ಕೊರೊನ ಭೀತಿ: ಮುಂಬೈ ಏರ್ಪೋರ್ಟ್ ನಲ್ಲಿ ಹೊಸ ಕ್ರಮ..!

0
83

ನ್ಯೂಸ್ ಕನ್ನಡ ವರದಿ: ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ, ಕೊರೊನಾ ಸೋಂಕಿತರ ಕೈ ಮೇಲೆ ಮುದ್ರೆ ಒತ್ತುವ ಸರ್ಕಾರದ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊರೊನಾ ವೈರಸ್ ತಗುಲಿರುವ ಶಂಕೆಯ ಆಧಾರದ ಮೇಲೆ ಗೃಹ ಬಂಧನಕ್ಕೆ ತುತ್ತಾಗುವವರ ಕೈ ಮೇಲೆ ಚಿಕಿತ್ಸೆಯ ದಿನಾಂಕವನ್ನು ನಮೂದಿಸಿ ಮುದ್ರೆ ಒತ್ತಲಾಗುತ್ತಿದೆ. ಇದರಿಂದಾಗಿ ನಿರ್ದಿಷ್ಟ ವ್ಯಕ್ತಿಯ ಚಿಕಿತ್ಸಾ ವಿಧಾನಗಳ ಕುರಿತು ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ, ಕೊರೊನಾ ತಗುಲಿರುವ ಶಂಕೆ ಇರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಜೊತೆಗೆ ಅವರ ಎಡಗೈ ಮೇಲೆ ದಿನಾಂಕವನ್ನು ನಮೂದಿಸಿ ಮುದ್ರೆ ಒತ್ತಾಲಾಗುತ್ತಿದೆ ಎಂದು ತೋಪೆ ಸ್ಪಷ್ಟಪಡಿಸಿದರು.

ಮುದ್ರಾ ಒತ್ತಿದ ಕ್ರಮವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೊರೊನಾ ಪೀಡಿತರನ್ನು ಗುರುತಿಸಿ ಅವರಿಗೆ ಚಿಕಿತ್ಸೆಯನ್ನು ನೀಡುವುದರ ಜೊತೆಗೆ ವೈರಾಣು ಹರಡದಂತೆ ತಡೆಗಟ್ಟುವ ಜವಾಬ್ದಾರಿಯೂ ನಮ್ಮ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here