ಸಿ.ಟಿ ರವಿಯವರ ಪ್ರಕಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಎಷ್ಟು ಮತಗಳಿಂದ ಗೆಲ್ಲುತ್ತೆ ಗೊತ್ತೇ?

0
659

ನ್ಯೂಸ್ ಕನ್ನಡ ವರದಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದೆಯಾಗಿದ್ದ ಶೋಭಾ ಕರಂದಾಜ್ಲೆ ವಿರುದ್ಧ ತೀವ್ರ ಅಸಮಾಧಾನ ಜನರಲ್ಲೂ, ಬಿಜೆಪಿ ಪಕ್ಷದ ನಾಯಕರಲ್ಲೂ ಇದ್ದರೂ ಯಡಿಯುರಪ್ಪ ಅವರ ಹಠದಿಂದ ಮತ್ತೊಮ್ಮೆ ಸ್ಪರ್ಧೆಗೆ ನಿಂತು ಜನರ ಪರೀಕ್ಷೆ ಎದುರಿಸುತ್ತಿದ್ದಾರೆ, ಅವರ ವಿರುದ್ಧ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ಪರ್ಧಿಸಿ ಚಿಕ್ಕಮಗಳೂರು ಜಿಲ್ಲೆಯ ಸುಮಾರು ಒಂದು ಲಕ್ಷ ಜೆಡಿಎಸ್ ಮತ ಹಾಗೂ ಕಾಂಗ್ರೆಸ್ ಮತದೊಂದಿಗೆ ಗೆಲುವಿನ ಲೆಕಾಚಾರದಲ್ಲಿ ತೊಡಗಿದ್ದು. ಫಲಿತಾಂಶ ತೀವ್ರ ಕುತೂಹಲಕ್ಕೆ ಎಡೆಮಾಡಿದೆ.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ, ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಿಂತ ರಾಷ್ಟ್ರೀಯ ವಿಚಾರಗಳು ಪ್ರಧಾನಿ ಅಭ್ಯರ್ಥಿ ಕೇಂದ್ರಿತವಾಗಿ ಚುನಾವಣೆ ನಡೆದಿದೆ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1.75ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here