ಕಾಮನ್ ವೆಲ್ತ್ ಗೇಮ್ಸ್: ಕೇವಲ 80 ಸೆಕೆಂಡ್ ಗಳಲ್ಲಿ ಎದುರಾಳಿಯನ್ನು ಮಣಿಸಿ ಹ್ಯಾಟ್ರಿಕ್ ಚಿನ್ನಗೆದ್ದ ಸುಶೀಲ್ ಕುಮಾರ್!

0
583

ನ್ಯೂಸ್ ಕನ್ನಡ ವರದಿ-(12.04.18): ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಪಂದ್ಯಗಳಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಇದೀಗ ಭಾರತವನ್ನು ಪ್ರತಿನಿಧಿಸಿದ ಕುಸ್ತಿಪಟು ಸುಶೀಲ್ ಕುಮಾರ್ 74ಕೆಜಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಅನುಭವಿ ಕುಸ್ತಿಪಟು ಜಾನ್ಸ್ ಬೋಥಾರನ್ನು ಕೇವಲ 80 ಸೆಕೆಂಡ್ ಗಳಲ್ಲಿ ಮಣಿಸಿದ ಸುಶೀಲ್ ಕುಮಾರ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಹ್ಯಾಟ್ರಿಕ್ ಮೂರು ಚಿನ್ನದ ಪದಕವನ್ನು ಗೆದ್ದ ಮೊದಲ ಕುಸ್ತಿಪಟು ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ಮೊದಲು ಸುಶೀಲ್ ಕುಮಾರ್ 2010ರಲ್ಲಿ 66 ಕೆ.ಜಿ. ವಿಭಾಗದಲ್ಲಿ, 2014ರಲ್ಲಿ 74 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮೊದಲೆರಡು ಸುತ್ತುಗಳಲ್ಲಿ ಕೆನಡಾ ಹಾಗೂ ಪಾಕಿಸ್ತಾನದ ಕುಸ್ತಿಪಟುಗಳನ್ನು ಕ್ರಮವಾಗಿ 11-0 ಹಾಗೂ 10-0 ಅಂತರದಲ್ಲಿ ಪಂದ್ಯ ಗೆದ್ದಿದ್ದರು. ಇನ್ನು ಸೆಮಿಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕಾನೋರ್ ಇವಾನ್ಸ್’ರನ್ನು ಕೇವಲ ಎರಡು ನಿಮಿಷದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು.

LEAVE A REPLY

Please enter your comment!
Please enter your name here