Tuesday August 8 2017

Follow on us:

Contact Us

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಿಚ್ಚ ಸುದೀಪ್ ಪತ್ರ ಬರೆದಿದ್ದೇಕೆ ಗೊತ್ತೇ?

ನ್ಯೂಸ್ ಕನ್ನಡ ವರದಿ-(08.08.17): ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಪತ್ರ ಬರೆದಿದ್ದ ಕಿಚ್ಚ ಸುದೀಪ್ ಇದೀಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದಿದ್ದಾರೆ. ಈ ಬಾರಿ ಅವರು ಬರೆದ ಪತ್ರದಲ್ಲಿ ನಾಡಿನಲ್ಲಿರುವ ಕೆರೆಗಳನ್ನು ಉಳಿಸಿ ಎಂದು ಮನವಿ ಮಾಡಿದ್ದಾರೆ. ಅವರು ಬರೆದ ಪತ್ರದ ಸಾರಾಂಶ ಈ ಕೆಳಗಿನಂತಿದೆ.

ಗೌರವಾನ್ವಿತ ಮುಖ್ಯಮಂತ್ರಿಗಳು

ಕರ್ನಾಟಕ

ಮಾನ್ಯರೆ,

ನಮ್ಮ ಕೆರೆಗಳೆ ನಮಗೆ ಜೀವನಾಧಾರ. ಪರಿಸರದಿಂದಲೇ ನಮ್ಮೆಲ್ಲರ ಜೀವನ ಹಾಗೂ ಅದರಿಂದಲೇ ಉಸಿರಾಡುತ್ತಿದ್ದೇವೆ.  ಪ್ರತಿಯೊಂದು ಮರ,ಗಿಡ,ಪಕ್ಷಿಗಳು, ಪ್ರಾಣಿಗಳು ಹಾಗೂ ಮಾನವರು ಪರಿಸರದಿಂದ ಬದುಕುತ್ತಿದ್ದಾರೆ. ಆದ ಕಾರಣದಿಂದ ಕೆರೆಗಳನ್ನು ನಾಶಪಡಿಸಿದರೆ ನಮ್ಮ ಪ್ರಕೃತಿಯನ್ನು ನಾಶಪಡಿಸಿದಂತೆ.

ಹೃತ್ಪೂರ್ವಕವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೆಂದರೆ, ಸರ್ಕಾರ ಬತ್ತುತ್ತಿರುವ ಕೆರೆಗಳ ಡಿನೋಟಿಫಿಕೇಷನ್ ಬಗ್ಗೆ ಮರುಪರಿಶೀಲಿಸಿ. ಪ್ರಕೃತಿ ತಾಯಿಯ ಕೋಪಕ್ಕೆ ತುತ್ತಾಗುವುದನ್ನು ನಾವು ತಡೆಯೋಣ. ನಾವು ಈಗಾಗಲೇ ಸಾಕಷ್ಟು ಕಳೆದುಕೊಂಡಿದ್ದೇವೆ. ಇರುವ ಕೆರೆಗಳನ್ನು ನಾವು ಉಳಿಸಿಕೊಳ್ಳೋಣ.

ನಾನು ಒಬ್ಬ ನಟನಾಗಿ ಈ ಪತ್ರ ಬರೆಯದೆ. ಒಬ್ಬ ಸಾಮಾನ್ಯ ವ್ಯಕ್ತಿಯ ಪರವಾಗಿ ಪತ್ರ ಬರೆಯುತ್ತಿದ್ದೇನೆ. ಈ ರಾಜ್ಯದೆಡೆಗೆ, ನಗರದೆಡೆಗೆ, ಇಲ್ಲಿ ವಾಸಿಸುವ ಜನರು ಮತ್ತು ಪ್ರಕೃತಿಯ ಮೇಲಿರುವ ಪ್ರೀತಿಯಿಂದ ಈ ಪತ್ರವನ್ನು ಕಳಕಳಿಯಿಂದ ಬರೆದಿದ್ದೇನೆ.

ವಂದನೆಗಳೊಂದಿಗೆ

ಸುದೀಪ್

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಜೀವರಕ್ಷಣಾ ಕಾರ್ಯದಲ್ಲಿ ರಾಜ್ಯದಲ್ಲೇ ಕ್ರಾಂತಿ ಸೃಷ್ಟಿಸಿದ ಮಂಗಳೂರಿನ ಯುವಕರು

ಮುಂದಿನ ಸುದ್ದಿ »

ದೇಶದಲ್ಲಿನ ಕೋಮುಗಲಭೆ ಪ್ರಕರಣ: ಮೊದಲ ಸ್ಥಾನದಲ್ಲಿ ಕರ್ನಾಟಕ ಮತ್ತು ಉತ್ತರಪ್ರದೇಶ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×