾರೆ. ನಿಯತ್ತಿನಿಂದ ಬದುಕಿದ್ದೇನೆ, ಈಗಷ್ಟೇ ಮನೆ ಕಟ್ಟಿಸುತ್ತಿದ್ದೇನೆ. ನನ್ನ ಮನೆ ಮೇಲೆ ಐಟಿ ದಾಳಿ ಮಾಡಿದ್ದಾರೆ, ಇದು ಅನ್ಯಾಯ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಸ್ಥಿತಿಯಲ್ಲಿ ನಾನಿಲ್ಲ. ಅವರ ವಿಚಾರಣೆ ಎದುರಿಸಲು ನನಗೆ ಆಗೋದಿಲ್ಲ. ಉತ್ತರ ಕೊಡದಿದ್ದರೆ ಅವರು ನನ್ನನ್ನು ಬಿಡೋದಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ತಿದ್ದೀನಿ. ಈಗ ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿದ್ದೀನಿ ಅಂತ ಹೇಳಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here