Saturday November 11 2017

Follow on us:

Contact Us
    492

ಯುವತಿಯ ಕಿರುಕುಳ ತಡೆಯಲಾರದೇ ಪೊಲೀಸ್ ಕೇಸ್ ದಾಖಲಿಸಿದ ನಟ ವರುಣ್ ಧವನ್!

ನ್ಯೂಸ್ ಕನ್ನಡ ವರದಿ(11.11.2017): ಸರ್ವೇಸಾಮಾನ್ಯವಾಗಿ ಯುವಕರ ಕಿರುಕುಳವನ್ನು ತಡೆಯಲಾರದೇ ಯುವತಿಯರು ಪೊಲೀಸ್ ಕೇಸ್ ದಾಖಲಿಸುವಂತಹ ಹಲವು ಪ್ರಕರಣಗಳನ್ನು ನೋಡುತ್ತಿರುತ್ತೇವೆ. ಇದೀಗ ಯುವಕಿಯ ಕುರುಕುಳ ತಡೆಯಲಾಗುತ್ತಿಲ್ಲವೆಂದು ಬಾಲಿವುಡ್ ನ ಪ್ರಖ್ಯಾತ ನಟ ವರುಣ್ ಧವನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಯುವತಿಯೊಬ್ಬಳು ತಮಗೆ ಬೆದರಿಕೆ ಹಾಕುತ್ತಿದ್ದಾಳೆಂದು ಮುಂಬೈನ ಸಾಂತಾಕ್ರೂಸ್ ಪೊಲೀಸ್ ಠಾಣೆಯಲ್ಲಿ ವರುಣ್ ಅವರು ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಕೆಲ ದಿನಗಳಿಂದ ಮಹಿಳೆಯೊಬ್ಬರು ನನ್ನ ಮೊಬೈಲ್ ಸಂಖ್ಯೆಗೆ ಕರೆ ಹಾಗೂ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಆಕೆಯ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ, ಸತ್ತು ಹೋಗುತ್ತೇನೆಂದು ಆಕೆ ಬೆದರಿಕೆ ಹಾಕುತ್ತಿದ್ದಾಳೆಂದು ದೂರಿನಲ್ಲಿ ವರುಣ್ ಅವರು ಹೇಳಿಕೊಂಡಿದ್ದಾರೆ. ಅದಲ್ಲದೆ ಸೈಬರ್ ಪೊಲೀಸರಿಗೂ ವರುಣ್ ಅವರು ದೂರು ನೀಡಿದ್ದಾರೆ.

ವ್ಯಕ್ತಿಯೊಬ್ಬರು ನನಗೆ ಪತ್ರ ಬರೆಯುತ್ತಿದ್ದು, ಆ ಮಹಿಳೆಯೊಂದಿಗೆ ಮಾತನಾಡುವಂತೆ ತಿಳಿಸುತ್ತಿದ್ದಾರೆ. ಒಂದು ವೇಳೆ ಮಹಿಳೆಯೊಂದಿಗೆ ಮಾತನಾಡದಿದ್ದರೆ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಂದು ಬೆದರಿಕೆ ಹಾಕುತ್ತಿದ್ದಾರೆಂದು ವರಣ್ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಾವು ಮೂತ್ರಮಾಡಿದರೆ ಸಾಕು, ವೀರಶೈವರು ಕೊಚ್ಚಿಕೊಂಡು ಹೋಗುತ್ತಾರೆ: ಕೂಡಲಸಂಗಮ ಶ್ರೀಗಳಿಂದ ಮತ್ತೆ ವಿವಾದ!

ಮುಂದಿನ ಸುದ್ದಿ »

ಬಾಲಿವುಡ್ ನಟ ಶಾರೂಖ್ ಖಾನ್ ಗೆ ಧಮ್ಕಿ ಹಾಕಿದ ಬಿಜೆಪಿ ಎಂಎಲ್’ಸಿ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×