ಕೊರೊನಾ ಭೀತಿ: ರಾಜ್ಯದಾದ್ಯಂತ ನಾಳೆಯಿಂದ ಮಾಲ್‌ಗಳು, ಪಬ್, ಮದುವೆ ಸೇರಿದಂತೆ ಎಲ್ಲಾ ರೀತಿ ಸಾರ್ವಜನಿಕ ಸಮಾರಂಭ ಬಂದ್..!

0
91

ನ್ಯೂಸ್ ಕನ್ನಡ ವರದಿ: ಕೊರೊನಾ ವೈರಸ್‌ ಆತಂಕ ಸೃಷ್ಟಿಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರದಿಂದ ಅಂದರೆ ಮಾ.14 ಒಂದು ವಾರಗಳ ವರೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಮಾರಂಭಗಳು, ಸಭೆಗಳು, ಕಾಲೇಜು ಹಾಗೂ ಮಾಲ್‌ಗಳನ್ನು ಬಂದ್‌ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.

ದಿನೇ ದಿನೇ ಕೋವಿಡ್‌–19 ಭೀತಿ ಹೆಚ್ಚುತ್ತಿರುವುದರಿಂದ ಒಂದು ವಾರ ಚಿತ್ರಮಂದಿರ ಸೇರಿದಂತೆ ನೂರಾರು ಜನರು ಸೇರುವ ಸ್ಥಳಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ. ಶಾಪಿಂಗ್‌ ಮಾಲ್‌ಗಳು, ಪಬ್‌ಗಳು, ಐಟಿ–ಬಿಟಿ ಸಂಸ್ಥೆಗಳು, ಪಾರ್ಕ್‌ ಅನ್ನು ಬಂದ್‌ ಮಾಡಲು ಆದೇಶಿಸಲಾಗಿದೆ. ಮದುವೆ, ಜಾತ್ರೆ ಸಮಾರಂಭ ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿದೆ ಎಂದು ಹೇಳಿದ್ದಾರೆ. ಕಲಬುರ್ಗಿಯಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ರಥೋತ್ಸವ, ಜಾತ್ರೆ ರದ್ದು ಪಡಿಸಿರುವುದಾಗಿಯೂ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here