ಬಹುಮತ’ ಸಾಬೀತು ಪಡಿಸಿದ ಮಹಾರಾಷ್ಟ್ರ ಸಿಎಂ ‘ಉದ್ಧವ್ ಠಾಕ್ರೆ’

0
634

ನ್ಯೂಸ್ ಕನ್ನಡ ವರದಿ: ಎನ್‌ಸಿಪಿ – ಕಾಂಗ್ರೆಸ್ ಜೊತೆಗಿನ ಮೈತ್ರಿಯೊಂದಿಗೆ ಮಹಾರಾಷ್ಟ್ರದಲ್ಲಿ ಸಿಎಂ ಆಗಿರುವ ಉದ್ಧವ್ ಠಾಕ್ರೆ ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಿದ್ದಾರೆ. ಕೆಲ ನಿಮಿಷಗಳ ಹಿಂದೆ ನಡೆದ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಶಿವಸೇನಾ-ಕಾಂಗ್ರೆಸ್‌-ಎ‌ನ್‌ಸಿಪಿ ಪರ ಬಹುಮತ ಬಂದಿದ್ದೆ. ಸರಕಾರದ ನಡೆಯನ್ನು ಖಂಡಿಸಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ತಮ್ಮ ಪಕ್ಷದ ಸದ್ಯಸರೊಂದಿಗೆ ಸದನದಿಂದ ಹೊರ ನಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಶುಕ್ರವಾರ, ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್, ಕಾಳಿದಾಸ್ ಕೊಲಂಬಕರ್ ಅವರ ಸ್ಥಾನಕ್ಕೆ ಎನ್‌ಸಿಪಿಯ ದಿಲೀಪ್ ವಲ್ಸೆ ಪಾಟೀಲ್ ಅವರನ್ನು ನೇಮಿಸಲಾಗಿತ್ತು. . ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಹೊಸ ಸರ್ಕಾರ ತನ್ನ ಬಹುಮತವನ್ನು ಸಾಬೀತು ಪಡಿಸಿದೆ.

ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಹೊಸ ಸರ್ಕಾರ ತನ್ನ ಬಹುಮತವನ್ನು ಸಾಬೀತು ಪಡಿಸಿದೆ.

ಇನ್ನು ಇಂದು ಸದನದಲ್ಲಿ ಬಹುಮತವನ್ನು ಸಾಬೀತು ಪಡಿಸಿರುವ ಹಿನ್ನಲೆಯಲ್ಲಿ ಇಂದು ಸಂಜೆಯೊಳಗೆ ಅಥಾವ ನಾಳೆಯೊಳಗೆ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಾಗುವುದು ಎನ್ನಲಾಗಿದೆ.

ಇನ್ನು ಇದಕ್ಕೂ ಮುನ್ನ ಸದನದಲ್ಲಿ ಮಾತನಾಡಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ವಿಧಾನಸಭೆಯ ನಿಯಮವನ್ನು ಉಲ್ಲಂಘನೆ ಮಾಡಿ ಸದನವನ್ನು ನಡೆಸಲಾಗುತ್ತಿದೆ, ಅಧಿವೇಶನ ಆರಂಭಕ್ಕೂ ಮುನ್ನ ವಂದೆಮಾತರಂ ಮೂಲಕ ಶುರು ಮಾಡಲಿಲ್ಲ ಅಂತ ಹೇಳಿದರು. ಇದೇ ವೇಳೆ ಬಿಜೆಪಿ ಸದ್ಯಸರು ದಾದಾಗಿರಿ ನಹೀಚಲೇಗಿ ಅಂತ ಘೋಷಣೆ ಕೂಗಿದರು. ಇನ್ನು ಬಿಜೆಪಿ ಸದ್ಯಸರ ಮನವೊಲಿಸುವುದಕ್ಕೆ ಹಂಗಾಮಿ ಸದ್ಯಸರು ಎಲ್ಲ ರೀತಿಯ ಪ್ರಯತ್ನ ನಡೆಸಿದರು. ಕೂಡ ಬಿಜೆಪಿ ಸದ್ಯಸರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಇದೇ ವೇಳೆ ಸಿಎಂ ತಮ್ಮ ನೂತನ ಮಂತ್ರಿಮಂಡಲವನ್ನು ಪರಿಚಯಮಾಡಿಕೊಟ್ಟರು.

LEAVE A REPLY

Please enter your comment!
Please enter your name here