‘ವಾಯು’ ಚಂಡಮಾರುತದ ಅಬ್ಬರ; ಗುಜರಾತ್’ನಲ್ಲಿ ಕಟ್ಟೆಚ್ಚರ, ರಾಜ್ಯದಲ್ಲೂ ತೀವ್ರ ಮಳೆ?

0
608

ನ್ಯೂಸ್ ಕನ್ನಡ ವರದಿ (12-6-2019): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಫನಿ ಚಂಡಮಾರುತದ ಬಳಿಕ, ಈಗ ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಎದ್ದಿರುವ ‘ವಾಯು’ ಚಂಡಮಾರುತ ಬುಧವಾರ ತನ್ನ ವೇಗವನ್ನು ಹೆಚ್ಚಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಗುಜರಾತ್, ಮುಂಬೈಯಲ್ಲಿ ಚಂಡಮಾರುತದ ಕಾರಣ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ಲಭ್ಯವಾಗಿದೆ. ಅರಬ್ಬಿ ಸಮುದ್ರದ ಬಳಿ ಮೀನುಗಾರಿಕೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ವಾಯು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದು, ಗುಜರಾತಿನ ಕರಾವಳಿ ಪ್ರದೇಶ ವೆರವಲ್ ಅನ್ನು ತಲುಪಿದೆ. ಬುಧವಾರ ಮತ್ತು ಗುರುವಾರ ಗುಜರಾತಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಅಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

LEAVE A REPLY

Please enter your comment!
Please enter your name here