ದೇಶದಲ್ಲಿ 24 ಗಂಟೆಗಳಲ್ಲಿ 3900 ಮಂದಿಗೆ ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 46,433ಕ್ಕೆ ಏರಿಕೆ

0
73

ನ್ಯೂಸ್ ಕನ್ನಡ ವರದಿ: ದೇಶದಲ್ಲಿ ಮಾರಕ ಕೊರೊನಾ ವೈರಸ್ ದಿನೇ ದಿನೇ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೊರೊನಾ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಏತನ್ಮಧ್ಯೆ, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3900 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಂದೇ ದಿನದಲ್ಲಿ ಡೆಡ್ಲಿ ಕೊರೊನಾಗೆ 195 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಒಂದೇ ದಿನದಲ್ಲಿ ಸೋಂಕು ಪೀಡಿತರು ಹಾಗೂ ಸೋಂಕಿಗೆ ತುತ್ತಾಗಿ ಬಲಿಯಾದವರ ಸಂಖ್ಯೆ ದಾಖಲೆಯಾಗಿದೆ.

ಈ ಕುರಿತಂತೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 3900 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಡೆಡ್ಲಿ ಕೊರೊನಾಗೆ 195 ಮಂದಿ ಬಲಿಯಾಗಿದ್ದಾರೆ. ಇನ್ನು ದೇಶದಲ್ಲಿ ಮಾರಕ ಕೊರೊನಾಗೆ ತುತ್ತಾದವರ ಸಂಖ್ಯೆ 46,433 ಕ್ಕೆ ಏರಿಕೆಯಾಗಿದ್ದು, ಈ ಪೈಕಿ 32,134 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ರೆ ಪಡೆಯುತ್ತಿದ್ದಾರೆ.

ಇನ್ನು 12,727 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ವೇಳೆ, ದೇಶದಲ್ಲಿ ಈವರೆಗೆ ಕಿಲ್ಲರ್ ಕೊರೊನಾಗೆ ಬಲಿಯಾದವರ ಸಂಖ್ಯೆ 1568ಕ್ಕೆ ಏರಿಕೆಯಾಗಿದೆ…

LEAVE A REPLY

Please enter your comment!
Please enter your name here