ರಾಜ್ಯದಲ್ಲಿ ಇಂದು ಒಂದೇ ದಿನ 416 ಜನರಿಗೆ ಕೊರೊನ ಪಾಸಿಟಿವ್: ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆ

0
90

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 416ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.ಇವರಲ್ಲಿ 5391ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3170ಆಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು , ಇಂದು ಬೆಂಗಳೂರು ನಗರ – 94, ಬೀದರ್ – 73, ಬಳ್ಳಾರಿ – 38, ರಾಮನಗರ – 38, ಕಲಬುರ್ಗಿ – 34, ಮೈಸೂರು – 22, ಹಾಸನ – 16, ರಾಯಚೂರು – 15, ಉಡುಪಿ – 13, ಹಾವೇರಿ – 12, ವಿಜಯಪುರ – 09, ಚಿಕ್ಕಮಗಳೂರು – 08, ಧಾರವಾಡ – 05, ಚಿಕ್ಕಬಳ್ಳಾಪುರ – 05, ದಕ್ಷಿಣ ಕನ್ನಡ – 04, ಮಂಡ್ಯ – 04, ಉತ್ತರ ಕನ್ನಡ – 04, ಕೋಲಾರ -04, ಬೆಂಗಳೂರು ಗ್ರಾಮಾಂತರ -04, ದಾವಣಗೆರೆ -03, ಬಾಗಲಕೋಟೆ – 02, ಶಿವಮೊಗ್ಗ – 02, ಗದಗ – 02, ತುಮಕೂರು – 02, ಬೆಳಗಾವಿ – 01, ಚಾಮರಾಜನಗರ – 01 ಕೊರೋನಾ ಕೇಸ್ ಪತ್ತೆಯಾಗುವ ಮೂಲಕ ಇಂದು 416 ಜನರಿಗೆ ಕೊರೋನಾ ದೃಢಪಟ್ಟಿದೆ.

ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾದ್ರೇ, 5391 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 3170 ಆಗಿದೆ. ರಾಜ್ಯದಲ್ಲಿ ಇಂದು 9 ಕೊರೋನಾ ಸೋಂಕಿತರು ಕೊರೋನಾಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 132ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here