Monday November 13 2017

Follow on us:

Contact Us
    158

ಸಿನಿಮಾವೇ ನನ್ನ ಮೊದಲ ಆದ್ಯತೆ, ರಾಜಕೀಯವಲ್ಲ: ನಟ ಉಪೇಂದ್ರ

ನ್ಯೂಸ್ ಕನ್ನಡ (13.11.2017): ಸಿನಿಮಾ ರಂಗದಲ್ಲಿ ರಿಯಲ್ ಸ್ಟಾರ್ ಆಗಿ ಮೆರೆಯುತ್ತಿರುವ ಉಪೇಂದ್ರ ಕರ್ನಾಟಕದಲ್ಲಿ ಹೊಸದೊಂದು ಪಕ್ಷವನ್ನು ಸ್ಥಾಪಿಸಿದ್ದರು. ಹಲವು ಬೆಂಬಲಗಳೂ ವ್ಯಕ್ತವಾಗಿತ್ತು. ಹಲವು ವ್ಯಕ್ತಿಗಳು ಇದು ಉಪೇಂದ್ರ ತಮ್ಮ ಸಿನಿಮಾ ಜೀವನಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಹೇಳಿದ್ದರು ಅಲ್ಲದೇ ಉಪೇಂದ್ರ ಸಿನಿಮಾ ರಂಗವನ್ನು ಬಿಡುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು. ಇದೀಗ ಈ ಕುರಿತು ಮಾತನಾಡಿರುವ ಉಪೇಂದ್ರ, ಸಿನಿಮಾ ಯಾವತ್ತೂ ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಒಬ್ಬ ನಿರ್ದೇಶಕನಾಗಿ ತೆರೆಯ ಮೇಲೆ ಅಭಿಮಾನಿಗಳು ಉಪೇಂದ್ರ ಅವರನ್ನು ನೋಡಲು ಬಯಸುತ್ತಾರೆ, ರಾಜಕೀಯ ಸೇರಿದ ಮೇಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಉಳಿದ ಕೆಲವು ಕಲಾವಿದರು ನಮ್ಮ ಇದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ರಾಜಕೀಯ ಪ್ರವೇಶಿಸುವ ಮುನ್ನ ಹಾಗೂ ನಂತರ ಜನತೆಗಾಗಿ ಏನನ್ನಾದರೂ ಮಾಡಲು ಬಯಸಿದ್ದೆ, ಆದರೆ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸ್ವಲ್ಪ ಕಾಲಾವಕಾಶದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ನಾನು ಸಿನಿಮಾ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಆದರೆ ನನಗೆ ಸ್ವಲ್ಪ ಬಿಡುವು ಬೇಕು,ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂಬ ವಾಕ್ಯದಂತೆ ನಡೆಯುತ್ತೇನೆ, ಜನರಿಗೆ ನಾನು ಬೇಕಾದರೇ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ, ನಟನೆ ಬೇಕೆಂದರೆ ಅದಕ್ಕಾಗಿಯೂ ನಾನು ವಾಪಸ್ ಬರುತ್ತೇನೆ ಎಂದು ಉಪೇಂದ್ರ ಹೇಳುತ್ತೇನೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಾನು ಭಾರತ ತಂಡದ ಕ್ರಿಕೆಟಿಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದೆ ಎಂದ ಅನುಷ್ಕಾ ಶೆಟ್ಟಿ!

ಮುಂದಿನ ಸುದ್ದಿ »

ಪಡುಬಿದ್ರಿ; ಸುಜ್ಲಾನ್ ಕಂಪನಿ ಲಾಕೌಟ್ 600 ಕ್ಕೂ ಅಧಿಕ ಕಾರ್ಮಿಕರು ಮನೆಗೆ

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×