ನಿಮ್ಮ ವಲಯದಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ನೀವೇ ಹೊಣೆ: ಸಿಎಂ ಯಡಿಯೂರಪ್ಪ

0
39

ನ್ಯೂಸ್ ಕನ್ನಡ ವರದಿ: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಸುವ ಕುರಿತಂತೆ ಸಿಎಂ ಯಡಿಯೂರಪ್ಪ ಒಲವು ತೋರಿಲ್ಲ. ಇಂದು ನಡೆದ ಸಭೆಯ ವೇಳೆ, ಸಿಎಂ ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಮಾತ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ವಲಯವಾರು ಮಟ್ಟದಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ನೀವೇ ಹೊಣೆ ಎಂದು ಸಿಎಂ ಬೆಂಗಳೂರು ಕೊರೊನಾ ನಿಯಂತ್ರಣಕ್ಕೆ ನೇಮಿಸಿರುವ ಅಷ್ಟದಿಕ್ಪಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು.22ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಏತನ್ಮಧ್ಯೆ ಬೆಂಗಳೂರಿನಲ್ಲಿ ಸೋಂಕು ನಿಯಂತ್ರಿಸಲು ಇನ್ನು ಕೆಲ ದಿನಗಳವರೆಗೆ ಲಾಕ್ ಡೌನ್ ಮಾಡಬೇಕೆಂದು ಬಿಬಿಎಂಪಿ ಹಾಗೂ ತಜ್ಞರು ಸಲಹೆ ನೀಡಿದ್ದರು.

ಈ ಮಧ್ಯೆ, ಇಂದು ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ನೇಮಿಸಿರುವ ಅಷ್ಟಧಿಕ್ಪಾಲರ ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಮತ್ತೆ ಲಾಕ್ ಡೌನ್ ಮಾಡುವ ಬಗ್ಗೆ ಒಲವು ವ್ಯಕ್ತಪಡಿಸಿಲ್ಲ. ಕೊರೊನಾ ಹಾಟ್ ಸ್ಪಾಟ್ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚು ಪೊಲೀಸರನ್ನು ನಿಯಂತ್ರಿಸಿ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ, ಕೇವಲ ಲಾಕ್ ಡೌನ್ ನಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಆರ್ಥಿಕ ಪರಿಸ್ಥಿತಿ ಕುರಿತು ಗಮನ ಹರಿಸಬೇಕಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಬೆಂಗಳೂರಿನಲ್ಲಿ ಅಂಬುಲೆನ್ಸ್ ಗಳ ಕೊರತೆ ಇದ್ದು, ನಾಳೆ ಅಗತ್ಯವಿರುವಷ್ಟು ಅಂಬುಲೆನ್ಸ್ ಗಳನ್ನು ಖರೀದಿಸಿ, ವಾರ್ಡ್ವಾರು ಅಂಬುಲೆನ್ಸ್ ಗಳನ್ನು ವಿಂಗಡಿಸಿ ಎಂತಲೂ ಸಿಎಂ ಸೂಚಿಸಿದರು. ಅಲ್ಲದೇ, ಕೊರೊನಾ ನಿಯಂತ್ರಿಸಲು ನೇಮಿಸಿರುವ ಅಷ್ಟದಿಕ್ಪಾಲಕರಿಗೆ ನಿಮ್ಮ ವಲಯಗಳಲ್ಲಿರುವ ಸೋಂಕಿತಕರನ್ನು ಅಲ್ಲಿಯೇ ಇರಿಸಿ, ನಿಮ್ಮ ವಲಯದಲ್ಲೇ ಇರಿಸಿ ಚಿಕಿತ್ಸೆ ನೀಡಿ. ಒಂದು ವೇಳೆ, ನಿಮ್ಮ ವ್ಯಾಪ್ತಿಯಲ್ಲಿ ಸೋಂಕಿತರು ಹೆಚ್ಚಾದರೆ ಅವರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿ, ನಿಮ್ಮ ವಲಯಗಳಲ್ಲಿ ಉಂಟಾಗುವ ಅನಾಹುತಕ್ಕೆ ನೀವೇ ಹೊಣೆ ಎಂದು ಸಿಎಂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ….

LEAVE A REPLY

Please enter your comment!
Please enter your name here