ಸಿ.ಟಿ ರವಿಯ ಹಿಂದುತ್ವದ ಭಾಷಣವನ್ನು ಅರ್ಧದಲ್ಲೇ ತಡೆದ ಸ್ವಾಮೀಜಿ ಹೇಳಿದ್ದೇನು ಗೊತ್ತೇ?

0
2721

ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ಶಾಸಕ ಸಿ. ಟಿ. ರವಿಯನ್ನು ಕಾರ್ಯಕ್ರಮದಲ್ಲೇ ತಡೆ ಹಿಡಿದ ಶಿವಾಚಾರ್ಯ ಸ್ವಾಮಿಗಳು !

ನ್ಯೂಸ್ ಕನ್ನಡ ವರದಿ : ಸತತ 17 ವರ್ಷಗಳ ಕಾಲ ಶಾಸಕರಾಗಿರುವ ಸಿ.ಟಿ.ರವಿ, ತರೀಕೆರೆಯ ಸಾಣೆಹಳ್ಳಿ ಸಹಮತ ವೇದಿಕೆ, ಜಿಲ್ಲಾ ಸ್ವಾಗತ ಸಮಿತಿ ವತಿಯಿಂದ ಪಟ್ಟಣದ ವೀರಮಾತೆ ಅಕ್ಕ ನಾಗಲಾಂಬಿಕೆ ಐಕ್ಯಮಂಟಪದಲ್ಲಿ ನೆಡೆದ ಕಲ್ಯಾಣ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಪರವಾಗಿ ಶಾಸಕ ಸಿ.ಟಿ.ರವಿ ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರು. ಆ ವೇಳೆ ಅವರನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಡೆದು ಮಾತು ಮೊಟಕುಗೊಳಿಸಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ.

ಶಾಸಕ ಸಿ.ಟಿ.ರವಿ ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾಗ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಡೆ ಹಿಡಿದು, ನಿಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪುವುದಿಲ್ಲ, ಎಲ್ಲರನ್ನೂ ಒಳಗೊಂಡ ದೇಶವನ್ನು ನಾವು ಕಾಣಬಯಸುತ್ತೇವೆ, ಇದರಿಂದಾಗಿ ನಾವು ದೇಶವನ್ನು ಕಟ್ಟುವ ಕಾರ್ಯಕ್ಕೆ ಎಲ್ಲರೂ ಒಗ್ಗಟ್ಟಾಗಬೇಕು, ಮನಸನ್ನು ತಿಳಿಗೊಳಿಸಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here