ಇಂದು ಒಂದೇ ದಿನದಲ್ಲಿ 105 ಜನರಲ್ಲಿ ಕೊರೊನ ಸೊಂಕು ದೃಢ; ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆ

0
38

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇಂದು ಒಂದೇ ದಿನದಲ್ಲಿ 105 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀದಿದ ಮಾಹಿತಿ ಪ್ರಕಾರ ತುಮಕೂರು 8, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 10, ಬೆಂಗಳೂರು 5, ಹಾಸನ 14, ಬೀದರ್ 6, ದಾವಣಗೆರೆ 3, ಬೆಂಗಳೂರು ಗ್ರಾಮಾಂತರ 4, ಹಾವೇರಿ 6, ಧಾರವಾಡ 2, ಉತ್ತರ ಕನ್ನಡ 1, ದಕ್ಷಿಣ ಕನ್ನಡ 2,ವಿಜಯಪುರ 2, ಬಾಗಲಕೋಟೆ 1, ಚಿತ್ರದುರ್ಗ 1, ಬೆಳಗಾವಿ 1 ಜನರಲ್ಲಿ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು ಪತ್ತೆಯಾದ 105 ಹೊಸ ಪ್ರಕರಣಗಳಲ್ಲಿ 91 ಜನ ಹೊರ ರಾಜ್ಯಗಳಿಂದ ಬಂದವರೇ ಆಗಿದ್ದಾರೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯದಿಂದ ಬಂದವರೇ 89 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

LEAVE A REPLY

Please enter your comment!
Please enter your name here