Tuesday June 6 2017

Follow on us:

Contact Us

ಸುನಿಲ್ ಗ್ರೋವರ್ ಯಾವಾಗ ಬೇಕಾದರೂ ಶೋಗೆ ಮರಳಬಹುದು: ಕಪಿಲ್ ಶರ್ಮಾ

ನ್ಯೂಸ್ ಕನ್ನಡ ವರದಿ-(6.6.17) ಕಪಿಲ್ ಶರ್ಮಾ ಮತ್ತುಡಾಕ್ಟರ್ ಮಶೂರ್ ಗುಲಾಟಿ ಯಾನೆ ಸುನಿಲ್ ಗ್ರೋವರ್ ಮತ್ತೆ ಒಂದಾಗಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ. ಕಪಿಲ್ ಶರ್ಮಾ ಸ್ವತಃ ಒಂದಾಗಿ ಶೋ ನಡೆಸಲು ಬಯಸುತ್ತಾರೆ. ಕಪಿಲ್ ಅವರ ಮಾಜಿ ಸಹಯೋಗಿ ಸುನಿಲ್ ಗ್ರೋವರ್ ಕಪಿಲ್ ರೊಂದಿಗೆ ಮುನಿಸಿಕೊಂಡು ತಂಡದಿಂದ ಹೊರಬಂದಿದ್ದು, ತದನಂತರ ಕಾಮಿಡಿ ನೈಟ್ ವಿತ್ ಕಪಿಲ್ ಶೋನ ಟಿಆರ್ಪಿ ಕಡಿಮೆಯಾಗಿತ್ತು.

ಆ ಬಳಿಕ ತಂಡದ ಇತರ ಸದಸ್ಯರಾದ ಅಲಿ ಅಸ್ಗರ್ ಮತ್ತು ಚಂದನ್ ಪ್ರಭಾಕರ್ ಅವರು ತಂಡವನ್ನು ತೊರೆದಿದ್ದರು. ಕಪಿಲ್ ತಮ್ಮ ಉಳಿದ ತಂಡಗಳ ಜೊತೆಸೇರಿ ಪ್ರದರ್ಶನವನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದರೂ, ಅಭಿಮಾನಿಗಳು ಕಪಿಲ್ ಮತ್ತು ಸುನೀಲ್ ಅವರನ್ನು ಒಂದಾಗಿ ನೋಡಲು ಬಯಸುತ್ತಾರೆ.

ಇತ್ತೀಚೆಗೆ ಕಪಿಲ್ ರವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವೇಳೆ ಭಾರತಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ಸುನಿಲ್ ಗ್ರೋವರ್ ರನ್ನು ಮರಳಿ ಕರೆತರುವಂತೆ ಕೋರಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಕಪಿಲ್, ಅವರು ಯಾವಾಗ ಬೇಕಾದರೂ ಶೋಗೆ ಮರಳಬಹುದು. ನಾನವರಿಗೆ ಬಹಳ ಬಾರಿ ಹೇಳಿದ್ದೇನೆ ಎಂದು ಉತ್ತರಿಸಿದ್ದರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹೋಮ್ ಗಾರ್ಡ್‍ನ ಪ್ರಜ್ಞೆತಪ್ಪಿಸಿ ಮೂವರು ಬಾಲಕೈದಿಗಳು ಜೈಲಿನಿಂದ ಪರಾರಿ!

ಮುಂದಿನ ಸುದ್ದಿ »

ಎಸ್ಸೆಸ್ಸೆಲ್ಸಿ ಪಾಸ್ ಆಗುವ ಪ್ರತಿ ವಿದ್ಯಾರ್ಥಿನಿಯರಿಗೂ 10ಸಾವಿರ ರೂ. ಬಹುಮಾನ!

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×